Saturday, July 27, 2024

Latest Posts

ನೇಹಾ ಕೊಂದ ಫಯಾಜ್” 6ದಿನ ಸಿಐಡಿ ಕಸ್ಟಡಿಗೆ

- Advertisement -

Hubli News: ಹುಬ್ಬಳ್ಳಿ: ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠಳನ್ನ ಹತ್ಯೆ ಮಾಡಿ ಧಾರವಾಡ ಕಾರಾಗೃಹದಲ್ಲಿರುವ ಆರೋಪಿ ಫಯಾಜ್ ಕೊಂಡಿಕೊಪ್ಪನನ್ನ ಆರು ದಿನಗಳವರೆಗೆ ಸಿಐಡಿ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಬಿವಿಬಿ ಕ್ಯಾಂಪಸ್‌ನಲ್ಲಿ ನಡೆದ ಹತ್ಯೆಗೆ ಸಂಬಂಧಿಸಿದ ಪ್ರಕರಣವನ್ನ ರಾಜ್ಯ ಸರಕಾರ ಸಿಐಡಿಗೆ ನೀಡಿದ್ದರಿಂದ, ಆರೋಪಿಯ ವಿಚಾರಣೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಇದೇ ಕಾರಣದಿಂದ ಹುಬ್ಬಳ್ಳಿಯ ಒಂದನೇಯ ಅಧಿಕ ದಿವಾಣಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 15 ದಿನಗಳ ಕಸ್ಟಡಿಗೆ ಕೊಡುವಂತೆ ಸಿಐಡಿ ಅಧಿಕಾರಿಗಳು ಕೋರಿದ್ದರು. ಈ ಹಿನ್ನೆಲೆಯಲ್ಲಿ ಆರು ದಿನ ಕಸ್ಟಡಿಗೆ ನೀಡಲಾಗಿದೆ.

ನೇಹಾ ಹಿರೇಮಠ ಹತ್ಯೆಯ ಹಿಂದೆ ಬೇರೆಯವರು ಇದ್ದಾರೆ ಎಂಬ ಆರೋಪವನ್ನ ನೇಹಾಳ ತಂದೆ ನಿರಂಜನ ಹಿರೇಮಠ ಮಾಡಿದ್ದರು.

ಹಿಜಬ್ ಧರಿಸಿದ ಮಹಿಳೆಯನ್ನು ಭಾರತದ ಪ್ರಧಾನಿಯನ್ನಾಗಿ ನೋಡಬಯಸುತ್ತೇನೆ: ಒವೈಸಿ

ನಾಲಾಯಕ್ ಪದ ಬಳಕೆ: ವಿಯಜೇಂದ್ರ ವಿರುದ್ಧ ಮರಾಠ ಸಮೂದಾಯದಿಂದ ಪ್ರತಿಭಟನೆ

ಕರ್ನಾಟಕದಲ್ಲಿ 18 ರಿಂದ 20 ಸೀಟ್ ಕಾಂಗ್ರೆಸ್ ಗೆಲ್ಲೋದು ಗೊತ್ತಾದ ಮೇಲೆ ಇಂತಹ ಸುಳ್ಳು ಹೇಳ್ತಾ ಹೋಗ್ತಿದ್ದಾರೆ: ಕೋನರೆಡ್ಡಿ

- Advertisement -

Latest Posts

Don't Miss