ಬಿಹಾರ ವಿಧಾನಸಭೆ ಚುನಾವಣೆ ಮಹತ್ವಪೂರ್ಣ ಬೆಳವಣಿಗೆಯಾಗಿದೆ. ಬಿಹಾರದ ಎಲೆಕ್ಷನ್ ಯಾವಾಗ? ಚುನಾವಣೆ ಡೇಟ್ ಯಾವಾಗ ಅನೌನ್ಸ್ ಆಗತ್ತೆ ಅಂತ ಎಲ್ಲರು ಕಾತುರದಿಂದ ಕಾಯುತ್ತಿದ್ದಾರೆ. ರಾಜ್ಯದ ಮತದಾರರ ಅಂತಿಮ ಪಟ್ಟಿ ಸೆ.30 ಚುನಾವಣಾ ಆಯೋಗದಿಂದ ಅಧಿಕೃತವಾಗಿ ಪ್ರಕಟಿಸಲಾಗಿದೆ. 7.25 ಕೋಟಿಗೂ ಹೆಚ್ಚು ಮತದಾರರನ್ನು ಒಳಗೊಂಡಿರುವ ಈ ಪಟ್ಟಿ, ರಾಜ್ಯದ ಮುಂದಿನ ಚುನಾವಣಾ ಪ್ರಕ್ರಿಯೆಗೆ ದಿಕ್ಕು ನೀಡಲಿದೆ.
ಈ ಹಿಂದೆ ಆಗಸ್ಟ್ 1 ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿತ್ತು. ಸಾರ್ವಜನಿಕರಿಂದ ಮತ್ತು ರಾಜಕೀಯ ಪಕ್ಷಗಳಿಂದ ಆಕ್ಷೇಪಣೆ ಸ್ವೀಕರಿಸುವ ಅವಧಿ ಸೆಪ್ಟೆಂಬರ್ 1 ರವರೆಗೆ ನೀಡಲಾಗಿತ್ತು. ಅದರ ಬಳಿಕ ಸಮಗ್ರ ಪರಿಶೀಲನೆಯ ನಂತರ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಇದು ಬಿಹಾರದಲ್ಲಿ 22 ವರ್ಷಗಳ ನಂತರ ನಡೆದ ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ಆಗಿದೆ. ಆದರೆ ಈ SIR ಪ್ರಕ್ರಿಯೆ ವಿಚಾರವಾಗಿ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ರಾಹುಲ್ ಗಾಂಧಿ ಈ ಕುರಿತು ‘ಮತ ಕಳವು’ ಅಭಿಯಾನವನ್ನೇ ಪ್ರಾರಂಭಿಸಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಪ್ರತಿಯಾಗಿ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದ್ದು ಯಾವುದೇ ಅರ್ಹ ಮತದಾರನನ್ನು ಪಟ್ಟಿಯಿಂದ ಹೊರಗಿಡಲಾಗಿಲ್ಲ. ಅನರ್ಹರು ಮಾತ್ರವೇ ತೆಗೆದು ಹಾಕಲ್ಪಟ್ಟಿದ್ದಾರೆ. ಪ್ರಕ್ರಿಯೆ ಪೂರ್ಣ ಪಾರದರ್ಶಕವಾಗಿಯೇ ನಡೆದಿದೆ ಎಂದಿದೆ.
ಇನ್ನು ಬಿಹಾರ ಚುನಾವಣೆ ಯಾವಾಗ? ಅನ್ನೋದನ್ನ ನೋಡೋದಾದ್ರೆ ಸದ್ಯ
ಬಿಹಾರ ವಿಧಾನಸಭೆಯ ಸದಸ್ಯಬಲ 243 ಇದೆ. ಸದ್ಯ ಇಲ್ಲಿ ಬಿಜೆಪಿ-ಜೆಡಿಯು ಇರುವ ಎನ್ಡಿಎ ಮೈತ್ರಿಕೂಟ ಅಧಿಕಾರದಲ್ಲಿದೆ. ಬಿಹಾರ ವಿಧಾನಸಭೆಯ ಅವಧಿ 2025ರ ನವೆಂಬರ್ 22ರಂದು ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಹಿಂದಿನ ಬಾರಿ ಕೋವಿಡ್ ಸಮಯದಲ್ಲಿ ಮೂರು ಹಂತಗಳಲ್ಲಿ ಮತದಾನ ನಡೆದಿದೆ. ಈ ಬಾರಿ ಒಂದು ಹಂತದಲ್ಲಿ ಚುನಾವಣೆ ನಡೆಯಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ. ಶೀಘ್ರದಲ್ಲೇ ಚುನಾವಣಾ ದಿನಾಂಕಗಳ ಘೋಷಣೆ ಆಗುವ ಸಾಧ್ಯತೆ ಇದೆ.
ವರದಿ : ಲಾವಣ್ಯ ಅನಿಗೋಳ