Wednesday, October 15, 2025

Latest Posts

ಇದು ಕಂಟೆಂಟ್ ಗೆ ಸಿಕ್ಕ ಮೊದಲ ಗೆಲುವು…”ಧೈರ್ಯಂ ಸರ್ವತ್ರ ಸಾಧನಂ” ಆಡಿಯೋ ಹಕ್ಕು ಭಾರೀ ಮೊತ್ತಕ್ಕೆ ಮಾರಾಟ

- Advertisement -

Film News:

ಗಂಧಗುಡಿಯಲ್ಲಿ ಈಗಂತೂ ತರಹೇವಾರಿ ಕಥಾಹಂದರದ ಸಿನಿಮಾಗಳು ಬರ್ತಿವೆ. ಎಲ್ಲಾ ಚಿತ್ರಗಳು ಸದ್ದು ಮಾಡೋದಿಲ್ಲ.  ಆದರೆ ಬಿಡುಗಡೆಗೂ ಮುನ್ನ ಸದ್ದು ಮಾಡುವುದರ ಜೊತೆಗೆ ಹಾಕಿದ ಬಂಡವಾಳವನ್ನು ಈ ಚಿತ್ರ ಬಾಚಿದೆ. ಅದೇ ಧೈರ್ಯಂ ಸರ್ವತ್ರ ಸಾಧನಂ. ಎ. ಪಿ.ಪ್ರೊಡಕ್ಷನ್ಸ್ ಬ್ಯಾನರ್ ನಡಿ ಆನಂದ್ ಬಾಬು ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರದ ಆಡಿಯೋ ರೈಟ್ಸ್  ದೊಡ್ಡ ಮೊತ್ತಕ್ಕೆ A2ಆಡಿಯೋ ಕಂಪನಿಗೆ ಮಾರಾಟವಾಗಿದ್ದು, ಇದು ನಿರ್ಮಾಪಕರಿಗೆ ಹಾಗೂ ಇಡೀ ಸಿನಿಮಾ ಬಳಗಕ್ಕೆ ಸಂತಸ ತಂದಿದೆ.

ಅನೇಕ ಚಿತ್ರಗಳಿಗೆ ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದ ಎ. ಆರ್. ಸಾಯಿರಾಮ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಹೊಸ ಹೆಜ್ಜೆ ಇಟ್ಟಿದ್ದು, ಚಿತ್ರದಲ್ಲಿ 5 ಹಾಡುಗಳು 5 ಪೈಟ್ ಗಳು ಇದ್ದು,  ಜುಡಾ ಸ್ಯಾಂಡಿ ದೇಸಿ ಸಂಗೀತ ಸಿನಿಮಾಕ್ಕಿದೆ.

ಕಿನ್ನಲ್ ರಾಜ್, ಅರಸು ಅಂತಾರೆ,ಹೃದಯ ಶಿವ, ಎ. ಆರ್.ಸಾಯಿರಾಮ್ ಸಾಹಿತ್ಯ ಹಾಡುಗಳಿಗಿದೆ. ಪಂಜಾಬ್ ಸಿನಿಮಾಟೋಗ್ರಾಫರ್ ರವಿ ಕುಮಾರ್ ಸನ ಛಾಯಾಗ್ರಹಣ ,ಶ್ರೀಕಾಂತ್ ಸಂಕಲನ ಮಾಡಿದ್ದಾರೆ, ಕುಂಗ್ಪು ಚಂದ್ರು ಸಾಹಸ ನಿರ್ದೇಶನ ಚಿತ್ರಕ್ಕಿದೆ.

ತಾರಾಗಣದಲ್ಲಿ ಯಶ್ ಶೆಟ್ಟಿ, ಬಲರಾಜವಾಡಿ, ವಿವನ್ ಕೆ.ಕೆ. ಅನುಷಾ ರೈ, ಪ್ರದೀಪ್ ಪೂಜಾರಿ, ರಾಮ್ ಪವನ್, ವರ್ಧನ್ ತೀರ್ಥಹಳ್ಳಿ, ಚಕ್ರವರ್ತಿ ಚಂದ್ರಚೂಡ್ ಅಭಿನಯಿಸಿದ್ದಾರೆ. ಎಲ್ಲವೂ ಅಂದುಕೊಂಡತೆ ಆದರೆ ಡಿಸೆಂಬರ್ ವಾರಾಂತ್ಯದಲ್ಲಿ ಸಿನಿಮಾ ಬಿಡುಗಡೆ ಚಿತ್ರತಂಡ ತಯಾರಿ ನಡೆಸುತ್ತಿದೆ.

ನಟನೆಗೆ ಗುಡ್ ಬೈ ಹೇಳ್ತಾರಾ ನಯನ್ ತಾರಾ…?! 

ಪ್ರಸಾರ ನಿಲ್ಲಿಸುತ್ತಿದೆ “ನನ್ನರಸಿ ರಾಧೆ”…!

ಕಪ್ಪು ಬಣ್ಣದ ಬಟ್ಟೆಯಲ್ಲಿ ಆಶಿಕಾ ಮಸ್ತ್ ಪೋಸ್ ..!

- Advertisement -

Latest Posts

Don't Miss