Horoscope: ಯಾರಿಗೆ ತಾನೇ ತಾನು ಚೆನ್ನಾಗಿ ದುಡಿದು ದುಡ್ಡು ಮಾಡಬೇಕು. ಐಷಾರಾಮಿ ಜೀವನವನ್ನು ಅನುಭವಿಸಬೇಕು. ಕಂಡಿದ್ದೆಲ್ಲ ಖರೀದಿಸುವಷ್ಟು ಯೋಗ್ಯನಾಗಬೇಕು ಅಂತಾ ಆಸೆ ಇರುವುದಿಲ್ಲ ಹೇಳಿ..? ಆದರೆ ಇದು ಎಲ್ಲರಿಗೂ ಅಷ್ಟು ಸುಲಭವಲ್ಲ. ಇನ್ನೇನು ಹಣ ಕೂಡಿಡಬೇಕು ಅನ್ನುವಷ್ಟರಲ್ಲಿ, ಖರ್ಚಿಗೆ ದಾರಿ ತೆರೆದುಕೊಳ್ಳುತ್ತದೆ. ಯಾಕಂದ್ರೆ ನೀವು ಕೆಲವೊಂದು ತಪ್ಪುಗಳನ್ನು ಮಾಡುತ್ತಿರುತ್ತೀರಿ. ಆದ್ರೆ ಆ ತಪ್ಪಿನ ಬಗ್ಗೆ ನಿಮಗೆ ಅರಿವಿರುವುದಿಲ್ಲ. ಹಾಗಾದ್ರೆ ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದ್ರೆ ನಾವು, ಯಾವ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಶೌಚಾಲಯ ಕ್ಲೀನ್ ಆಗಿರಿಸಿ. ಸ್ನಾನ ಮಾಡುವ ಕೋಣೆ, ಶೌಚಾಲಯ ಸದಾ ಕ್ಲೀನ್ ಆಗಿ ಇರಿಸಿಕೊಳ್ಳಬೇಕು. ಕೆಲವರು ತಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಇರುವುದನ್ನು ಪರೀಕ್ಷಿಸಲು, ಸ್ಕ್ಯಾನರ್ ತಂದಿಟ್ಟುಕೊಳ್ಳುತ್ತಾರೆ. ನೀವು ಆ ಸ್ಕ್ಯಾನರ್ ತೆಗೆದುಕೊಂಡು ಹೋಗಿ, ಬಾಗಿಲು ಹಾಕದ ಬಚ್ಚಲು ಕೋಣೆ, ಶೌಚ ಅಥವಾ ಕ್ಲೀನ್ ಇರದ ಬಚ್ಚಲು ಕೋಣೆ, ಶೌಚಾಲಯದ ಬಳಿ ತೆಗೆದುಕೊಂಡು ಹೋದರೆ, ಅಲ್ಲಿ ನಕಾರಾತ್ಮಕ ಶಕ್ತಿ ಇರುವುದು ತೋರಿಸುತ್ತದೆ. ಹಾಗಾಗಿಯೇ ಬಾತ್‌ರೂಂ, ಟಾಯ್ಲೆಟ್ ಸದಾ ಕ್ಲೀನ್ ಇಟ್ಟುಕೊಲ್ಳಬೇಕು.
ಊಟ ಮಾಡುವಾಗಲೂ ಕೆಲ ಪದ್ಧತಿ ಅನುಸರಿಸಿ. ನಾವು ನಿಮಗೆ ಈಗಾಗಲೇ ಎಂಥ ಆಹಾರ ಸೇವಿಸಬಾರದು ಅಂತಾ ಹೇಳಿದ್ದೇವೆ. ನೆಲಕ್ಕೆ ಬಿದ್ದ ಆಹಾರ ಸೇವಿಸಬಾರದು. ಬೆಡ್ ಮೇಲೆ ಕುಳಿತು ಉಣ್ಣಬಾರದು, ಊಟಕ್ಕೂ ಮುನ್ನ ದೇವರನ್ನು ನೆನೆಯಬೇಕು. ಹೀಗೆ ಈ ಎಲ್ಲ ಪದ್ಧತಿಗಳನ್ನು ಅನುಸರಿಸಿದಾಗ, ಅನ್ನಪೂರ್ಣೇಶ್ವರಿಯ ಕೃಪೆ ಮತ್ತು ಲಕ್ಷ್ಮೀ ದೇವಿಯ ಕೃಪೆ ಸದಾ ನಿಮ್ಮ ಮೇಲಿರುತ್ತದೆ.
ಸರಿಯಾದ ಸಮಯಕ್ಕೆ ನಿದ್ರಿಸಿ. ಕೆಲವರು ರಾತ್ರಿ ಲೇಟಾಗಿ ಮಲಗಿ, ಬೆಳಿಗ್ಗೆ ಲೇಟಾಗಿ ಏಳುತ್ತಾರೆ. ಮತ್ತೆ ಕೆಲವರು ಬೆಳಿಗ್ಗೆ ಬೇಗ ಎದ್ದರೂ, ಸಂಜೆವರೆಗೂ ಮಲಗುತ್ತಾರೆ. ಮತ್ತೆ ಕೆಲವರು, ಮುಸ್ಸಂಜೆ ಹೊತ್ತಿಗೆ ಮಲಗುತ್ತಾರೆ. ಇದೆಲ್ಲವೂ ದರಿದ್ರ ತರುವ ಕೆಲಸವೇ. ಹಾಗಾಗಿ ರಾತ್ರಿ ಬೇಗ ಮಲಗಿ- ಬೇಗ ಏಳಿ. ಮಧ್ಯಾಹ್ನ ಕೊಂಚ ಹೊತ್ತು ನಿದ್ರಿಸಿ.
ಚಪ್ಪಲಿ ಧರಿಸಿ, ಮನೆಯಲ್ಲಿ ಓಡಾಡಬೇಡಿ. ಕೆಲವರು ಚಪ್ಪಲಿ ಧರಿಸಿ, ಮನೆಯಲ್ಲಿ ಓಡಾಡುತ್ತಾರೆ. ಮನೆಯಲ್ಲೇ ಧರಿಸಲು ಬೇರೆ ಚಪ್ಪಲಿ ಬಳಸಿದರೂ, ಒಂದಲ್ಲ ಒಂದು ಸಾರಿ ಆ ಚಪ್ಪಲಿ, ಹೊರಗೆ ಹೋಗಲು ಬಳಕೆಯಾಗಿರುತ್ತದೆ. ಅಲ್ಲದೇ, ಒಮ್ಮೊಮ್ಮೆ ಹೊರಗೆ ಹೋಗಿ ಬಂದಾಗ, ಆ ಚಪ್ಪಲಿಯನ್ನು ಮನೆಯಲ್ಲಿ ಧರಿಸಲಾಗುತ್ತದೆ. ಈ ತಪ್ಪು ಮಾಡಿದಾಗ, ಹೊರಗಿದ್ದ ನಕಾರಾತ್ಮಕ ಶಕ್ತಿ ನಿಮ್ಮ ಮನೆ ತಲುಪಿ, ನಿಮಗೆ ದರಿದ್ರವೇ ತರುತ್ತದೆ. ಅಲ್ಲದೇ, ನಿಮ್ಮ ಆರ್ಥಿಕ ಸ್ಥಿತಿ ಹಾಳಾಗುತ್ತದೆ. ನೆಮ್ಮದಿ ನಿಮ್ಮಿಂದ ದೂರವಾಗುತ್ತದೆ. ಈ ಎಲ್ಲ ತಪ್ಪುಗಳನ್ನು ಮಾಡದೇ ಇದ್ದರೆ, ಜೊತೆಗೆ ದೇವರ ಮೇಲೆ ಭಕ್ತಿ ಇದ್ದರೆ, ಪೂಜ ಪುನಸ್ಕಾರಗಳು ನಡೆಯುತ್ತಿದ್ದರೆ, ನೆಮ್ಮದಿ, ಆರೋಗ್ಯ, ಹಣ ಎಲ್ಲವೂ ನಿಮ್ಮದಾಗಿರುತ್ತದೆ.




