Sunday, November 16, 2025

Latest Posts

ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ನೋಡಿದ ರೌಡಿಶೀಟರ್ ಮೇಲೆ ಫೈರಿಂಗ್‌

- Advertisement -

Gadaga News: ಗದಗ: ಗದಗದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ ಆರೋಪಿ ಮೇಲೆ ಗುಂಡು ಹಾರಿಸಲಾಗಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೆಪ್ ಆಗಲು ಯತ್ನಿಸಿದ ರೌಡಿಶೀಟ‌ರ್ ಮೇಲೆ ಪೊಲೀಸರು ಫೈರಿಂಗ್ ಮಾಡಿರುವ ಘಟನೆ ಗದಗ ಜಿಲ್ಲೆಯ ಲಕ್ಕುಂಡಿ ಕಣಗಿನಹಾಳ ರಸ್ತೆಯಲ್ಲಿ ನಡೆದಿದೆ.

ರಾಬರಿ ಕೇಸ್ ಗೆ ಸಂಬಂಧಿಸಿದಂತೆ ಸ್ಥಳ ಮಹಜರಿಗೆ ಬಂದಿದ್ದ ಪೊಲೀಸರ ಮೇಲೆ ಕಲ್ಲೆಸೆದು ಎಸ್ಕೆಪ್ ಗೆ ಟ್ರೈ ಮಾಡಿದ್ದ ರೌಡಿಶೀಟರ್ ಮೇಲೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡುಹಾರಿಸಿದ್ದಾರೆ.

ಪೋಲಿಸ್‌ ಹೆಸರಿನಲ್ಲಿ ರಾಬರಿ ಮಾಡುತ್ತಿದ್ದ ಆರೋಪಿ ಸಂಜಯ ಮೇಲೆ ಪಿಎಸ್ ಐ ಸಂಗಮೇಶ್ ಶಿವಯೋಗಿ ಅವರಿಂದ ಫೈರಿಂಗ್ ನಡೆದಿದ್ದು, ಘಟನೆಯಲ್ಲಿ ಪೊಲೀಸ್‌ ಸಿಬ್ಬಂದಿ ಪ್ರಕಾಶ್ ಗಾಣಿಗೇರ್ ಗೆ ಕೈ, ಕಾಲಿಗೆ ಗಾಯಗಳಾಗಿವೆ.

ಸಂಜಯ್ ವಿರುದ್ಧ ರಾಬರಿ, ಕೊಲೆಯತ್ನಕ್ಕೆ ಸಂಬಂಧಿಸಿದಂತೆ 12 ಕೇಸ್ ದಾಖಲಾಗಿತ್ತು. ಇನ್ನೂ ಗಾಯಗೊಂಡ ಆರೋಪಿ ಸಂಜಯ್ ಕೊಪ್ಪದ್, ಪಿಸಿ ಪ್ರಕಾಶ್ ಗೆ ಜಿಮ್ಸ್ ನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

- Advertisement -

Latest Posts

Don't Miss