- Advertisement -
www.karnatakatv.net: ರಾಷ್ಟ್ರೀಯ- ಭೋಪಾಲ್- ಮಧ್ಯಪ್ರದೇಶದಲ್ಲಿ ಕೊರೊನಾ ವೈರಸ್ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಗೆ ಮೊದಲ ಬಲಿಯಾಗಿದೆ. ಓರ್ವ ಮಹಿಳೆ ಸಾವನ್ನಪ್ಪಿರುವುದಾಗಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸರಂಗ್ ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಡೆಲ್ಟಾ ಪ್ಲಸ್ ವೈರಸ್ ಐವರಲ್ಲಿ ಧೃಡಪಟ್ಟಿತ್ತು. ಈ ಐವರಲ್ಲಿ ನಾಲ್ವರು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರಿಂದ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಇನ್ನು, ಮೃತ ಮಹಿಳೆ ಉಜ್ಜೈನಿ ಮೂಲದವರಾಗಿದ್ದು 59 ವರ್ಷ ವಯಸ್ಸಾಗಿತ್ತು ಆದ್ರೆ, ಆಕೆ ಲಸಿಕೆ ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ.. ಈಕೆಗೆ ಮೇ.17ರಂದು ಕೋವಿಡ್ ಧೃಡಪಟ್ಟಿತ್ತು. ಮೇ 23ರಂದೇ ಸಾವನ್ನಪ್ಪಿದ್ದಾರೆ. ಮೃತ ಮಹಿಳೆಗೆ ರೂಪಾಂತರಿ ವೈರಸ್ ತಗುಲಿರುವುದು ಮಂಗಳವಾರ ಗೊತ್ತಾಗಿದೆ ಎಂದು ಜಿಲ್ಲಾಧಿಕಾರಿ ಆಶಿಶ್ ಸಿಂಗ್ ತಿಳಿಸಿದ್ದಾರೆ.
- Advertisement -