Wednesday, August 20, 2025

Latest Posts

ಅತ್ತೆ ಕಾಟಕ್ಕೆ ಬೇಸತ್ತು ಕೊಲೆ ಮಾಡಿದ ಅಳಿಯ!

- Advertisement -

ತುಮಕೂರು ಜಿಲ್ಲೆಯ ಜನರ ಮನಸ್ಸುಗಳನ್ನು ತೀವ್ರವಾಗಿ ಬೆಚ್ಚಿ ಬೀಳಿಸುವಂತಹ, ಒಂದು ಭಯಾನಕ ಕೊಲೆ ಪ್ರಕರಣ ಈಗ ಪೊಲೀಸರ ತನಿಖೆಯಿಂದ ಬಯಲಾಗಿದೆ.

ಅತ್ತೆಯ ಕಾಟಕ್ಕೆ ಬೇಸತ್ತು, ತನ್ನ ಅತ್ತೆಯನ್ನು ಅಳಿಯ ಕೊಂದು ಹಾಕಿದ್ದಾನೆ. ಈ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ಹಾಗೂ ಕೊಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇತ್ತೀಚೆಗೆ, ಎರಡು ದಿನಗಳ ಹಿಂದೆ ರಸ್ತೆ ಬದಿಯಲ್ಲಿ ಸಿಕ್ಕ ‘ಪ್ಲಾಸ್ಟಿಕ್ ಕವರ್’ ಇಡೀ ತುಮಕೂರನ್ನೇ ಬೆಚ್ಚಿ ಬೀಳಿಸಿತ್ತು.

ಯಾಕಂದ್ರೆ ಆ ಪ್ಲಾಸ್ಟಿಕ್ ಕವರ್ ಒಳಗೆ, ಮನುಷ್ಯನ ದೇಹದ ಅಂಗಾಂಗಳು ಪತ್ತೆಯಾಗಿದ್ದವು. ಕೊರಟಗೆರೆಯ ಚಿಂಪುಗಾನಹಳ್ಳಿಯ ಮುತ್ಯಾಲಮ್ಮ ದೇವಸ್ಥಾನದ ಬಳಿಯಿಂದ ಸಿದ್ದರಬೆಟ್ಟದ ರಸ್ತೆ ತನಕ, ಒಂದಲ್ಲ … ಎರಡಲ್ಲ… ಒಟ್ಟೂ 17 ಸ್ಥಳಗಳಲ್ಲಿ, ಸುಮಾರು 30 ಕಿ.ಮೀ ವ್ಯಾಪ್ತಿಯಲ್ಲಿ, ಕಪ್ಪು ಮತ್ತು ಹಳದಿ ಕಲರ್‌ನ ಪ್ಲಾಸ್ಟಿಕ್ ಕವರ್‌ಗಳಲ್ಲಿ ಮಹಿಳೆಯ ದೇಹದ ತುಂಡುಗಳು ಪತ್ತೆಯಾಗಿದ್ದವು.

ಇದು ಸಾಮಾನ್ಯ ಪ್ರಕರಣ ಅಲ್ಲ. ಈ ಭಾಗಗಳಲ್ಲಿ ಪತ್ತೆಯಾಗುತ್ತಿದ್ದ ಒಂದರ ನಂತರ ಒಂದು ದೇಹದ ಭಾಗಗಳು ನೋಡಿ, ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ರು. ಕೊಲೆಗೀಡಾದ ಮಹಿಳೆ ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿತ್ತು. ಆದರೆ, ಕೊನೆಗೆ ಕುಟುಂಬಸ್ಥರ ಸಹಕಾರದಿಂದ, (42) ವರ್ಷದ ಲಕ್ಷ್ಮಿದೇವಮ್ಮ ಎನ್ನುವ ಮಹಿಳೆ ಅಂತ ಗುರುತಿಸಲಾಯಿತು. ಕೆಲವೇ ದಿನಗಳ ಹಿಂದೆ, ಆ.3ರಂದು, ಕುಟುಂಬಸ್ಥರು ಪೊಲೀಸರಿಗೆ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.

ಮಿಸ್ಸಿಂಗ್ ವರದಿ ಮತ್ತು ಈ ದೇಹದ ತುಂಡುಗಳು ಒಂದೇ ವ್ಯಕ್ತಿಗೆ ಸಂಬಂಧಿಸಿದವೆ ಅನ್ನೋದು ತಡವಾಗಿ ಗೊತ್ತಾಯ್ತು. ಇಲ್ಲಿ ಆಘಾತಕರ ಸಂಗತಿ ಏನೆಂದರೆ ಆಕೆಯ ಅಳಿಯನೇ ಕೊಲೆ ಮಾಡಿದ್ದಾನೆ. ಹೌದು, ಅತ್ತೆಯ ಕಾಟಕ್ಕೆ ಬೇಸತ್ತು, ಆಕೆಯನ್ನು ಕೊಂದು, ದೇಹವನ್ನು ತುಂಡು ಮಾಡಿದ್ದಾನೆ.

ಇದರಲ್ಲಿ ಇನ್ನೊಂದು ಭೀಕರ ಅಂಶವೇನೆಂದರೆ, ಕೊಲೆ ಮಾಡಿದ ನಂತರ, ಶವವನ್ನು ಮೂರು ದಿನಗಳವರೆಗೆ ತಮ್ಮ ಮನೆ ಬಳಿವೇ ಇಟ್ಟುಕೊಂಡಿದ್ದರು. ನಂತರ, ಆ.6ರಂದು, ತನ್ನ ಸ್ನೇಹಿತರಾದ ಸತೀಶ್ ಮತ್ತು ಕಿರಣ್ ಸಹಾಯದಿಂದ ಎಲ್ಲ ಅಂಗಾಂಗಗಳನ್ನು ಬೇರೆ ಬೇರೆ ಕಡೆಗಳಲ್ಲಿ ಬಿಸಾಡಿದ್ದಾರೆ.

ಸದ್ಯ ದಂತ ವೈದ್ಯ ಅಳಿಯ ರಾಮಚಂದ್ರಯ್ಯ, ಸತೀಶ್ ಮತ್ತು ಕಿರಣ್ ಪೊಲೀಸರು ಬಂಧಿಸಿದ್ದಾರೆ. ಅತ್ತೆ ಕಾಟಕ್ಕೆ ಬೇಸತ್ತು ಅಳಿಯನಿಂದಲೇ ಕೃತ್ಯವೆಸಗಲಾಗಿದೆ. ಸದ್ಯ ಕೊರಟಗೆರೆ ಠಾಣೆ ಪೊಲೀಸರಿಂದ ತನಿಖೆ ಮುಂದುವರಿದಿದೆ.

- Advertisement -

Latest Posts

Don't Miss