ಧರ್ಮಸ್ಥಳದಲ್ಲಿ ಶವಹೂತಿಟ್ಟಿರುವ ಪ್ರಕರಣ ದೇಶದೆಲ್ಲಡೆ ಸಂಚಲನ ಸೃಷ್ಟಿಸಿದೆ. ದೂರುದಾರ ಗುರುತಿಸಿದ 13 ಪಾಯಿಂಟ್ ಗಳಲ್ಲಿ ಈಗಾಗಲೇ 12 ಪಾಯಿಂಟ್ ಗಳನ್ನು ಹಗೆದಿದ್ದು ಕೆಲವೂಂದರಲ್ಲಿ ಮಾನವನ ಅಸ್ಥಿಪಂಜರಗಳು ಪತ್ತೆಯಾಗಿವೆ. ಇನ್ನೂ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಇದೀಗ ಅನಾಮಿಕ ದೂರುದಾರ ತನಗೆ ಗನ್ ಮ್ಯಾನ್ ಭದ್ರತೆ ನೀಡುವಂತೆ SIT ಗೆ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಕೆಲವು ದಿನಗಳ ಹಿಂದೆ ಧರ್ಮಸ್ಥಳದಲ್ಲಿ ಪತ್ರಕರ್ತರು ಮತ್ತು ಯೂಟ್ಯೂ ಬರ್ಸ್ ಮೇಲೆ ಹಲ್ಲೆ ನಡೆಯಿತು. ಜಗಳ ತಾರಕ್ಕಕ್ಕೇರಿ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ, ಪರಿಸ್ಥಿತಿಯನ್ನು ಶಾಂತಿಗೊಳಿಸಿದ್ದರು. ಈಗಾಗಲೇ ಹೆಚ್ಚಿನ ಭದ್ರತೆಯನ್ನು ಮಾಡಲಾಗಿದೆ. ತಪ್ಪು ಮಾಡಿದವರ ಮೇಲೆ ಕ್ರಮವನ್ನು ಸಹ ತೆಗೆದುಕೊಳ್ಳಲಾಗುತ್ತಿದೆ.
ಧರ್ಮಸ್ಥಳದಲ್ಲಿ ಗಲಾಟೆ ಪ್ರಕರಣದ ಬೆನ್ನಲ್ಲೇ, ದೂರುದಾರ ತನ್ನ ಮೇಲೂ ದಾಳಿ ನಡೆಯುವ ಸಾಧ್ಯತೆ ಇರುವುದರಿಂದ, ತನಗೆ ಗನ್ ಮ್ಯಾನ್ ಭದ್ರತೆ ಒದಗಿಸುವಂತೆ ದೂರುದಾರ ಪರ ವಕೀಲರು, ಎಸ್ ಐಟಿ ತಂಡಕ್ಕೆ ಲಿಖಿತ ಮನವಿ ಮಾಡಿದ್ದಾರೆ.
ಶೋಧಕಾರ್ಯ ಮುಕ್ತಾಯವಾದ ಬಳಿಕವೂ, ತನಗೆ ಗನ್ ಮ್ಯಾನ್ ಭದ್ರತೆ ಕಲ್ಪಿಸುವಂತೆ ಎಸ್‌ಐಟಿ ಎಸ್ ಪಿ ಜಿತೇಂದ್ರ ದಯಾಮ ಮುಂದೆ ಮನವಿ ಮಾಡಿದ್ದು, ಈ ಹಿನ್ನಲೆಯಲ್ಲಿ ನಿನ್ನೆ ಶೋಧಕಾರ್ಯ ಮುಂದುವರೆಸಿಲ್ಲ ಎನ್ನಲಾಗಿದೆ. ದೂರುದಾರನಿಗೆ ಭದ್ರತೆ ಒದಗಿಸಿ ಬಳಿಕ ಶೋಧಕಾರ್ಯ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.
ವರದಿ:ರಂಜಿತ ರೇವಣ್ಣ ನಾಟನಹಳ್ಳಿ

