Tuesday, October 14, 2025

Latest Posts

ತಿಮ್ಮಪ್ಪನ ಸನ್ನಿಧಿಯಲ್ಲಿ ಪ್ರವಾಹದ ಭೀತಿ.

- Advertisement -

ಆಂದ್ರ ಪ್ರದೇಶ; ತಮಿಳುನಾಡಿನಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ಮಳೆ ಇದೀಗ ಕರ್ನಾಟಕ ಹಾಗೂ ಆಂಧ್ರ ಪ್ರದೇಶದಲ್ಲಿ ತನ್ನ ರುದ್ರನರ್ತನವನ್ನು ತೋರುತ್ತಿದೆ. ಅದರಲ್ಲೂ ತಿರುಪತಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಪ್ರವಾಹದ ಸ್ಥಿತಿ ಉಂಟಾಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವು ತಿರುಪತಿ ತಿಮ್ಮಪ್ಪನಿಗೂ ಸಂಕಷ್ಟ ತಂದೊಡ್ಡಿದೆ. ಪರಿಣಾಮ ತಿರುಪತಿ ದೇವಾಲಯವನ್ನು ಸಂಪರ್ಕಿಸುವ ಘಾಟ್ ನಲ್ಲಿ ಭಾರೀ ಮಳೆಗೆ ಗುಡ್ಡ ಕುಸಿತ ಉಂಟಾಗಿದ್ದು. ಎರಡು ಘಾಟ್ ಗಳನ್ನ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ತಿರುಪತಿ ದೇವಾಲಯವೇ ಸಂಪೂರ್ಣವಾಗಿ ಜಲಾವೃತವಾಗಿದ್ದು, ಬೆಟ್ಟದ ಸುತ್ತಮುತ್ತಲಿನ ಜಲಪಾತಗಳು ರೌದ್ರ ರೂಪ ತಾಳಿವೆ. ನಗರದ ಪ್ರಮೂಖ ರಸ್ತೆಗಳೆಲ್ಲ ಹೊಳೆಯಂತೆ ಮಾರ್ಪಟ್ಟಿವೆ.

ಇನ್ನು ತಿರುಮಲ ಬೆಟ್ಟದ ತಪ್ಪಲಿನಲ್ಲಿರುವ ಕಪಲೇಶ್ವರ ದೇವಸ್ಥಾನದ ಬಳಿ ಬೆಟ್ಟದ ಮೇಲಿನಿಂದ ಮಳೆ ನೀರು ಜಲಪಾತದ ರೀತಿಯಲ್ಲಿ ಭೋರ್ಗರೆಯುತ್ತಿರುವ ದೃಶ್ಯಗಳು ಮೈ ಜುಮ್ಮೆನಿಸುತ್ತಿವೆ. ಸ್ವರ್ಣಮುಖಿ ನದಿಯಲ್ಲಿ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಅಕ್ಕಪಕ್ಕದ ಹಳ್ಳಿಗಳ ಜನವಸತಿ ಪ್ರದೇಶಗಳಿಗೆ ನುಗ್ಗಿದ ಪರಿಣಾಮ ಹಲವು ಹಳ್ಳಿಗಳು ಜಲಾವೃತಗೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.

- Advertisement -

Latest Posts

Don't Miss