Sunday, March 3, 2024

Latest Posts

ಸಚಿವ ಡಿಕೆಶಿಗೆ ಘೇರಾವ್, ಕಾರಿನಿಂದ ಕೆಳಕ್ಕಿಳಿಸಿ ತರಾಟೆ…!

- Advertisement -

ಚಿಕ್ಕೋಡಿ: ಡ್ಯಾಂ ವೀಕ್ಷಣೆಗೆಂದು ಬಂದಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗೆ ಜನರು ಘೇರಾವ್ ಹಾಕಿ ತರಾಟೆಗೆ ತೆಗೆದುಕೊಂಡ ಘಟನೆ ಶಿರಗುಪ್ಪಿಯಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಕೃಷ್ಣಾ ನದಿಯ ಬ್ಯಾರೇಜ್ ವೀಕ್ಷಣೆಗೆ ಬಂದಿದ್ದ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಗೆ ರೈತರು ಘೇರಾವ್ ಹಾಕಿದ್ದಾರೆ. ಅಲ್ಲದೆ ಡಿಕೆಶಿಯವರನ್ನು ಕಾರಿನಿಂದ ಕೆಳಕ್ಕಿಳಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.

2 ತಿಂಗಳ ಹಿಂದೆ ಕೃಷ್ಣಾ ನದಿ ಬತ್ತಿಹೋದ ಸಮಯದಲ್ಲಿ ನೀವು ಇಲ್ಲಿಗೆ ಬರಲಿಲ್ಲ. ಆದ್ರೆ ಇದೀಗ ಮಹಾರಾಷ್ಪ್ರದಿಂದ ನೀರು ಬಿಡುಗಡೆಯಾಗಿ ನದಿಗೆ ನೀರು ಬರುತ್ತಿರೋ ಸಂದರ್ಭದಲ್ಲಿ ನೋಡೋದಕ್ಕೆ ಬಂದಿದ್ದೀರಾ ಅಂತ ಪ್ರಶ್ನಿಸಿದ ರೈತರು, ಕಾವೇರಿಗೊಂದು ಕೃಷ್ಣಾ ನದಿ ವಿಚಾರಕ್ಕೊಂದು ನೀತಿನಾ, ಏಕೆ ಇಂಥಹ ತಾರತಮ್ಯ ಮಾಡುತ್ತೀರಿ ಅಂತ ಸಚಿವ ಡಿ.ಕೆ ಶಿವಕುಮಾರ್ ರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಮಧ್ಯ ಪ್ರವೇಶಿಸಿದ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ರೈತರನ್ನು ಸಮಾಧಾನ ಪಡಿಸಿದ್ರು.

ಇನ್ನು ಮಳೆಯಿಲ್ಲದೆ ಕಳೆದ 2 ತಿಂಗಳ ಹಿಂದೆ ಕೃಷ್ಣಾ ನದಿ ಬತ್ತಿ ಹೋಗಿತ್ತು. ಆದ್ರೆ ಮಹಾರಾಷ್ಟ್ರದಲ್ಲಿ ಮಳೆಯಾದ ಪರಿಣಾಮ ಅಲ್ಲಿನ ಕೋಯ್ನಾ ಡ್ಯಾಂ ನಿಂದ ಒಂದು ವಾರದಿಂದ ಪ್ರತಿದಿನ 1500 ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಆದ್ರೆ ಕಷ್ಟ ಕಾಲದಲ್ಲಿ ಇತ್ತ ತಿರುಗಿಯೂ ನೋಡದೆ ಸಚಿವರು ಇದೀಗ ನೀರು ತುಂಬಿದಾಗ ಭೇಟಿ ನೀಡಿದ್ದು ರೈತರ ಆಕ್ರೋಶಕ್ಕೆ ಕಾರಣವಾಯ್ತು.

ಯಾದಗಿರಿಗೆ ಸಿಎಂ ನೀಡದ ಆ ಭರ್ಜರಿ ಆಫರ್ ಏನು..?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=3KeJni-Pkb8

- Advertisement -

Latest Posts

Don't Miss