Sunday, April 13, 2025

Latest Posts

ಗಾಳಿಯಲ್ಲಿ ಗುಂಡು; ಸಿದ್ಧಲಿಂಗ ಸ್ವಾಮೀಜಿ ವಿರುದ್ಧ ಕೇಸ್ ದಾಖಲು..!

- Advertisement -

state news

ಬೀದರ್(ಫೆ.21): ಇತ್ತೀಚೆಗೆ ಸ್ವಾಮೀಜಿಗಳ ಮೇಲೆ ಆರೋಪಗಳು ಒಂದರ ಮೇಲೆ ಒಂದರಂತೆ ಕೇಳಿಬರುತ್ತಿದೆ. ಕೆಲವೊಂದು ಆರೋಪಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರೋದು ಸಾಮಾನ್ಯವಾಗಿದೆ. ಇದೀಗ ಬೀದರ್ ನ ಬಸವತೀರ್ಥ ಮಠದ ಸಿದ್ದಲಿಂಗ ಸ್ವಾಮಿ ಅವರ ವಿರುದ್ಧ ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪ ಕೇಳಿ ಬಂದಿದೆ.

ಶುಕ್ರವಾರ ಭಾಲ್ಕಿ ಕ್ರಾಸ್ ಬಳಿಯ ಹುಮನಾಬಾದ್-ಬೀದರ್ ರಸ್ತೆಯಲ್ಲಿ ತನ್ನ ನಾಲ್ವರು ಅನುಯಾಯಿಗಳೊಂದಿಗೆ ನಿಂತಿದ್ದಾಗ ಸ್ವಾಮಿಜಿಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಕಾನೂನಿನ ಅರಿವಿದ್ದರೂ ಈ ರೀತಿಯಾಗಿ ಮಾಡಿರುವುದು ತಪ್ಪು ಎಂದು ಆರೋಪಿಸಿ ನಾಗೇಶ್ ಕಲ್ಲೂರು ಎಂಬವರು ದೂರು ನೀಡಿದ್ದಾರೆ. ಭಾನುವಾರ ರಾತ್ರಿ ರಾಯಚೂರಿನ ಚೌಕಿಮಠದಲ್ಲಿ ಹುಮನಾಬಾದ್ ಸಬ್ ಇನ್ಸ್‌ಪೆಕ್ಟರ್ ಮಂಜುನಗೌಡ ಪಾಟೀಲ್ ಅವರು ಸಿದ್ದಲಿಂಗ ಸ್ವಾಮಿಯಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ.

ಫೆ.23 ಕ್ಕೆ ಅಮಿತ್ ಶಾ ಬೆಂಗಳೂರು, ಬಳ್ಳಾರಿಗೆ…?

ಶಿರಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಹೇಗಿವೆ…?

- Advertisement -

Latest Posts

Don't Miss