ಯಾವುದಾದರೂ ಉದ್ಯಮ ಪ್ರಾರಂಭಿಸಬೇಕು. ಯಾವ ಉದ್ಯಮ ಪ್ರಾರಂಭಿಸಲಿ ಎಂದು ಗೊತ್ತಾಗ್ತಾ ಇಲ್ಲಾ. ಬಂಡವಾಳ ಹಾಕೋಕ್ಕೆ ಹಣ ಕಡಿಮೆ ಇದೆ ಅಂತಾ ಚಿಂತೆಯಾಗಿದ್ರೆ, ನಮ್ಮ ಈ ಆರ್ಟಿಕಲ್‌ನಾ ಪೂರ್ತಿಯಾಗಿ ಓದಿ. ಇಂದು ನಾವು ಒಂದು ಲಕ್ಷ ಬಂಡವಾಳ ಹಾಕಿ, ಅದಕ್ಕಿಂತ ಹೆಚ್ಚು ಲಾಭ ಗಳಿಸುವ ಉದ್ಯಮದ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಹಾಲಿನ ವ್ಯಾಪಾರ: 100ರಲ್ಲಿ 99ರಷ್ಟು ಜನರು ಹಾಲನ್ನ ಖರೀದಿ ಮಾಡೇ ಮಾಡುತ್ತಾರೆ. ಹಾಗಾಗಿ ನೀವು ಹಾಲಿನ ಅಂಗಡಿ ಇಟ್ಟರೆ ಉತ್ತಮ ಲಾಭ ಗಳಿಸಬಹುದು. ಹಾಲಿನ ಜೊತೆ, ಮೊಸರು, ಮಜ್ಜಿಗೆ, ತುಪ್ಪ, ಐಸ್‌ಕ್ರೀಮ್, ಚೀಸ್, ಪನ್ನಿರ್ ಎಲ್ಲದ ವ್ಯಾಪಾರ ಮಾಡಬಹುದು. ಬೇಸಿಗೆ ಗಾಲದಲ್ಲಿ ಹೆಚ್ಚು ಲಾಭ ಸಿಗುವ ಉದ್ಯಮವಿದು.
ಹಣ್ಣು- ತರಕಾರಿ ವ್ಯಾಪಾರ: ಜನ ಏನಿಲ್ಲಾ ಅಂದ್ರೂ, ಹಣ್ಣು- ತರಕಾರಿ ಕೊಂಡುಕೊಳ್ಳೋಕ್ಕೆ ಬಂದೇ ಬರುತ್ತಾರೆ. ಹಾಗಾಗಿ ಸಣ್ಣ ಪ್ರಮಾಣದ ಹಣ್ಣು- ತರಕಾರಿ ಮಳಿಗೆ ಇಡಬಹುದು. ಆದರೆ ನಿಮ್ಮ ತರಕಾರಿ ಫ್ರೆಶ್ ಆಗಿಡುವುದನ್ನ ಮರೆಯಬೇಡಿ. ಸ್ವಚ್ಛತೆಯನ್ನ ಕಾಪಾಡಿ.
ವೆಲ್ಡಿಂಗ್ ಶಾಪ್: ವೆಲ್ಡಿಂಗ್ ಬುಸಿನೆಸ್ ಶುರು ಮಾಡಲು ಒಂದರಿಂದ ಮೂರು ಲಕ್ಷ ರೂಪಾಯಿ ಬೇಕಾಗುತ್ತದೆ. ವೆಲ್ಡಿಂಗ್ ಅವಶ್ಯಕತೆ ಹೆಚ್ಚು ಇರುವ ಕಾರಣ, ಇದರಿಂದ ಒಳ್ಳೆಯ ಲಾಭ ಗಳಿಸಬಹುದು. ಯಾಕಂದ್ರೆ ಒಬ್ಬರಲ್ಲ ಒಬ್ಬರು ಮನೆ ಕಟ್ಟುತ್ತಲೇ ಇರುತ್ತಾರೆ. ಮನೆ ಕಟ್ಟುವಾಗ, ಕಬ್ಬಿಣದ ವಸ್ತುವಿನ ಅವಶ್ಯಕತೆ ಇದ್ದೇ ಇರುತ್ತದೆ. ಹಾಗಾಗಿ ಇದರಿಂದ ನೀವು ಲಾಭ ಗಳಿಸಬಹುದು. ಕೆಲಸಕ್ಕೆ ಒಂದಿಬ್ಬರನ್ನು ಇಡಬೇಕಾಗುತ್ತದೆ.
ಕಿರಾಣಿ ಅಂಗಡಿ: ಕಿರಾಣಿ ಅಂಗಡಿ ಇಟ್ರೆ, ಅದಕ್ಕಿಂತ ದೊಡ್ಡ ಲಾಭ ಇನ್ನೊಂದಿಲ್ಲಾ. ಯಾಕಂದ್ರೆ ಜನ ಅಕ್ಕಿ ಬೆಳೆ ಪದಾರ್ಥಗಳನ್ನೆಲ್ಲ ಕೊಳ್ಳೋಕ್ಕೆ ಇಲ್ಲೇ ಬರ್ತಾರೆ. ಆದರೆ ನಿಮಗೆ ಗ್ರಾಹಕರನ್ನ ಸೆಳೆಯುವ ಚತುರತೆ ಗೊತ್ತಿರಬೇಕಷ್ಟೇ.. ಯಾಕಂದ್ರೆ ಇದು ಪೈಪೋಟಿಯ ಜಗತ್ತು. ಇಲ್ಲಿ ಎಲ್ಲದಕ್ಕೂ ಪೈಪೋಟಿ ನಡೆಯುತ್ತೆ. ಹಾಗಾಗಿ ನಿಮ್ಮ ಕಿರಾಣಿ ಅಂಗಡಿ ಲಾಭ ಗಳಿಸಬೇಕು ಅಂದ್ರೆ, ಗ್ರಾಹಕರನ್ನ ಸೆಳೆಯುವ ತಂತ್ರ ನಿಮಗೆ ಗೊತ್ತಿರಬೇಕು.
ಕಾರ್- ಬೈಕ್ ವಾಶಿಂಗ್ ಶಾಪ್: ಈಗಿನ ಕಾಲದಲ್ಲಿ ಪ್ರತಿಯೊಬ್ಬರೂ ಕಾರ್, ಬೈಕ್ ಓಡಿಸುವವರೇ. ಕೆಲವರ ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ವಾಹಗಳಿರತ್ತೆ. ವಾಹನ ಸರ್ವಿಸ್ ಮಾಡಲು, ಕಾರ್ ವಾಶ್ ಮಾಡಲು ಜನ ಇಂಥಲ್ಲಿ ಬಂದೇ ಬರುತ್ತಾರೆ. ಹಾಗಾಗಿ ಜನ ಸಂಚಾರ ಹೆಚ್ಚಿರುವ ಜಾಗ ನೋಡಿ, ಕಾರ್- ಬೈಕ್ ವಾಶಿಂಗ್ ಶಾಪ್ ಇಡಬಹುದು.
ಸಲೂನ್ ಶಾಪ್ ಅಥವಾ ಬ್ಯೂಟಿ ಪಾರ್ಲರ್: ಬ್ಯೂಟಿ ಪಾರ್ಲರ್ ಇಟ್ರೆ ಒಳ್ಳೆಯ ಲಾಭ ಗಳಿಸಬಹುದು. ಓನರ್ ಜೊತೆ ಒಂದು ಹೆಲ್ಪರ್ ಬೇಕಾಗುತ್ತಾರೆ. ಜನ ಸಂಚಾರ ಹೆಚ್ಚಿರುವ ಜಾಗದಲ್ಲಿ ಈ ಶಾಪ್ ಇಟ್ಟರೆ ಇನ್ನೂ ಒಳ್ಳೆ ಲಾಭ. ಬ್ಯೂಟಿ ಪಾರ್ಲರ್ ಇಟ್ಟರೆ ಆಗುವ ಇನ್ನೊಂದು ಲಾಭ ಅಂದ್ರೆ, ನೀವು ಮದುವೆ, ಮುಂತಾದ ಕಾರ್ಯಕ್ರಮದಲ್ಲಿ ವಧುವಿಗೆ, ವಧುವಿನ ಸಂಬಂಧಿಕರಿಗೆ ಮೇಕಪ್ ಮಾಡಲು ಹೋಗಬಹುದು. ಮದುವೆ ಸೀಸನ್ ಇದ್ದಾಗ, ಉತ್ತಮ ಲಾಭ ಗಳಿಸಬಹುದು. ಇಂದಿನ ಕಾಲದಲ್ಲಿ ಒಂದು ಸಲ ಮೇಕಪ್ ಮಾಡೋಕ್ಕೆ, 8ರಿಂದ 10 ಸಾವಿರ ರೂಪಾಯಿ ತೆಗೆದುಕೊಳ್ಳುತ್ತಾರೆ. ನೀವು ದಿನಕ್ಕೆ ಎರಡರಿಂದ ಮೂರು ಮದುವೆ ಅಟೆಂಡ್ ಮಾಡಿ, ವಧುವಿಗೆ ಮೇಕಪ್ ಮಾಡಬಹುದು. ಅಲ್ಲಿಗೆ ದಿನಕ್ಕೆ 25ರಿಂದ 30 ಸಾವಿರ ರೂಪಾಯಿ ಲಾಭ ಗಳಿಸಬಹುದು. ಅದರಲ್ಲಿ ಹೆಲ್ಪರ್‌ಗೆ ಫೀಸ್, ಪೆಟ್ರೋಲ್ ಖರ್ಚೆಲ್ ಕಳೆದು, 20 ಸಾವಿರವಾದ್ರೂ ಲಾಭ ಉಳಿಯುತ್ತದೆ. ಇನ್ನು ಸಲೂನ್ ಶಾಪ್‌ಗೆ ಹುಡುಗರು, ಹೇರ್ ಕಟಿಂಗ್, ಫೇಶಿಯಲ್ ಮಾಡಿಸಿಕೊಳ್ಳೋಕ್ಕೆ ಬರ್ತಾನೆ ಇರ್ತಾರೆ. ಹೀಗಾಗಿ ಇಲ್ಲೂ ಲಾಭ ಜಾಸ್ತಿನೇ.