www.karnatakatv.net :ಹುಬ್ಬಳ್ಳಿ: ನಗರದ ಖಾಸಗಿ ಹೋಟೆಲ್ ನಲ್ಲಿ ಯುವಕ ಯುವತಿಯರ ಫ್ಯಾಷನ್ ಶೋ ನಡೆಯಿತು. ಜಗಮಗಿಸುವ ಬಟ್ಟೆಗಳನ್ನು ತೊಟ್ಟು ಮಿಂಚುತ್ತಿರುವ ಯುವಕ-ಯುವತಿಯರನ್ನು ನೋಡಿ ಹುಬ್ಬಳ್ಳಿ ಜನತೆ ಖುಷಿಯನ್ನು ವ್ಯಕ್ತ ಪಡಿಸಿದ್ರು.
ಹೌದು, ಹುಬ್ಬಳ್ಳಿಯ ಖಾಸಗಿ ಹೊಟೇಲ್ ನಲ್ಲಿ ಪ್ರಮಥ್ ಸ್ಟಾರ್ ಕಂಪನಿ ಇಂಟರ್ನ್ಯಾಷನಲ್ ಫ್ಯಾಷನ್ ಶೋ ಹಮ್ಮಿಕೊಂಡಿತ್ತು. ಕೊರೊನಾ ಎರಡನೇ ಅಲೆ ಹಾವಳಿಯಿಂದ ರೋಸಿ ಹೋಗಿದ್ದ ಮಾಡೆಲ್ ಗಳು, ಎರಡನೇ ಅಲೆಯಿಂದ ಪರದಾಟ ನಡೆಸಿದ್ದರು. ಸರಿಯಾದ ವೇದಿಕೆ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಸರ್ಕಾರ ಲಾಕ್‌ಡೌನ್ ತೆರವುಗೊಳಿಸಿದ್ದರಿಂದ ಎಲ್ಲ ಚಟುವಟಿಕೆಗಳು ಆರಂಭವಾಗಿವೆ. ಹೀಗಾಗಿ ಹುಬ್ಬಳ್ಳಿಯ ಪ್ರಮಥ್ ಸ್ಟಾರ್ ಕಂಪನಿ ಆಯೋಜನೆ ಮಾಡಿದ್ದ ಫ್ಯಾಷನ್ ಶೋ ನಲ್ಲಿ, ವಿವಿಧ ರಾಜ್ಯದ ಹಾಗೂ ಉತ್ತರ ಕರ್ನಾಟಕ ಭಾಗದ ಮಾಡೆಲ್ ಗಳು ಪಾಲ್ಗೊಂಡು, ಭಿನ್ನ ವಿಭಿನ್ನ ವಾಕ್ ಗಳನ್ನು ಮಾಡಿ ಎಂಜಾಯ್ ಮಾಡಿದಲ್ಲದೆ ಪ್ರೇಕ್ಷಕರ ಮನ ಗೆದ್ದರು.
ಹುಬ್ಬಳ್ಳಿಯ ಪ್ರಮಥ್ ಸ್ಟಾರ್ ಕಂಪನಿ ಫ್ಯಾಷನ್ ಶೋ ಆಯೋಜಿಸಿರುವ ಫ್ಯಾಷನ್ ಶೋದಲ್ಲಿ ದೇಶದ ವಿವಿಧ ರಾಜ್ಯದ ಯುವಕ, ಯುವತಿಯರು ಭಾಗವಹಿಸಿ ವೆಸ್ಟರ್ನ್, ಕಲ್ಚರಲ್ ಸೇರಿದಂತೆ ಹಲವು ಬಗೆಯ ಉಡುಗೆಗಳನ್ನು ತೊಟ್ಟು ವೇದಿಕೆಯಲ್ಲಿ ಮಿಂಚು ಹರಿಸಿದರು.ಎರಡನೇ ಅಲೆಯ ಬಳಿಕ ಮೊದಲ ಫ್ಯಾಷನ್ ಶೋ ಇದಾಗಿದ್ದು, 40 ಕ್ಕೂ ಹೆಚ್ಚು ಮಾಡೇಲ್ ಗಳು ಈ ಇವೆಂಟ್ ನಲ್ಲಿ ಪಾಲ್ಗೊಂಡಿದ್ದರು. ಯುವಕ-ಯುವತಿಯರು ಚನ್ನಾಗಿ ಬಟ್ಟೆ ತೊಟ್ಟು ಫ್ಯಾಷನ್ ಶೋ ದಲ್ಲಿ ವಾಕ್ ಮಾಡುತ್ತಿದ್ದರೆ, ಇತ್ತ ಮಾಡೆಲ್ ಗಳ ಝಲಕ್ ನೋಡಿ ಅವಳಿ ನಗರದ ಜನತೆ ಚಪ್ಪಾಳೆ ತಟ್ಟಿ, ಸಿಳ್ಳೆ ಹೊಡೆದು ಸಂಭ್ರಮಿಸಿದ್ದು ವಿಶೇಷವಾಗಿತ್ತು.
ಒಟ್ಟಾರೆ ಕೊರೊನಾ ಎಂಬ ಮಹಾಮಾರಿಯಿಂದ ಮಂಕಾಗಿದ್ದ ಫ್ಯಾಷನ್ ಲೋಕ ಈಗ ಮತ್ತೇ ಜಗಮಗಿಸುತ್ತಿರುವುದು ಮಾಡೆಲ್ ಹಾಗೂ ಆಯೋಜಕರ ಮಂದಹಾಸ ಮೂಡಿದೆ.
ಕರ್ನಾಟಕ ಟಿವಿ-ಹುಬ್ಬಳ್ಳಿ