Mandya: ಮದ್ದೂರು: ಫೆಬ್ರವರಿ. 02 ರಂದು ಮನ್ಮುಲ್ ಚುನಾವಣೆಯನ್ನು ಜಿಲ್ಲಾಧಿಕಾರಿಗಳು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷ ಪರವಾದ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಕೃಷಿ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಕರೆ ನೀಡಿದರು.
ಈ ಚುನಾವಣೆಯಲ್ಲಿ ಯಾವುದೇ ಪಕ್ಷದ ಗುರುತು ಇರುವುದಿಲ್ಲ, ಪಕ್ಷದ ಪರವಾಗಿ ಬೆಂಬಲಿತ ವ್ಯಕ್ತಿಗಳು ಸ್ಪರ್ಧಿಸಲಿದ್ದಾರೆ. ಈಗಾಗಲೇ 6ಮಂದಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ ಹೇಳಿದರು.
ಮದ್ದೂರು ತಾಲೂಕಿನಿಂದ ಕದಲೂರು ರಾಮಕೃಷ್ಣ,ಹರೀಶ್, ಮಳವಳ್ಳಿಯಿಂದ ಕೃಷ್ಣೆಗೌಡ, ನಾಗಮಂಗಲದಿಂದ ಮಾಜಿ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಲಕ್ಷೀನಾರಾಯಣ, ಶ್ರೀರಂಗಪಟ್ಟಣದಿಂದ ಬೋರೇಗೌಡ ಸ್ಪರ್ಧೆ ಮಾಡಲಿದ್ದಾರೆ. ಮಂಡ್ಯ, ಪಾಂಡವಪುರ ತಾಲೂಕಿನ ಅಭ್ಯರ್ಥಿಗಳನ್ನು4-5 ದಿನದೊಳಗೆ ಘೋಷಣೆ ಮಾಡಲಾಗುವುದು. ಕೆಆರ್ ಪೇಟೆ ತಾಲೂಕಿನ ಅಭ್ಯರ್ಥಿ ಆಯ್ಕೆಯನ್ನು ಕಾಯ್ದಿರಿಸಲಾಗಿದೆ ಎಂದರು.
ಹಾಲು ಪೂರೈಕೆ ಮಾಡುವ ರೈತರಿಗೆ ಪ್ರೋತ್ಸಾಹ ಧನ ಕಲಕಾಲಕ್ಕೆ ಪಾವತಿ ಮಾಡಲಾಗುತ್ತಿದೆ. ಒಂದು ತಿಂಗಳು ತಡವಾದರೂ, ಎರಡು ತಿಂಗಳದ್ದು ಒಮ್ಮೆಲೇ ಪಾವತಿ ಮಾಡಲಾಗಿದೆ. ಬಾಕಿ ಉಳಿಸಲಾಗಿಲ್ಲ. 5ರೂಗೆ ಪ್ರೋತ್ಸಾಹ ಹೆಚ್ಚಿಸಿದ್ದು, 3ರಿಂದ 5 ಲಕ್ಷಕ್ಕೆ ಬಡ್ಡಿ ರಹಿತ ಸಾಲ ನೀಡಿದ್ದು ಸಿಎಂ ಸಿದ್ದರಾಮಯ್ಯ ಅವರು, ರೈತರ ಪರವಾಗಿ ಇರುವುದು ಕಾಂಗ್ರೆಸ್ ಪಕ್ಷ ಎಂದು ನುಡಿದರು.
ಬಿಜೆಪಿ ಜೆಡಿಎಸ್ ಗೆ ಅವರಿಂದ ಅಭಿವೃದ್ಧಿಯ ವಿಷಯ ಇಲ್ಲ. ನಮ್ಮ ವಿರುದ್ಧ ಹೇಳಿಕೆ ನೀಡೋದೇ ಕೆಲಸವಾಗಿದೆ ಎಂದು ವ್ಯಂಗ್ಯವಾಡಿದ ಅವರು, ಮೈಶುಗರ್ 1.80 ಲಕ್ಷ ಟನ್ ಕಬ್ಬು ಕಟಾವು, 1.40 ಲಕ್ಷ ಯುನಿಟ್ ವಿದ್ಯುತ್ ತಯಾರಿಸಿದ್ದೇವೆ ಡಿಸೆಂಬರ್ ಒಳಗೆ ಮೈಶುಗರ್, ಕೃಷಿ ವಿವಿ ಸಂಬಂಧ ಕ್ಯಾಬಿನೆಟ್ ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ. ಇವುಗಳ ಬಗ್ಗೆ ಬಿಜೆಪಿ, ಜೆಡಿಎಸ್ ನವರು ಮಾತನಾಡಲಿ ಎಂದು ಸವಾಲು ಹಾಕಿದರು.
ಈ ಸಂಧರ್ಭದಲ್ಲಿ ಶಾಸಕ ಕದಲೂರು ಉದಯ್. ಕೆ.ಎಂ, ಮನ್ಮುಲ್ ಅಧ್ಯಕ್ಷ ಸಿ. ಡಿ. ಗಂಗಾಧರ್, ಮುಖಂಡರಾದ ಚಿದಂಬರ್, ಕದಲೂರು ರಾಮಕೃಷ್ಣ ಇತರರಿದ್ದರು.