Film News:
ನಟ ದರ್ಶನ್ ತಮ್ಮ ಸಿನಿಮಾ ಬದುಕಿನಲ್ಲಿ 25 ವರ್ಷಗಳನ್ನು ಪೂರೈಸಿದ್ದಾರೆ. ಇದರ ಪ್ರಯುಕ್ತ ನಟ ದರ್ಶನ್ ಯಾವುದೇ ಕಾರ್ಯಕ್ರಮ ಮಾಡಿರಲಿಲ್ಲ. ಆದರೆ ತಡವಾಗಿ ಅವರ ಹಲವು ಸ್ನೇಹಿತರು ಸೇರಿ, ದರ್ಶನ್‌ರಿಂದ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದಕ್ಕಾಗಿ ವಿಶೇಷವಾದ ಕೇಕ್ ತಯಾರಾಗಿದ್ದು, ದರ್ಶನ್ ನಟನೆಯ ಎಲ್ಲಾ ಸಿನಿಮಾಗಳ ಹೆಸರನ್ನು ಕೇಕ್ ಮೇಲೆ ಬರೆಸಲಾಗಿತ್ತು.
ನಟ ದರ್ಶನ್‌ಗಾಗಿ ಅವರ ಸ್ನೇಹಿತರ ಬಳಗ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇಲ್ಲಿ ದರ್ಶನ್ ಸಿನಿಮಾರಂಗಕ್ಕೆ ಬಂದು 25 ವರ್ಷ ಪೂರೈಸಿದ ಸಂಭ್ರಮವನ್ನು ಆಚರಿಸಲಾಯಿತು. ನಟ ಪ್ರಜ್ವಲ್ ದೇವರಾಜ್, ಯಶಸ್ ಸೂರ್ಯ, ಧರ್ಮ ಕೀರ್ತಿರಾಜ್ ಸೇರಿದಂತೆ ಹಲವು ಸ್ನೇಹಿತರು ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಅಲ್ಲಿನ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಬಳಿಕ ‘ಕ್ರಾಂತಿ’ ಚಿತ್ರತಂಡದ ಜೊತೆಗೆ ದರ್ಶನ್ ಈ ಸಂಭ್ರಮವನ್ನು ಆಚರಿಸಿದ್ದರು. ದರ್ಶನ್ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆ ‘ಕ್ರಾಂತಿ’ ಚಿತ್ರತಂಡ ದರ್ಶನ್ ಅವ್ರಿಂದ ಕೇಕ್ ಕತ್ತರಿಸಿದರು. ಈ ಸಮಯದಲ್ಲಿ ನಿರ್ದೇಶಕಿ ಶೈಲಾಜಾ ನಾಗ್, ವಿ. ಹರಿಕೃಷ್ಣ, ರಚಿತಾ ರಾಮ್ ಜೊತೆಗೆ ಇದ್ದರು. ನಂತರ ಸ್ನೇಹಿತರ ಜೊತೆಗೆ ಪಾರ್ಟಿಯಲ್ಲೂ ಭಾಗಿ ಆಗಿದ್ದರು.
ಈಗ ಮತ್ತೊಮ್ಮೆ ಸಂಭ್ರಮಾಚರಣೆಯಲ್ಲಿ ನಟ ದರ್ಶನ್ ಭಾಗಿಯಾಗಿದ್ದಾರೆ. ದರ್ಶನ್ ಸ್ನೇಹಿತರ ಬಳಗದಿಂದ ಮತ್ತೊಮ್ಮೆ ಕೇಕ್ ಕತ್ತರಿಸಿ ಆಚರಣೆ ಮಾಡಿದ್ದಾರೆ. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟ ದರ್ಶನ್‌ಗಾಗಿ ವಿಶೇಷ ಕೇಕ್ ತಯರಿಸಲಾಗಿತ್ತು.
ಇದು ಕಂಟೆಂಟ್ ಗೆ ಸಿಕ್ಕ ಮೊದಲ ಗೆಲುವು…”ಧೈರ್ಯಂ ಸರ್ವತ್ರ ಸಾಧನಂ” ಆಡಿಯೋ ಹಕ್ಕು ಭಾರೀ ಮೊತ್ತಕ್ಕೆ ಮಾರಾಟ




