Tuesday, October 22, 2024

Latest Posts

ಮೋದಿ- ಯೋಗಿ ಡಾನ್ಸ್ ಮಾಡುತ್ತಿರುವಂತೆ ಎಡಿಟ್ ಮಾಡಿದ್ದ ವೀಡಿಯೋ ವಿರುದ್ಧ ಎಫ್‌ಐಆರ್

- Advertisement -

National Political News: ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಡಾನ್ಸ್ ಮಾಡುತ್ತಿರುವಂತೆ ವೀಡಿಯೋವೊಂದನ್ನು ಎಡಿಟ್ ಮಾಡಿದ್ದು, ಈ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ನೇಹಾ ರಾಠೋಡ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ವೀಡಿಯೋ ಹಾಕಿದ್ದು, ವೀಡಿಯೋ ಎಡಿಟ್ ಮಾಡಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಸ್ಥಳೀಯ ಪೊಲೀಸರ ಬಳಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಹಾಗಾಗಿ ಈ ವೀಡಿಯೋ ಮಾಡಿದವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಯೋಗಿ ಆದಿತ್ಯನಾತ್, ಮಹಾತ್ಮಾ ಗಾಂಧೀಜಿ, ಪ್ರಧಾನಿ ಮೋದಿ ಭೋಜಪುರಿ ಹಾಡಿಗೆ ಡಾನ್ಸ್ ಮಾಡಿರುವಂತೆ ಎಡಿಟ್ ಮಾಡಿ, ರೀಲ್ಸ್ ಮಾಡಿದ್ದು, ಇದಕ್ಕೆ ಬಿಜೆಪಿ ಬೆಂಬಲಿಗರು ಸೇರಿ, ಹಲವರು ಆಕ್ರೋಶ ಹೊರಹಾಕಿದ್ದಾರೆ, ಅಗ್ಗದ ಪ್ರಚಾರಕ್ಕಾಗಿ ಈ ಮಟ್ಟಕ್ಕೆ ಇಳಿದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನು ಪ್‌ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

- Advertisement -

Latest Posts

Don't Miss