Wednesday, September 11, 2024

Latest Posts

ನಮ್ಮ ಭೂಮಿಯನ್ನು ನೀಡಲು ಸಾಧ್ಯವಿಲ್ಲವೆಂದು ಪಂಜಿನ ಮೆರವಣಿಗೆ ನಡೆಸಿದ ರೈತರು

- Advertisement -

Bengaluru News: ದೇವನಹಳ್ಳಿ: ಕೆ.ಐ.ಎ.ಡಿ.ಬಿ ಗೆ ಭೂಸ್ವಾಧಿನ ಪ್ರಕ್ರಿಯೆ ಕೈ ಬಿಡಲು ಒತ್ತಾಯಿಸಿ, ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರು ಪಂಜಿನ ಮೆರವಣಿಗೆ ನಡೆಸಿದ್ದಾರೆ.

1777 ಎಕರೆ ಕೃಷಿ ಭೂಮಿಯನ್ನು ಕೈಗಾರಿಕೆಗಳ ನಿರ್ಮಾಣಕ್ಕೆ ವಶಕ್ಕೆ ಪಡೆಯುತ್ತಿರುವ ಹಿನ್ನೆಲೆ, ಯಾವುದೇ ಕಾರಣಕ್ಕೂ ನಾವು ನಮ್ಮ ಭೂಮಿ ನೀಡಲು ಸಾಧ್ಯವಿಲ್ಲ ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ. ಕಳೆದ 867 ದಿನಗಳಿಂದ ಈ ಹೋರಾಟ ನಡೆಯುತ್ತಿದ್ದು, ಹದಿಮೂರು ಹಳ್ಳಿಗಳ ರೈತರು ಕುಟುಂಬಸ್ಥರು ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಸುಮಾರು ಎರಡು ಕಿಲೋಮೀಟರ್ ಗೂ ಹೆಚ್ಚು ಪಂಜಿನ ಮೆರವಣಿಗೆ ನಡೆಸಿ ರೈತರು ಪ್ರತಿಭಟಿಸಿದ್ದಾರೆ.

- Advertisement -

Latest Posts

Don't Miss