ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಇತ್ತೀಚೆಗೆ ಹೊಸ ಮಾರ್ಗಸೂಚಿಗಳನ್ನ ಪ್ರಕಟಿಸಿದೆ. ಫಾಸ್ಟ್‌ಟ್ಯಾಗ್ ತಪ್ಪು ಬಳಕೆ ಮಾಡುವವರ ವಿರುದ್ಧ ಈಗ ಕಟ್ಟುನಿಟ್ಟಾದ ಕ್ರಮ ಜಾರಿಯಾಗುತ್ತಿದೆ.
ಇತ್ತೀಚೆಗೆ, ಕೆಲವರು ಫಾಸ್ಟ್‌ಟ್ಯಾಗ್ ಅಳವಡಿಸಿಕೊಂಡರೂ ಅದನ್ನು ಸರಿಯಾಗಿ ಅಂಟಿಸದೆ ವಾಹನದಲ್ಲಿ ಇಟ್ಟುಕೊಳ್ಳುತ್ತಿರುವುದು ಕಂಡು ಬಂದಿದೆ. ಇವು ‘ಲೂಸ್ ಫಾಸ್ಟ್‌ಟ್ಯಾಗ್’ ಎಂದೇ ಕರೆಯಲ್ಪಡುತ್ತವೆ.
ಅಂದರೆ — ಟೋಲ್ ಪ್ಲಾಜಾಗಳಲ್ಲಿ ಸ್ಕ್ಯಾನ್ ಆಗದೆ ಟೋಲ್ ವಿಳಂಬವಾಗುತ್ತೆ, ಟೋಲ್ ಕಲೆಕ್ಷನ್ ಸರಿಯಾಗಿ ಆಗಲ್ಲ, ಇತರೆ ವಾಹನಗಳಿಗೆ ವಿಳಂಬ, ಶಬ್ದ, ಗೊಂದಲ ಉಂಟಾಗುತ್ತಿದೆ. ಈ ಸಮಸ್ಯೆ ನಿವಾರಣೆಗೆ NHAI ಈಗ ಗಂಭೀರ ಕ್ರಮಕ್ಕೆ ಮುಂದಾಗಿದೆ.
ಜುಲೈ 2024ರಲ್ಲಿ, ಸಚಿವಾಲಯ ಅಧಿಕೃತ ಮಾರ್ಗಸೂಚಿಗಳನ್ನು ಹೊರಡಿಸಿದೆ. ಫಾಸ್ಟ್‌ಟ್ಯಾಗ್ ಅನ್ನು ವಾಹನಗಳ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಒಳಗಿನಿಂದ ಅಂಟಿಸದಿದ್ದರೆ, ಅಂತಹ ವಾಹನಗಳಿಂದ ಡಬಲ್ ಟೋಲ್ ಶುಲ್ಕ ಸಂಗ್ರಹಿಸಲಾಗುತ್ತದೆ.
ಈಗ ಹೊಸದಾಗಿ ಲೂಸ್ ಫಾಸ್ಟ್‌ಟ್ಯಾಗ್ ಇದ್ದರೆ ಟೋಲ್ ಏಜೆನ್ಸಿಗಳು ಮತ್ತು ರಿಯಾಯಿತಿದಾರರು ಅದನ್ನು ತಕ್ಷಣ NHAIಗೆ ವರದಿ ಮಾಡಬೇಕು. ಆ ಟ್ಯಾಗ್ ಅನ್ನು ತಕ್ಷಣ ಕಪ್ಪುಪಟ್ಟಿ ಅಂದ್ರೆ blacklist ಗೆ ಸೇರಿಸಲಾಗುತ್ತದೆ.
ನಂತರ ಅದನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
ಈ ಘೋಷಣೆಯ ಉದ್ದೇಶ ಏನು ಅಂದ್ರೆ ಸುಗಮವಾದ ಟೋಲಿಂಗ್ ವ್ಯವಸ್ಥೆ ಹಹು ವಾರ್ಷಿಕ ಪಾಸ್ ವ್ಯವಸ್ಥೆ. ಹೌದು ಆಗಸ್ಟ್ 15 ರಿಂದ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಖಾಸಗಿ ವಾಹನ ಮಾಲೀಕರಿಗೆ ವಾರ್ಷಿಕ FASTag ಪಾಸ್ ಪರಿಚಯಿಸುತ್ತಿದೆ.
ಆಗಸ್ಟ್ 15 ರಿಂದ 3,000 ರೂ ಬೆಲೆಯ ವಾರ್ಷಿಕ FASTag ಪಾಸ್ ಅನ್ನು ಹೊರತರಲಿದೆ. 1 ವರ್ಷ ಅಥವಾ 200 ಟ್ರಿಪ್‌ಗಳವರೆಗೆ ಪ್ರಯೋಜನ ಪಡೆಯಬಹುದಾಗಿದೆ. ಇದು ಹೆಚ್ಚು ಪ್ರಯಾಣಿಸುವವರಿಗಾಗಿ ಹೆಚ್ಚು ಲಾಭದಾಯಕವಾಗಲಿದೆ.