Wednesday, March 12, 2025

Latest Posts

delhi ದೆಹಲಿ ಗದ್ದುಗೆ ಫೈಟ್ ! ಮಹಿಳಾ ಮುಖ್ಯಮಂತ್ರಿ ಸಾಧ್ಯತೆ !

- Advertisement -

DELHI : ದೆಹಲಿ ವಿಧಾನಸಭಾ ಚನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ , 27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಹಿಡಿಯಲು ಸಿದ್ಧವಾಗಿದೆ . ಆದರೆ ಈಗ ಬಿಜೆಪಿಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಯಾರು? ಎಂಬ ಬಗ್ಗೆ ಚರ್ಚೆ ಈಗ ಜೋರಾಗಿದೆ.

ಆಯ್ಕೆಯಾಗಿರುವ 48 ಶಾಸಕರ ಪೈಕಿ ಒಬ್ಬರನ್ನ ಮುಖ್ಯಮಂತ್ರಿ ಮಾಡಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಬರಿ ಮಹಿಳಾ ನಾಯಕಿಯರಿಗೆ ಹೆಚ್ಚು ಒತ್ತು ಕೊಡುವ ಸದ್ಯತೇ ಇದೆ, ಅಥವಾ ಪರಿಶಿಷ್ಟ ಜಾತಿ (ಎಸ್‌ಸಿ) ಅಭ್ಯರ್ಥಿಯು ಬಿಜೆಪಿ ಕೇಂದ್ರ ನಾಯಕತ್ವದ ಆಯ್ಕೆಯಾಗಲಿದೆ ಎಂಬ ಊಹಾಪೋಹಗಳು ಕೇಳಿ ಬರುತ್ತಿವೆ.

ಅದರಲ್ಲಿ ಮುಖ್ಯವಾಗಿ ರೇಖಾ ಗುಪ್ತಾ ಪ್ರಬಲ ಸ್ಪರ್ಧಿಯಾಗಿ ಕಾಣುತ್ತಾರೆ. ಅವರ ವೈಶ್ಯ ಸಮುದಾಯದ ಹಿನ್ನೆಲೆ ಮತ್ತು ಡಿಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿ ಅನುಭವವು ಅವರಿಗೆ ಸಹಾಯ ಮಾಡಬಹುದು ಎಂದು ಹೇಳಲಾಗುತ್ತಿದೆ. ಜಾತಿವಾರು, ಮಹಿಳೆ, ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಮುಖ್ಯಮಂತ್ರಿ ಜತೆಗೆ ಒಂದು ಅಥವಾ ಎರಡು ಉಪ ಮುಖ್ಯಮಂತ್ರಿ ಹುದ್ದೆ ಗಳು ಸೃಷ್ಟಿಸುವ ಸಾಧ್ಯತೆ ಕೂಡ ಇದೆ.

ಬಿಜೆಪಿ ಹೈಕಮಾಂಡ್‌ ಹಿಂದೆ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಮುಖ್ಯಮಂತ್ರಿಯಾಗಿಸಿತ್ತು ಹೀಗಾಗಿ ಈ ಬಾರಿ ದೆಹಲಿಯಲ್ಲಿಯೂ ಹೊಸ ಮುಖಕ್ಕೆ ಮಣೆಹಾಕಿದರೂ ಕೂಡ ಅಚ್ಚರಿಯಿಲ್ಲ.

ದೆಹಲಿ ಬಿಜೆಪಿ ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿಯ ಬಗ್ಗೆ ಚರ್ಚಿಸಲು ಪ್ರಮುಖ ಸಭೆಗೆ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಮೊದಲನೆಯದು ಜಾಟ್ ಸಮುದಾಯದಿಂದ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಅಂತ ಹೇಳಲಾಗ್ತಿದೆ . ಇದು ದೆಹಲಿ ಮತ್ತು ಅದರ ನೆರೆಯ ರಾಜ್ಯಗಳಾದ ಹರಿಯಾಣ ಮತ್ತು ಪಂಜಾಬ್‌ನಲ್ಲಿ ಗಮನಾರ್ಹ ಜನಸಂಖ್ಯೆ ತಲುಪುಲು ಸಹಾಯವಾಗುತ್ತದೆ ಅಂತ ಹ್ಹೇಳಲಾಗ್ತಿದೆ

ಎರಡನೇ ಆಯ್ಕೆಯೆಂದರೆ, ಪರಿಶಿಷ್ಟ ಸಮುದಾಯದ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು. ಏಕೆಂದರೆ ಅದು ಬಿಹಾರದ ಮತದಾರರನ್ನು ಓಲೈಸುವ ಸಾಧ್ಯತೆಯಿದೆ, ಜೊತೆಗೆ ಆ ರಾಜ್ಯದಲ್ಲಿ ಮುಂಬರುವ ಚುನಾವಣೆಗಳಿಗೆ ನೆರವಾಗುತ್ತದೆ ಎಂಬ ಲೆಕ್ಕಚಾರವಾಗಿದೆ.

ಮೂರನೇ ಆಯ್ಕೆ ಮಹಿಳಾ ಅಭ್ಯರ್ಥಿ. “ಇದು ಪ್ರಧಾನಮಂತ್ರಿಯ “ಮಹಿಳಾ ನೇತೃತ್ವದ ಅಭಿವೃದ್ಧಿ” ನಿರೂಪಣೆಗೆ ಅನುಗುಣವಾಗಿ ಕಾರ್ಯತಂತ್ರದ ಕ್ರಮವಾಗಿರುತ್ತದೆ ಹೀಗಾಗಿ ಈ ಬಾರಿ ದೆಹಲಿಗೆ ಮಹಿಳಾ ಮುಖ್ಯ ಮಂತ್ರಿ ಆಗುವ ಸಾಧ್ಯತೆ ಇದೆ ಎಂಬ ಮಾತುಗಳು ಜೋರಾಗಿ ಮುಖ್ಯವಾಗಿ ರೇಖಾ ಗುಪ್ತಾ , ಶಿಖಾ ರಾಯ್ , ಮತ್ತು ನೀಲಂ ಪೆಹಲ್ವಾನ್ ಹೆಸರುಗಳು ಕೇಳಿಬರ್ತಿವೆ.

- Advertisement -

Latest Posts

Don't Miss