Sunday, September 8, 2024

Latest Posts

ಹಬ್ಬದ ದಿನಗಳಲ್ಲಿ ಸುಲಭವಾಗಿ ಮಾಡಿ ‘ಅಪ್ಪಿ ಪಾಯಸ ‘

- Advertisement -

ಸಿಹಿ ಖಾದ್ಯಗಳು ಯಾರಿಗ ತಾನೇ ಇಷ್ಟವಾಗುದಿಲ್ಲ? ಮಕ್ಕಳಿಂದ ಹಿಡಿದು ವಯಸ್ಸಾದವರು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. ಇಂದು ನಿಮಗೆ ತುಂಬಾ ಸುಲಭವಾದ ಮತ್ತು ರುಚಿಯಾದ ಸಿಹಿ ಖಾದ್ಯಾ ಅಪ್ಪಿ ಪಾಯಸವನ್ನು ಮಾಡುವುದು ಹೇಗೆಂದು ತಿಳಿಸುತ್ತೇವೆ. ಅಪ್ಪಿ ಪಾಯಸ ಸಾಮಾನ್ಯವಾಗಿ ಹಬ್ಬಗಳು/ ಧಾರ್ಮಿಕ ಸಮಾರಂಭಗಳಲ್ಲಿ ಮಾಡುವ ಸಿಹಿ ಖಾದ್ಯವಾಗಿದೆ.

ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣ: ಇಡಿ ಅಧಿಕಾರಿಗಳಿಂದ ಪ್ರಮುಖ ಆರೋಪಿಗಳ ಮನೆ ಮೇಲೆ ದಾಳಿ

ಅಪ್ಪಿ ಪಾಯಸ ಮಾಡಲು ಬೇಕಾಗುವ ಸಾಮಾಗ್ರಗಳು

ಚಿರೋಟಿ ರವೆ 1 ಕಪ್,  ¾ ಕಪ್ ಸಕ್ಕರೆ,  ಎಣ್ಣೆ,  ¼ ಕಪ್ ನೀರು, 1 ಲೀಟರ್ ಗಟ್ಟಿ ಹಾಲು,  ಡ್ರೈ ಪ್ರೂಟ್ಸ್ ಗಳು.

ಅಪ್ಪಿ ಪಾಯಸ ಮಾಡುವ ವಿಧಾನ

1.ಮಿಕ್ಸಿಂಗ್ ಬೌಲ್ ಗೆ 1 ಕಪ್ ಚಿರೋಟಿ ರವೆ ಹಾಕಿ ನಂತರ ½ ಚಮಚ ಸಕ್ಕರೆ, ½ ಚಮಚ ಎಣ್ಣೆಯನ್ನು  ಹಾಕಿ ಚೆನ್ನಾಗಿ ಬೆರೆಸಿ, ಹಿಟ್ಟನ್ನು ಗಟ್ಟಿಯಾಗಿ ನಿಧಾನವಾಗಿ ನೀರು ಸೇರಿಸಿ ಮಿಶ್ರಣ ಮಾಡಿ ನಂತರ ಕನಿಷ್ಠ 1 ಗಂಟೆಗಳ ಕಾಲ ನೆನೆಯಲು ಬಿಡಿ

  1. ದಪ್ಪ ತಳದ ಪಾತ್ರೆಯಲ್ಲಿ 1 ಲೀಟರ್ ಹಾಲನ್ನು ಹಾಕಿ ನಿಧಾನವಾಗಿ ಸಣ್ಣ ಉರಿಯಲ್ಲಿ ಕುದಿಸಿ ತಳ ಹಿಡಿಯದಂತೆ ಆಗಾಗ ಕೈಯಾಡಿಸಿ.
  2. ಕಲಸಿಟ್ಟ ಹಿಟ್ಟನ್ನು ಚೆನ್ನಾಗಿ ಮತ್ತೆ ಬೆರೆಸಿ ಚಿಕ್ಕ ಗಾತ್ರದ ಉಂಡೆ ಮಾಡಿಕೊಂಡು ಸ್ವಲ್ಪ ಎಣ್ಣೆ ಹಚ್ಚಿ ಪೂರಿಯನ್ನು ಮಾಡಲು ಪ್ರಾರಂಭಿಸಿ
  3. ಇನ್ನೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ಮಾಡಿಟ್ಟುಕೊಂಡ ಪೂರಿಗಳನ್ನು ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕಂದು ಬಣ್ಣ ವರುವವರೆಗೆ ಫ್ರೈ ಮಾಡಿಕೊಳ್ಳಿ.
  4. ಕರಿದ ಪೂರಿಗಳನ್ನು ಸ್ವಲ್ಪ ತಣ್ಣಗಾಗಲು ಬಿಡಿ ನಂತರ ಕೈಯಿಂದ ಸಣ್ಣ ತುಂಡುಗಳನ್ನಾಗಿ ಮಾಡಿಟ್ಟುಕೊಳ್ಳಿ
  5. ಕುದಿಯುವ ಹಾಲಿನ ಪ್ರಮಾಣ 3/4ಕ್ಕೆ ಕಡಿಮೆಯಾದಾಗ, ಹಾಲಿಗೆ ಪೂರಿಗಳ ತುಂಡುಗಳನ್ನು ಸೇರಿಸಿ 5 ನಿಮಿಷ ಕುದಿಯಲು ಬಿಡಿ ನಂತರ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ಮತ್ತೆ ಸ್ವಲ್ಪ ಕುದಿಯಲು ಬಿಡಿ
  6. ಕೊನೆಗೆ ತುಪ್ಪದಲ್ಲಿ ಹುರಿದಿಟ್ಟುಕೊಂಡ ಡ್ರೈ ಫ್ರೂಟ್ಸ್ ಗಳನ್ನು ಸೇರಿಸಿ ಸರ್ವಿಂಗ್ ಬೌಲ್ ಗೆ ಹಾಕಿಕೊಂಡು ಸವಿಯಿರಿ.

ನೀವು ಟಿಫಿನ್ ಗೆ ಇಡ್ಲಿ,ದೋಸೆ, ವಡೆ ತಿನ್ನುತ್ತಿದ್ದೀರಾ..? ಆದರೆ ಆ ರೋಗ ಖಂಡಿತ ಬರಬಹುದು..!

- Advertisement -

Latest Posts

Don't Miss