FaceBook ಹಾಗು Google ಗೆ ಫ್ರಾನ್ಸ್ನಲ್ಲಿ ದಂಡ

ಫೇಸ್‌ಬುಕ್ ಹಾಗು ಗೂಗಲ್ ಎರಡೂ ಸಹ ದೈತ್ಯ ಸಾಮಾಜಿಕ ಜಾಲತಾಣಗಳು. ಆದರೆ ಎರಡೂ ಸಾಮಾಜಿಕ ಜಾಲತಾಣಗಳಿಗೂ ಫ್ರಾನ್ಸ್ನಲ್ಲಿ ದಂಡದ ಬರೆ ಬಿದ್ದಿದೆ. ಅಷ್ಟಕ್ಕೂ ದಂಡದ ಬರೆ ಏಕೆ ಬಿತ್ತೆಂದರೆ ಬಳಕೆದಾರರ ಗೌಪ್ಯತಾ ನಿಯಮವನ್ನು ಉಲ್ಲಂಘನೆ ಮಾಡಿದಕ್ಕೆ, ಗೂಗಲ್ ಗೆ 150 ಮಿಲಿಯನ್ ಯೂರೋ ಹಾಗು ಫೇಸ್‌ಬುಕ್ ಗೆ 60 ಮಿಲಿಯನ್ ಯುರೋ ದಂಡ ವಿಧಿಸಲಾಗಿದೆ.


ಯುರೋಪ್ ಒಕ್ಕೂಟವು ಬಳಕೆದಾರರ ವೈಯಕ್ತಿಕ ಮಾಹಿತಿ ರಕ್ಷಿಸುವ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಅಮೆರಿಕಾದ ಟೆಕ್ ದೈತ್ಯರು ತಮ್ಮ ವ್ಯಾಪಾರದ ಮೇಲೆ ಒತ್ತಡ ಹೆಚ್ಚುತ್ತಿರುವುದರಿಂದ ಆತಂಕಿತರಾಗಿದ್ದಾರೆ. ಈಗಾಗಿ ಕಾನೂನು ನಿಯಮ ಉಲ್ಲಂಘಿಸಿದಕ್ಕಾಗಿ ಫ್ರಾನ್ಸ್ನ ಮಾಹಿತಿ ತಂತ್ರಜ್ಞಾನ ಮತ್ತು ಸ್ವಾತಂತ್ರ್ಯದ ರಾಷ್ಟ್ರೀಯ ಆಯೋಗ (C N I L) ದಂಡವನ್ನು ವಿಧಿಸಿದೆ. ಪ್ರಮುಖ ಕಾರಣ ಫೇಸ್ಬುಕ್ ಹಾಗು ಗೂಗಲ್ ಗಳು ಕುಕೀಸ್ ಬಳಸಿರುವುದು.. ಕುಕೀಸ್ ಎಂದರೆ ಆನ್‌ಲೈನ್‌ನಲ್ಲಿ ಬಳಕೆದಾರರನ್ನು ಟ್ರಾಕ್ ಮಾಡಲು ಬಳಸುವ ಡೇಟಾವಾಗಿದೆ. ಇದರಿಂದ ಎರಡು ದೈತ್ಯ ಸಾಮಾಜಿಕ ಜಾಲತಾಣಗಳಿಗೆ ಒಡೆತ ಬೀಳಲಿದೆ.

About The Author