www.karnatakatv.net :ಇಂಡೋನೇಷ್ಯಾದ ಜೈಲಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಪರಿಣಾಮ 41 ಮಂದಿಗೂ ಹೆಚ್ಚು ಕೈದಿಗಳು ಸಾವನ್ನಪ್ಪಿದ್ದಾರೆ. ಇಲ್ಲಿನ ಬಾಂಟೆನ್ ಪ್ರದೇಶದಲ್ಲಿನ ಕಾರಾಗೃಹದಲ್ಲಿ ಬುಧವಾರ ಮಧ್ಯರಾತ್ರಿ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ನೋಡನೋಡುತ್ತಿದ್ದಂತೆಯೇ ವ್ಯಾಪಿಸಿದ ಬೆಂಕಿಯಿಂದಾಗಿ 41 ಮಂದಿ ಖೈದಿಗಳು ಸಾವನ್ನಪ್ಪಿ, 8 ಮಂದಿ ಬೆಂಕಿಯ ಕೆನ್ನಲಾಗಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಮಧ್ಯೆ ಕಾರಾಗೃಹದಲ್ಲಿದ್ದ ಇತರೆ ಖೈದಿಗಳನ್ನು ಸ್ಥಳಾಂತರಿಸಲಾಗಿದೆ. ಇನ್ನು 600 ಮಂದಿ ಖೈದಿಗಳನ್ನು ಇರಿಸಲು ಸಾಮರ್ಥ್ಯವಿದ್ದು ಇಲ್ಲಿ 2000 ಮಂದಿ ಖೈದಿಗಳನ್ನು ಇರಿಸಲಾಗಿದೆ.
ಈ ಜೈಲಿಗೆ 600 ಮಂದಿಯನ್ನು ಇರಿಸುವ ಸಾಮರ್ಥ್ಯವಿದ್ದು, ಆದ್ರೆ ಇಲ್ಲಿ 2000 ಮಂದಿಯನ್ನು ಇರಿಸಲಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಜೈಲಿನ ಅವ್ಯವಸ್ಥೆಯನ್ನ ಖಂಡಿಸಿ ರೊಚ್ಚಿಗೆದ್ದ ಖೈದಿಗಳೇ ಬೆಂಕಿ ಹಚ್ಚಿದ್ದಾರೆ ಅಂತ ಹೇಳಲಾಗ್ತಿದೆ. ಬೆಂಕಿ ಹೊತ್ತಿಉರಿಯುತ್ತಿದ್ದ ವೇಳೆ ಹಲವು ಮಂದಿ ಖೈದಿಗಳು ಪರಾರಿಯಾಗಿದ್ದಾರೆ. ಈ ಕುರಿತು ಪೊಲೀಸರ ತಂಡ ತನಿಖೆ ಕೈಗೊಂಡಿದೆ.