ಜಿಲ್ಲಾಧಿಕಾರಿ ಕಚೇರಿ ತಲುಪಿದ ರೈತರ ಪ್ರತಿಭಟನೆ.

ಮಂಡ್ಯ: ರೈತರ ಬೇಡಿಕೆ ಈಡೇರಿಸುತ್ತಿಲ್ಲವೆಂದು ಸರ್ಕಾರದ ವಿರುದ್ಧ ಮಂಡ್ಯದಲ್ಲಿ ರೈತರು ಸಿಎಂ ಅಣಕು ಶವಯಾತ್ರೆ‌  ಮಾಡಿದ್ದಾರೆ. ಮಂಡ್ಯದ ಸಂಜಯ್ ವೃತ್ತದಿಂದ ಡಿಸಿ ಕಚೇರಿ ವರೆಗೆ ಸಿಎಂ ಅಣುಕು ಶವಯಾತ್ರೆ ನಡೆಸಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕಬ್ಬಿನ ಬೆಲೆ ಏರಿಕೆ ಮಾಡಿ, ಹಾಲಿನ ದರ ಏರಿಕೆ ಮಾಡಿ ಎಂದು ರೈತರು 3 ದಿನದಿಂದ ಧರಣಿ ಕುಳಿತಿದ್ದಾರೆ.  ಪ್ರತಿ ಟನ್ ಕಬ್ಬಿಗೆ 4,500 ರೂ, ಹಾಲಿನ ದರ ಪ್ರತಿ ಲೀ ಗೆ 40 ರೂ ಮಾಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ವಿಭಿನ್ನ ಕಥಾಹಂದರವುಳ್ಳ ಚಿತ್ರ ‘2ND ಲೈಫ್’

ಪೊಲೀಸರ ಸರ್ಪಗಾವಲು ದಾಟಿ, ಬ್ಯಾರಿಕೇಡ್ ಕಿತ್ತೊಗೆದು ಪ್ರತಿಭಟನೆ ಮುಂದುವರೆಸಿದರು. ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಸುನೀತಾ ಪುಟ್ಟಣ್ಣಯ್ಯ, ಜಿಲ್ಲಾಧ್ಯಕ್ಷ ಕೆಂಪೂಗೌಡ, ಮಧುಚಂದನ್ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ನೂರಾರು ಜನ ರೈತರು ಭಾಗಿಯಾಗಿದ್ದಾರೆ.

ಸಿಎಂ ಅಣಕು ಶವಯಾತ್ರೆ ಮಾಡಿ ಪ್ರತಿಭಟಿಸುತ್ತಿರುವ ಮಂಡ್ಯ ರೈತರು

ಇಂಡೋನೇಷ್ಯಾ, ಜಿ20 ಶೃಂಗಸಭೆ, ದಿನ 2 : ಇಂದು ಯುಕೆ ರಿಷಿ ಸುನಕ್ ಮತ್ತು ಇತರ ನಾಯಕರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿರುವ ಮೋದಿ

About The Author