Thursday, July 31, 2025

Latest Posts

ಡಿ ಬಾಸ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್..?!

- Advertisement -

Film News:

ಡಿ ಬಾಸ್  ಕ್ರಾಂತಿ ಸಕ್ಸಸ್ ಬೆನ್ನಲ್ಲೇ ಇದೀಗ ಹುಟ್ಟುಹಬ್ಬದ ಸೆಲೆಬ್ರೇಶನ್ ಗೂ ದಿನಗಣನೆ ಶುರುವಾಗಿದೆ. ಈ ಎರಡೂ ಸಂಭ್ರಮದ ಜೊತೆ ದರ್ಶನ್ ಮತ್ತೊಂದು ಸಿಹಿ ಸುದ್ದಿಯನ್ನೂ ಕೊಟ್ಟಿದ್ದಾರೆ. ಅದೇನಂತೀರಾ ಈ ಸ್ಟೋರಿ ನೋಡಿ.

ಕಳೆದ ವರ್ಷ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸೂಪರ್ ಹಿಟ್ ‘ಮೆಜೆಸ್ಟಿಕ್’ ಸಿನಿಮಾ ಹೊಸ ರೂಪದಲ್ಲಿ ರೀ ರಿಲೀಸ್ ಆಗಿತ್ತು. ಈ ಬಾರಿ ‘ಕ್ರಾಂತಿ’ ಸಕ್ಸಸ್ ಬೆನ್ನಲ್ಲೇ ದರ್ಶನ್ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ.
ಫೆ. 16ಕ್ಕೆ D56 ಅಪ್‌ಡೇಟ್ ದರ್ಶನ್ ಹುಟ್ಟುಹಬ್ಬ ಅಂದಮೇಲೆ ಏನಾದರೂ ವಿಶೇಷ ಇರಲೇಬೇಕು. ‘ಕ್ರಾಂತಿ’ ನಂತರ ದರ್ಶನ್ D56 ಚಿತ್ರದಲ್ಲಿ ನಟಿಸ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದ ಒಂದಷ್ಟು ಸನ್ನಿವೇಶಗಳ ಚಿತ್ರೀಕರಣ ಕೂಡ ನಡೆದಿದೆ. ರಾಕ್‌ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಣ ಮಾಡ್ತಿದ್ದು ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲೇ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್ ಸಿಗುವ ಸುಳಿವು ಸಿಗ್ತಿದೆ.

ಹಂಪಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ D56 ಚಿತ್ರಕ್ಕೆ ನಿರ್ದೇಶಕ ತರುಣ್ ಸುಧೀರ್ ಹಾಗೂ ಜಡೇಶ್ ಹಂಪಿ ಕಥೆ ಬರೆದಿದ್ದಾರೆ. ಕಳೆದ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ ಚಿತ್ರದ ಥೀಮ್ ಪೋಸ್ಟರ್ ರಿಲೀಸ್ ಆಗಿ ಸದ್ದು ಮಾಡಿತ್ತು. ಪೋಸ್ಟರ್‌ನಲ್ಲಿ ಕುರಿಗಳ ಹಿಂಡನ್ನು ಕಾಯುವ ನಾಯಿಯ ಚಿತ್ರವನ್ನು ಹಾಕಿ “ಹಿಂದಿರೋವ್ರಿಗೆ ದಾರಿ ಮುಂದಿರೋವ್ನದ್ದು ಜವಾಬ್ದಾರಿ..” ಅಂತ ಬರೆದು ಕುತೂಹಲ ಮೂಡಿಸಿತ್ತು ಚಿತ್ರತಂಡ. ಈ ಬಾರಿ ಹುಟ್ಟುಹಬ್ಬಕ್ಕೆ ಟೈಟಲ್ ಸಮೇತ ಸಣ್ಣ ಟೀಸರ್ ಝಲಕ್ ರಿಲೀಸ್ ಮಾಡುವ ಸಾಧ್ಯತೆಯಿದೆ. ಅಭಿಮಾನಿಗಳು ಕೂಡ ಈ ಬಗ್ಗೆ ನಿರ್ದೇಶಕರ ಬಳಿ ಸೋಶಿಯಲ್ ಮೀಡಿಯಾ ಮೂಲಕ ಮನವಿ ಸಲ್ಲಿಸುತ್ತಿದ್ದಾರೆ. ಫೆಬ್ರವರಿ 16ಕ್ಕೆ D56 ಅಪ್‌ಡೇಟ್ ನೀಡುವಂತೆ ಕೇಳುತ್ತಿದ್ದಾರೆ.

ಕುತೂಹಲ ಮೂಡಿಸಿದ D56 ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಕಳೆದ ವರ್ಷ ಮುಹೂರ್ತ ನೆರವೇರಿಸಿ D56 ಚಿತ್ರಕ್ಕೆ ಚಾಲನೆ ನೀಡಲಾಗಿತ್ತು. ‘ಕ್ರಾಂತಿ’ ಸಿನಿಮಾ ರಿಲೀಸ್ ಆಗುವರೆಗೂ ಮುಂದಿನ ಸಿನಿಮಾ, ಟೈಟಲ್ ಬಗ್ಗೆ ಮಾತನಾಡುವುದಿಲ್ಲ ಎಂದು ದರ್ಶನ್ ಹೇಳಿದ್ದರು. ಯಾಕಂದರೆ ಆ ಸಿನಿಮಾ ಬಗ್ಗೆ ಮಾತನಾಡಿದರೆ ಈ ಸಿನಿಮಾ ವಿಚಾರಕ್ಕೆ ಪಕ್ಕಕ್ಕೆ ಹೋಗಿಬಿಡುತ್ತದೆ. ಅದೇ ಕಾರಣಕ್ಕೆ D56 ಬಗ್ಗೆ ಯಾವುದೇ ಸುಳಿವು ಚಿತ್ರತಂಡ ಈವರೆಗೆ ಬಿಟ್ಟುಕೊಟ್ಟಿಲ್ಲ. ಇದೀಗ ‘ಕ್ರಾಂತಿ’ ಸಿನಿಮಾ ಬಿಡುಗಡೆ ಆಗಿರುವುದರಿಂದ ಹುಟ್ಟುಹಬ್ಬಕ್ಕೆ D56 ಅಪ್‌ಡೇಟ್ ಸಿಗುವ ನಿರೀಕ್ಷೆ ಇದೆ. ಚಿತ್ರಕ್ಕೆ ‘ಚೌಡಯ್ಯ’ ಎನ್ನುವ ಹೆಸರಿಟ್ಟಿರುವುದಾಗಿ ಗುಸುಗುಸು ಶುರುವಾಗಿದೆ.

ಅರ್ಥಪೂರ್ಣವಾಗಿ ದರ್ಶನ್ ಹುಟ್ಟುಹಬ್ಬ ದರ್ಶನ್ ಕೆಲ ವರ್ಷಗಳ ಹಿಂದೆಯೇ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ಬ್ರೇಕ್ ಹಾಕಿದ್ದರು. ಕೇಕ್, ಹಾರ, ತುರಾಯಿ, ಉಡುಗೊರೆಗೆ ನೀಡುವ ಹಣದಲ್ಲಿ ಅಕ್ಕಿ, ದಿನಸಿ ತಂದುಕೊಟ್ಟರೆ ಅದನ್ನು ಅವಶ್ಯ ಇರುವವರಿಗೆ ತಲುಪಿಸುವುದಾಗಿ ಹೇಳಿದ್ದರು. ಅಭಿಮಾನಿಗಳು ಕೂಡ ಅನ್ನು ಅನುಸರಿಸಿಕೊಂಡು ಬರುತ್ತಿದ್ದಾರೆ. ಈ ಬಾರಿ ಕೂಡ ಅದು ಮುಂದುವರೆಯಲಿದೆ. ಅಭಿಮಾನಿಗಳು ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸಲು ಮುಂದಾಗಿದ್ದಾರೆ. ಜೊತೆಗೆ D56 ಟೀಂನಿಂದ ಸರ್‌ಪ್ರೈಸ್ ಕೂಡ ಸಿಗಲಿದೆ.

ಹೊಂದಿಸಿ ಬರೆಯಿರಿ’ ಟ್ರೇಲರ್ ಬಿಡುಗಡೆ – ಶುಭ ಹಾರೈಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್..!

ನ್ಯಾಚುರಲ್ ಸ್ಟಾರ್ ನಾನಿ, ಸಿನಿಮಾ ಸಾಥ್ ನೀಡಿದ ಮೆಗಾ ಸ್ಟಾರ್ ಚಿರಂಜೀವಿ

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಕ್ರೇಜ್..!

- Advertisement -

Latest Posts

Don't Miss