Friday, September 12, 2025

Latest Posts

ನೇಪಾಳದ ಜೈಲಿಗೆ ಬೆಂಕಿ – 7,000 ಕೈದಿಗಳು ಪರಾರಿ!

- Advertisement -

ನೇಪಾಳದಲ್ಲಿ ಪ್ರತಿಭಟನೆಗಳು ಹಿಂಸಾತ್ಮಕ ರೂಪ ತಾಳಿವೆ. ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಕಟದ ಸ್ಥಿತಿಯನ್ನು ಉಂಟುಮಾಡಿದೆ. ಮಂಗಳವಾರ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಹಾಗೂ ರಾಷ್ಟ್ರಪತಿಯ ರಾಜೀನಾಮೆ ನೀಡಿದ್ರು. ಬಳಿಕ ರಾಷ್ಟ್ರದಾದ್ಯಂತ ವಿವಿಧ ಜೈಲುಗಳಲ್ಲಿ ಗೊಂದಲ ಉಂಟಾಗಿ, ಸಾವಿರಾರು ಕೈದಿಗಳು ಪರಾರಿಯಾಗಿದ್ದಾರೆ.

ಪಶ್ಚಿಮ ನೇಪಾಳದ ಬಂಕೆ ಜಿಲ್ಲೆಯ ನೌಬಾಸ್ತಾ ಸುಧಾರಣಾ ಗೃಹದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಘರ್ಷಣೆಯಲ್ಲಿ ಐದು ಬಾಲ ಅಪರಾಧಿಗಳು ಭದ್ರತಾ ಸಿಬ್ಬಂದಿಯ ಗುಂಡೇಟಿಗೆ ಬಲಿಯಾದರು. ಬಂಧಿತರು ಜೈಲಿನ ಸಿಬ್ಬಂದಿಯಿಂದ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳಲು ಪ್ರಯತ್ನಿಸಿದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ನಾಲ್ವರು ಮತ್ತಷ್ಟು ಗಂಭೀರವಾಗಿ ಗಾಯಗೊಂಡಿದ್ದಾರೆ.

ನೌಬಾಸ್ತಾ ಸುಧಾರಣಾ ಗೃಹದಲ್ಲಿ 176 ಮಂದಿಯೊಳಗಿನ 76 ಬಂಧಿತರು ಅವ್ಯವಸ್ಥೆಯ ಸಮಯದಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ, ದೇಶಾದ್ಯಂತ ಸುಮಾರು 7,000ಕ್ಕೂ ಹೆಚ್ಚು ಕೈದಿಗಳು ಪರಾರಿಯಾಗಿದ್ದಾರೆ.

ಜೈಲುಗಳಿಂದ ಕೈದಿಗಳ ಪರಾರಿಯ ಹಿನ್ನೆಲೆ ಸಾರ್ವಜನಿಕ ಆಕ್ರೋಶ, ಆಧುನಿಕ ತಂತ್ರಜ್ಞಾನ ಬಳಸಿ ಸಂಘಟಿತ GenZ ಪ್ರತಿಭಟನೆಗಳು ಮತ್ತು ಸರ್ಕಾರದ ಧಿಕ್ಕಾರಕ್ಕೆ ಕಾರಣವಾಗಿದೆ. ಈ ಪ್ರತಿಭಟನೆಗಳ ಲಾಭವನ್ನು ಪಡೆದುಕೊಂಡು ಹಲವಾರು ಕೈದಿಗಳು ದಾಳಿ ನಡೆಸಿ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಯಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಹಿಂಸಾಚಾರ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ನೇಪಾಳ ಸೇನೆ ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ ಮಾಡಿದ್ದು, ರಾಷ್ಟ್ರವ್ಯಾಪಿ ನಿರ್ಬಂಧಿತ ಆದೇಶಗಳನ್ನು ಪ್ರಕ್ರಿಯೆಗೊಳಿಸಿದೆ. ರಾಷ್ಟ್ರದಲ್ಲಿ ನಿಯಂತ್ರಣ ಸ್ಥಾಪಿಸಲು ಭದ್ರತಾ ಪಡೆಗಳು ಯತ್ನಿಸುತ್ತಿರುವ ಸಂದರ್ಭದಲ್ಲಿ, ತಕ್ಷಣದ ಕ್ರಮ ಕೈಗೊಳ್ಳಲಾಗಿದೆ.

ವರದಿ : ಲಾವಣ್ಯ ಅನಿಗೋಳ

- Advertisement -

Latest Posts

Don't Miss