ಫೆಬ್ರವರಿ 17ಕ್ಕೆ ದೊಡ್ಡಹಟ್ಟಿ ಬೋರೇಗೌಡ” ಚಿತ್ರ ಬಿಡುಗಡೆ.

ಫೆಬ್ರವರಿ 17 ರಂದು ಬಹು ನಿರೀಕ್ಷಿತ “ದೊಡ್ಡಹಟ್ಟಿ ಬೋರೇಗೌಡ” ಚಿತ್ರ ಬಿಡುಗಡೆ.

ಕೆ.ಎಂ.ರಘು ನಿರ್ದೇಶನದ “ತರ್ಲೆ ವಿಲೇಜ್” ಎಂಬ ಗ್ರಾಮೀಣ ಸೊಗಡಿನ ಸಿನಿಮಾ ಗಾಂಧಿನಗರದ ಬಾಕ್ಸ್ ಆಫೀಸ್ ನಲ್ಲಿ ಲಾಭ ಪಡೆಯುವುದರ ಮೂಲಕ ಎಲ್ಲರ ಗಮನ ಸೆಳೆದಿತ್ತು. ಆ ನಂತರ ವಿಭಿನ್ನ ಕಥೆಯ “ಪರಸಂಗ” ಚಿತ್ರವನ್ನು ರಘು ನಿರ್ದೇಶನ ಮಾಡಿದ್ದರು. ಈಗ ಕೆ.ಎಂ.ರಘು, “ತಿಥಿ” ಸಿನಿಮಾದ ರೀತಿ ಸಂಪೂರ್ಣ ಗ್ರಾಮೀಣ ಪ್ರತಿಭೆಗಳನ್ನಿಟ್ಟುಕೊಂಡು “ದೊಡ್ಡಹಟ್ಟಿ ಬೋರೇಗೌಡ” ಎಂಬ ಚಿತ್ರ ನಿರ್ದೇಶಿಸಿದ್ದಾರೆ.

ಈ ಚಿತ್ರ ಬಿಡುಗಡೆಗೂ ಪೂರ್ವದಲ್ಲೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಥಮ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ಪಡೆದುಕೊಂಡಿದೆ‌. ಸನ್ಮಾನ್ಯ ರಾಜ್ಯಪಾಲರು ಪ್ರಶಸ್ತಿ ಪ್ರದಾನ ಮಾಡಿದ್ದರು. ಬಹು ನಿರೀಕ್ಷಿತ ಈ ಚಿತ್ರ ಫೆಬ್ರವರಿ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ರಾಜರಾಜೇಶ್ವರಿ ಕಂಬೈನ್ಸ್ ಲಾಂಛನದಲ್ಲಿ ಬಿ.ಸಿ.ಶಶಿಕುಮಾರ್ ಹಾಗೂ ಕೆ.ಎಂ.ಲೋಕೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ವೀನಸ್ ನಾಗರಾಜ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ನಿರ್ದೇಶನ ಹಾಗೂ ಕೆ‌.ಎಂ.ಪ್ರಕಾಶ್ ಅವರ ಸಂಕಲನವಿದೆ.

About The Author