www.karnatakatv.net :ದೆಹಲಿ: ವಾಯು ಮಾಲಿನ್ಯ ನಿಯಂತ್ರಣದ ಹಿನ್ನಲೆಯಲ್ಲಿ ದೆಹಲಿಯಲ್ಲಿ ಮುಂದಿನ 3 ತಿಂಗಳವರೆಗೆ ಪಟಾಕಿನ್ನು ಹಚ್ಚುವಂತಿಲ್ಲ ಎಂದು ಮಾಲಿನ್ಯ ನಿಯಂತ್ರಣ ಸಮಿತಿ ಆದೇಶಿಸಿದೆ.
ವಾಯು ಮಾಲಿನ್ಯ ನಿಯಂತ್ರಣದ ಸಲುವಾಗಿ ಪಟಾಕಿಯನ್ನು ಮಾರುವುದು ಮತ್ತು ಸಿಡಿಸುವುದನ್ನು 2022ರ ಜನವರಿ 1ರವರೆಗೆ ನಿಷೇಧಿಸಿ ಆದೇಶವನ್ನು ಹೊರಡಿಸಿದ್ದರು. ಪಟಾಕಿಯನ್ನು ಸಿಡಿಸುವದರಿಂದ ವಾಯು ಮಾಲಿನ್ಯವಾಗುವುದು ಹಾಗೂ ಶ್ವಾಸಕೋಶ ಸಂಬಂಧಿತ ಕಾಯಿಲೆ ಬರುವ ಕಾರಣದಿಂದ ಹಲವು ಪರಿಣಿತರು ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದರು,
ವಾಯುಮಾಲಿನ್ಯದ ಕುರಿತು ಸಲಹೆಯನ್ನು ಆಧರಿಸಿ ಪಟಾಕಿಯನ್ನು ನಿಷೇಧ ಮಾಡುವುದಾಗಿ ಮಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ದೆಹಲಿಯ ಸರ್ಕಾರ ತಿಳಿಸಿದೆ. ಅದಾಗ್ಯೂ ಕೊರೊನಾ ಸಂಧರ್ಬದಲ್ಲಿ ವೃದ್ದರು ಮತ್ತು ಮಕ್ಕಳ ಶ್ವಾಸಕೊಶಕ್ಕೆ ಹಾನಿಯನ್ನುಂಟು ಮಾಡುವ ಸಾಧ್ಯತೆಯು ಹೆಚ್ಚಿದ್ದು, ಪಟಾಕಿಯ ಬಳಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಸರ್ಕಾರ ತಿಳಿಸಿದೆ.
ಸಾಲು ಸಾಲು ಹಬ್ಬಗಳು ಬರುತ್ತಿದ್ದಂತೆ ವಾಯುಮಾಲಿನ್ಯ ಕ್ಕೆ ಕಾರನವಾಗುವುದು ಎಂದು ತಿಳಿಸಿದ್ದಾರೆ, ದೆಹಲಿಯಲ್ಲಿ ವಾಯುಮಾಲಿನ್ಯ ತುಂಬಾಯಿದ್ದು, ಅಲ್ಲಿನ ಜನರು ಉಸಿರಾಡಲು ಪರದಾಡುವಂತಾಗಿದೆ. ಶ್ವಾಸಕೋಶದ ಕಾಯಿಲೆಗೆ ಬಳಲುವ ಸಂಖ್ಯೆ ಹೆಚ್ಚಾಗಿದೆ.
ಕರ್ನಾಟಕ ಟಿವಿ- ದೆಹಲಿ