Movie News: ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಸಮಿತಿ ಇರುವಂತೆ, ಕನ್ನಡ ಚಿತ್ರರಂಗದಲ್ಲೂ ನಿವೃತ್ತ ನ್ಯಾಯಾಧೀಶರನ್ನೊಳಗೊಂಡ ಸಮಿತಿಯೊಂದನ್ನು ರಚಿಸಬೇಕು ಎಂಬ ಆಗ್ರಹ ಜೋರಾಗಿಯೇ ಕೇಳಿಬಂದಿದೆ. ಈ ಕುರಿತಂತೆ, ಸಿಎಂ ಸಿದ್ಧರಾಮಯ್ಯನವರನ್ನೂ ಭೇಟಿ ಮಾಡಿದ್ದ ಫೈರ್ ಸಂಘಟನೆ, ಮನವಿ ಮಾಡಿತ್ತು. ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿದ್ದರು.
ಸಭೆಗೆ ಆಗಮಿಸಿದ್ದ ಯುವ ನಟಿಯರ ನಡುವೆ ಗದ್ದಲ ಶುರುವಾಯಿತು. ಕನ್ನಡ ಚಿತ್ರರಂಗಕ್ಕೆ ಕಮಿಟಿ ಬೇಕು, ಬೇಡ ಎಂಬ ಚರ್ಚೆ ಜೋರಾಗಿ ನಡೆಯಿತು. ಒಂದು ಹಂತಕ್ಕೆ ಮಾತಿನ ಚಕಮಕಿಯೂ ನಡೆಯಿತು. ಸಭೆಯಲ್ಲಿ ಕಮಿಟಿ ಬೇಡ ಎಂಬ ಧ್ವನಿಯನ್ನು ಫಿಲ್ಮ್ ಚೇಂಬರ್ ಎತ್ತಿತು. ಚೇಂಬರ್ ಅಧ್ಯಕ್ಷರು ಸೇರಿದಂತೆ ಹಲವು ನಿರ್ಮಾಪಕರು, ಕೆಲ ನಟಿಯರು ಕಮಿಟಿ ಬೇಡ ಎಂದೇ ಹೇಳಿದರು. ಆದರೆ, ಫೈರ್ ಸಂಘಟನೆ ಅಧ್ಯಕ್ಷೆ ಕವಿತಾ ಲಂಕೇಶ್ ಮತ್ತು ನೀತು ಶೆಟ್ಟಿ ಅವರು ಸಾಕಷ್ಟು ವಾದ ಮಾಡಿದರೂ, ಅವರಿಗೆ ಮಾತನಾಡುವುದಕ್ಕೂ ಅವಕಾಸ ಕೊಡಲಿಲ್ಲ. ಈ ಕುರಿತು ಕವಿತಾ ಲಂಕೇಶ್ ಹೇಳಿದ್ದಿಷ್ಟು.
“ಸಭೆಯ ನಿರ್ಧಾರದಿಂದ ನಮಗೆ ಅಸಮಾಧಾನವಾಗಿದೆ. ನಮಗೆ ಮಾತನಾಡೋದಕ್ಕೆ ಚೇಂಬರ್ನಲ್ಲಿ ಅವಕಾಶ ಕೊಡಲಿಲ್ಲ. ಮಹಿಳೆಯರಿಗೆ ಪ್ರಾಬ್ಲಮ್ ಇಲ್ಲ ಅಂತ ಹೇಳಿದ್ದಾರೆ. ಹಿಂದೆ ನಟಿಯರು ಮಾತನಾಡುತ್ತಿರಲಿಲ್ಲ. ಮಾತಾಡುವುದಕ್ಕೂ ಬಿಡುತ್ತಿರಲಿಲ್ಲ. ಆದರೆ, ಈಗ ಮಹಿಳೆಯರು ಮುಂದೆ ಬರುತ್ತಿದ್ದಾರೆ. ನಾಗಲಕ್ಷ್ಮಿ ಅವರು ಸಭೆಯಲ್ಲಿ ಹೇಳಿದ್ದಾರೆ. ಕಾನ್ಫಿಡೆನ್ಸಿಯಲ್ ಸರ್ವೆ ಮಾಡ್ತಿನಿ ಅಂದಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಇಲ್ಲಿ ಪುರುಷರು ಹೇಳುತ್ತಾರೆ ಯಾವುದೇ ರೀತಿಯ ಶೋಷಣೆ ಇಲ್ಲಿ ಆಗುತ್ತಿಲ್ಲ ಅಂತ. ನಾವು ನಿವೃತ್ತ ಜಡ್ಜ್ ಇರಬೇಕು, ಅದರಲೂ ಪುರುಷರು ಇರಲಿ ಎಂದ್ದಿದ್ದೇವೆ. ಕಮಿಟಿ ರಚನೆ ಆಗಲೇಬೇಕು. ಚೇತನ್ ಬಗ್ಗೆ ತುಂಬಾ ವಿರೋಧವಾಗಿ ಮಾತನಾಡುತ್ತಿದ್ದಾರೆ. ನೀತು ಕಂಪ್ಲೇಟ್ ತಗೋಂಡು ಬಂದ್ರೆ ಏನೂ ಮಾಡಿಲ್ಲ. ನಮ್ಮನ್ನ ಮಾತನಾಡೋಕೆ ಬಿಡಲಿಲ್ಲ . ಮಹಿಳೆ ಧ್ವನಿ ಎತ್ತಿದ್ರೆ, ಮಾತನಾಡೋದಕ್ಕೆ ಬಿಡೋದಿಲ್ಲ ಆಗ ಮಹಿಳೆ ಮಾತಾಡಲು ರೈಟ್ಸ್ ಇರಲಿಲ್ಲ. ಈಗ ಮಹಿಳೆ ತಮ್ಮ ಸಮಸ್ಯೆ ಕುರಿತು ಮಾತಾಡೋ ಅವಕಾಶ ಇದೆ ಆದರೆ, ಅವಕಾಶವೇ ಸಿಗುತ್ತಿಲ್ಲ. ಸರ್ವೇ ಮಾಡಿದಾಗ ಸಮಸ್ಯೆ ಇದೆಯೋ ಇಲ್ಲವೋ ಅನ್ನೋದು ಗೊತ್ತಾಗುತೆ. ಸಪರೇಟ್ ಕಮಿಟಿ ಆಗ್ಬೇಕು ಎಂದು ವಾದ ಮಾಡಿದರೂ, ಚೇಂಬರ್ನವರು ಮಾತ್ರ ಕಮಿಟಿ ಮಾಡೋಕೆ ಒಪ್ಪಿಗೆ ನೀಡಿಲ್ಲ ಎಂದಿದ್ದಾರೆ.




