ಮಧ್ಯರಾತ್ರಿ ಮನೆಗೆ ಆಕಸ್ಮಿಕ ಬೆಂಕಿ : ಒಂದೇ ಕುಟುಂಬದ 6ಜನ ಸಾವು

ಹೈದರಾಬಾದ್: ರಾತ್ರಿ ಮಲಗಿದ್ದ ವೇಳೆ ಮನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿದ್ದು, ಒಂದೇ ಕುಟುಂಬದ 6 ಜನರು ಮೃತಪಟ್ಟಿದ್ದಾರೆ. ಶಿವಯ್ಯ (50), ಪದ್ಮಾ (45), ಪದ್ಮಾ ಅವರ ತಂಗಿ ಮಗಳು ಮೌನಿಕ (23) ಮತ್ತು ಆಕೆಯ ಇಬ್ಬರು ಮಕ್ಕಳು ಸಜೀವ ದಹನಗೊಂಡಿದ್ದಾರೆ. ತೆಲಂಗಾಣದ ಮಂಚಾರ್ಯಾಲದಲ್ಲಿ ಘಟನೆ ನಡೆದಿದೆ.

ಮೋದಿ ಹೇಳಿಕೆಯನ್ನು ಸ್ವಾಗತಿಸುತ್ತೇವೆ : ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸುವ ನಿರ್ಧಾರಕ್ಕೆ ಅಮೇರಿಕಾ ಸಾಥ್

ಶಿವಯ್ಯ ಮತ್ತು ಪದ್ಮಾ ದಂಪತಿ ಮನೆಯಲ್ಲಿ ಬೆಂಕಿ ಅವಘಡವಾಗಿದೆ. ಮನೆಗೆ ಪದ್ಮಾ ಅವರ ತಂಗಿ ಮಗಳು ಮತ್ತು ಆಕಯ ಇಬ್ಬರು ಮಕ್ಕಳು ಬಂದಿದ್ದರು. ರಾತ್ರಿ ಊಟ ಮಾಡಿ ಮಲಗಿದ ನಂತರ ಆಕಸ್ಮಿಕವಾಗಿ ಮನೆಯಲ್ಲಿ ಬೆಂಕಿ ಕಾಣಿಸಿದೆ. ನಿದ್ದೆಯಲ್ಲಿದ್ದ ಕುಟುಂಬದವರು ಬೆಂಕಿಗೆ ಆಹುತಿಯಾಗಿದ್ದಾರೆ. ಘಟನೆ ಬಗ್ಗೆ ಮಂದಮರ್ರಿಯ ಸರ್ಕಲ್ ಇನ್ಸ್‌ಪೆಕ್ಟರ್‌ ಮಾಹಿತಿ ನೀಡಿದ್ದಾರೆ.

ಅಮಿತಾಬ್ ಬಚ್ಚನ್ ಗೆ ‘ಭಾರತ ರತ್ನ ಪ್ರಶಸ್ತಿ’ ನೀಡಲು ಮಮತಾ ಬ್ಯಾನರ್ಜಿ ಮನವಿ

ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜೆಡಿಎಸ್ ಮುಖಂಡ, ನಾರಾಯಣಗೌಡ ಗಲಾಟೆ

About The Author