Wednesday, June 19, 2024

Latest Posts

ಕಳ್ಳತನವಾಗಿದ್ದ ಮೊಬೈಲ್ ಫೋನ್ ನಿಂದ ಹಣ ವರ್ಗಾವಣೆ ದೂರು ದಾಖಲು….!

- Advertisement -

Hubballi News: ಹುಬ್ಬಳ್ಳಿ: ಬಸ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯ ಮೊಬೈಲ್ ಕಳ್ಳತನ ಮಾಡಿದ ಕಳ್ಳರು, ಮೊಬೈಲ್‌ನಿಂದ ದುಡ್ಡು ಟ್ರಾನ್ಸ್‌ಫರ್ ಮಾಡಿದ್ದಾರೆ. 78,000 ಹಣವನ್ನು ವರ್ಗಾವಣೆಯಾದ ಬಗ್ಗೆ ನಾಲ್ಕು ದಿನ ತಡವಾಗಿ ದೂರು ದಾಖಲಾಗಿದೆ..

ಚಾಲಕ ವೃತ್ತಿ ಮಾಡುವ ಸಂಜೀವ್ ಮುಳುಗುಂದ ಅವರು ಅಕ್ಟೋಬರ್ 8ರಂದು ಹುಬ್ಬಳ್ಳಿಯಿಂದ ಹೆವಸೂರಿಗೆ ಸಂಚರಿಸುತ್ತಿದ್ದಾಗ ತಮ್ಮ ಮೊಬೈಲ್ ಫೋನ್ ಕಳ್ಳತನವಾಗಿದೆ. ಇದು ಹುಬ್ಬಳ್ಳಿ ಕೋರ್ಟ್ ಸರ್ಕಲ್‌ಗೆ ಬಂದ ನಂತರ, ಅವರಿಗೆ ಮೊಬೈಲ್ ಕಡೆ ಗಮನ ಬಂದಿದೆ. ಅದಾದ ನಂತರ ಮೊಬೈಲ್ ಹೋದ್ರೆ ಹೋಗ್ಲಿ ಡುಬ್ಲಿಕೇಟ್ ಸಿಮ ಆದರೂ ತಗೊಂಡ್ರೆ ಅಂತ ಅಕ್ಟೋಬರ್ 10 ರಂದು ಡುಬ್ಲಿಕೇಟ್ ಸಿಮ್ ಪಡೆದು, ಇನ್ನೊಂದು ಮೊಬೈಲ್ ಫೋನ್ ಗೆ ಹಾಕಿಕೊಂಡು ಸಿಮ್ ಚಾಲು ಮಾಡಿದಾಗ ಅಚ್ಚರಿ ಕಾದಿತ್ತು.

78 ಸಾವಿರ ಹಣ ಕಡಿತವಾಗಿರುವ ಸಂದೇಶ ಬಂದಿದೆ. ಆನಂತರ ಬ್ಯಾಂಕ್ ಸ್ಟೇಟ್ಮೆಂಟ್ ಪಡೆದು ಈ ಬಗ್ಗೆ ಅಕ್ಟೋಬರ್ 12ರಂದು ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ನಮಗೆ ಹಣ ಸಂಗ್ರಹ ಮಾಡಿ ಕೊಡುವ ಪರಿಸ್ಥಿತಿ ಇಲ್ಲ’

ಶಾಸಕ ಸ್ವರೂಪ್ ಗೆ ವಿದ್ಯುತ್ ಶಾಕ್..! ಆಗಿದ್ದೇನು ಗೊತ್ತಾ..?

Call Record : ಅನುಮತಿ ಇಲ್ಲದೆ ಕಾಲ್ ರೆಕಾರ್ಡ್ ಮಾಡುವುದು ಕಾನೂನು ಉಲ್ಲಂಘನೆ

- Advertisement -

Latest Posts

Don't Miss