www.karnatakatv.net: ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಜೂನಿಯರ್ ಮಹಿಳಾ ವಾಲಿಬಾಲ್ ಟೀಂನ ಸದಸ್ಯೆಯೋಬ್ಬಳ ಶಿರಚ್ಛೇದನ ಮಾಡಿದ್ದಾರೆ,
ತಾಲಿಬಾನಿಗಳೂ ತಮ್ಮ ಮೊದಲಿಗಿಂದ ಈಗ ಸ್ವಲ್ಪ ಸುಧಾರಿಸಿರುವ ಬಗ್ಗೆ ಹೇಳಿದ ಹೇಳಿಕೆಯನ್ನು ಸುಳ್ಳು ಮಾಡಿದ್ದಾರೆ. ಮತ್ತೆ ತಮ್ಮ ಕ್ರೌರ್ಯ ಮೆರೆದಿದ್ದಾರೆ. ಮಹ್ಜಬಿನ್ ಹಕಿಮಿ ಹೆಸರಿನ ಆಟಗಾರ್ತಿಯ ಶಿರಚ್ಛೇದನ ಮಾಡಿರುವ ತಾಠಲಿಬಾನಿಗಳು ಅವರ ಪೋಷಕರಿಗೆ ಈ ವಿಷಯವನ್ನು ಎಲ್ಲಿಯೂ ಬಾಯಿಬಿಡದಂತೆ ಬೆದರಿಕೆ ಹಾಕಿದ್ದಾರೆ. ಇದೇ ಕಾರಣಕ್ಕೆ ಅವಳ ವಿಷಯವು ತಡವಾಗಿ ಬೆಳಕಿಗೆ ಬಂದಿದೆ ಎಂದು ಟೀಂ ಕೋಚ್ ಮಾಹಿತಿ ನೀಡಿದ್ದಾರೆ.
ಅಶ್ರಫ್ ಘನಿ ಆಡಳಿತದ ಸರ್ಕಾರ ಬೀಳುವ ಮುನ್ನ ಮಹ್ಜಬಿನ್ ಕಾಬೂಲ್ ಮುನಿಸಿಪಾಲಿಟಿ ವಾಲಿಬಾಲ್ ಕ್ಲಬ್ ನಲ್ಲಿ ಆಟವಾಡಿದ್ರು, ಆದ್ರೆ ಈಗ ಅವರ ಶಿರಚ್ಛೇನ ಮಾಡಿದ ವಿಡಿಯೋ ವೈರಲ್ ಆಗಿದೆ. ಅಗಸ್ಟ್ ತಿಂಗಳಿನಲ್ಲಿ ಕಾಬೂಲ್ ನ್ನು ವಶಪಡಿಸಿಕೊಂಡಾಗ ಇಬ್ಬರು ಆಟಗಾರರು ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ರು ಆದ್ರೆ ಅಲ್ಲಿ ಇನ್ನೂ ಕೆಲವರು ಸಿಲುಕಿಕೊಂಡಾಗ ಮಹ್ಜಬಿನ್ ಕೂಡಾ ಒಬ್ಬಳು ಇದ್ಲು ಎನ್ನಲಾಗಿದೆ.