Sunday, September 8, 2024

Latest Posts

ರಮ್ಯಾ ಮದುವೆನಾ.? ಹೊಸ ಸಿನಿಮಾನಾ.? ಕುತೂಹಲ ಮೂಡಿಸಿದ ರಮ್ಯಾ ಪೋಸ್ಟ್

- Advertisement -

Film News:

ಮೋಹಕ ತಾರೆ ನಟಿ ರಮ್ಯಾ ಅವರು ಗುಡ್ ನ್ಯೂಸ್ ಒಂದನ್ನು ನೀಡುವುದಾಗಿ ಖಚಿತ ಪಡಿಸಿದ್ದಾರೆ. ಇಷ್ಟು ದಿನ ಅಂತೆ-ಕಂತೆಗಳ ರೂಪದಲ್ಲಿ ಹರಿದಾಡುತ್ತಿದ್ದ ಸುದ್ದಿ ಈಗ ನಿಜವಾಗುವ ಸಮಯ ಬಂದಿದೆ. ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವುದಾಗಿ ಅವರು ಖಚಿತವಾಗಿ ಹೇಳಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ‘ನಾಳೆ (ಆಗಸ್ಟ್ ೩೧) ಬೆಳಗ್ಗೆ ೧೧.೧೫ಕ್ಕೆ ನಿಮಗೆಲ್ಲ ನಾನು ಸಿಹಿ ಸುದ್ದಿ ನೀಡುತ್ತೇನೆ. ಇದು ಅಧಿಕೃತ’ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ. ಈ ಸುದ್ದಿ ತಿಳಿದುದ್ದೇ ತಡ ಅಭಿಮಾನಿಗಳು ತಲೆ ಕೆರೆದುಕೊಳ್ಳಲು ಶುರು ಮಾಡಿದ್ದಾರೆ. ರಮ್ಯಾ ಹೊಸ ಸಿನಿಮಾ ಮಡ್ತಾರಾ? ಮದುವೆ ಬಗ್ಗೆ ಏನಾದರೂ ನರ‍್ಧಾರ ತೆಗೆದುಕೊಂಡಿದ್ದಾರಾ? ನರ‍್ಮಾಣ ಸಂಸ್ಥೆ ಶುರು ಮಾಡುತ್ತಾರಾ? ಈ ಎಲ್ಲ ಪ್ರಶ್ನೆಗಳು ಈಗ ಹುಟ್ಟಿಕೊಂಡಿವೆ.

ಒಂದೆಡೆ ಮೊನ್ನೆಯಷ್ಟೇ ರಮ್ಯಾ ಒಂದು ಹಾಡಿಗೆ ಏಕ್ಟ್ ಮಾಡಿದ ರೀತಿ ಪ್ರತಿ ಆಭಿಮಾಣಿಗಳೂ ರಮ್ಯಾ ಮತ್ತೆ ಸಿನಿರಂಗಕ್ಕೆ ಕಮ್ ಬ್ಯಾಕ್ ಆಗ್ತಾರೆ ಅಂತ ಖುಷಿಯಿಂದ ಇದ್ರು. ಈಗ ಮತ್ತೆ ರಮ್ಯಾ ಮಾಡಿರೋ ಈ ಪೋಸ್ಟ್ ಅಭಿಮಾನಿಗಳನ್ನು ತಲೆಕೆಡಿಸುವಂತೆ ಮಾಡಿದೆ.

ಕನ್ನಡ ಚಿತ್ರರಂಗದಲ್ಲಿ ಹಲವು ರ‍್ಷಗಳ ಕಾಲ ಬಹುಬೇಡಿಕೆಯ ನಟಿಯಾಗಿ ಆಳ್ವಿಕೆ ಮಾಡಿದವರು ರಮ್ಯಾ. ನಂತರ ಅವರು ರಾಜಕೀಯಕ್ಕೆ ತೆರಳಿದರು. ಆ ಬಳಿಕ ನಟನೆಯಿಂದ ಸಂಪರ‍್ಣ ಬ್ರೇಕ್ ಪಡೆದುಕೊಂಡರು. ಆದಷ್ಟು ಬೇಗ ಅವರು ಕಮ್ಬ್ಯಾಕ್ ಮಾಡಬೇಕು ಎಂಬುದು ಅಭಿಮಾನಿಗಳ ಬಯಕೆ. ಅದು ಈಡೇರುವ ಕಾಲ ಈಗ ಕೂಡಿಬಂದಿದೆ ಎಂದು ಎಲ್ಲರೂ ಊಹಿಸುತ್ತಿದ್ದಾರೆ. ರಮ್ಯಾ ನೀಡಲಿರುವ ಆ ಸಿಹಿ ಸುದ್ದಿ ಏನು ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾಯುತ್ತಿದ್ದಾರೆ.

ರಮ್ಯಾ ನಟನೆಯಿಂದ ದೂರ ಉಳಿದುಕೊಂಡಿದ್ದರೂ ಕೂಡ ಚಿತ್ರರಂಗದ ನಂಟು ಕಡಿದುಕೊಂಡಿಲ್ಲ. ಹಲವು ಚಿತ್ರತಂಡಗಳ ಜೊತೆ ಅವರು ಸಂರ‍್ಕ ಹೊಂದಿದ್ದಾರೆ. ಹೊಸ ತಲೆಮಾರಿನ ಪ್ರತಿಭೆಗಳ ಜೊತೆಗೆ ರಮ್ಯಾ ಒಡನಾಟ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅವರು ‘ಹೊಯ್ಸಳ’ ಚಿತ್ರದ ಶೂಟಿಂಗ್ ಸೆಟ್ಗೆ ಭೇಟಿ ನೀಡಿದ್ದರು. ಹೊಯ್ಸಲ ಚಿತ್ರದಲ್ಲಿ ಅವರು ಅಭಿನಯಿಸುತ್ತಾರೆ ಅನ್ನೋ ಸುದ್ದಿ ಹರಿದಾಡಿತ್ತಾದರೂ ಅಭಿಮಾನಿಗಳಿಗೆ ಅದು ಮತ್ತೆ ನಿರಾಸೆಯಾಗಿತ್ತು. ರಾಜ್ ಬಿ. ಶೆಟ್ಟಿ, ರಕ್ಷಿತ್ ಶೆಟ್ಟಿ, ಅಮೃತಾ ಅಯ್ಯಂಗಾರ್ ಮುಂತಾದವರಿಗೆ ಅವರು ಪ್ರೋತ್ಸಾಹ ನೀಡುತ್ತಲೇ ಇದ್ದಾರೆ.

ಒಟ್ಟಾರೆ ಮೋಹಕ ತಾರೆ ರಮ್ಯ ಮತ್ತೆ ಇಂಡಸ್ಟರಿ ಗೆ ಬರಲಿ ಅನ್ನೋದೆ ಅಭಿಮಾನಿಗಳ ಆಶಯ. ಅಂತೂ ಅವರ ಸಿಹಿಸುದ್ದಿ ಏನು ಎಂಬುವುದು ಗೊತ್ತಾಗಬೇಕಿದ್ದರೆ ನಾಳೆ ವರೆಗೂ ಕಾಯಲೇ ಬೇಕು. ಇದಾಗಿತ್ತು ಈ ಹೊತ್ತಿನ ವಿಶೇಷ

‘ಧಮಾಕ’ ಸಿನಿಮಾಗೆ ಅಭಿಷೇಕ್ ಅಂಬರೀಶ್ ಸಾಥ್…ಗೆಳಯನ ಸಿನಿಮಾ ಬಗ್ಗೆ ಏನಂದ್ರೂ ಯಂಗ್ ರೆಬಲ್ ಸ್ಟಾರ್?

ಬೆಂಗಳೂರಿನಲ್ಲಿ ‘ಕೋಬ್ರಾ’ ಕ್ರೇಜ್.. ಚಿಯಾನ್ ವಿಕ್ರಮ್ ನೋಡಲು ಮುಗಿಬಿದ್ದ ಫ್ಯಾನ್ಸ್

ಸಾನ್ಯಾ ಅಯ್ಯರ್ ಸುದೀಪ್ ಹೇಳಿದ ಮಾತನ್ನು ಉಳಿಸಿಕೊಂಡಿಲ್ಲ..! ಚರ್ಚೆಗೆ ಕಾರಣವಾಗುತ್ತಾ ಈ ವಿಚಾರ…?!

- Advertisement -

Latest Posts

Don't Miss