Sunday, August 10, 2025

Latest Posts

‘ಲಿಂಗ ಸಮಾನತೆ’ಯತ್ತ ಮೊದಲ ಹೆಜ್ಜೆ ; ಎಂ.ಎo.ನರವಣೆ

- Advertisement -

www.karnatakatv.net: ಮಹಿಳೆಯರನ್ನು ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಸೇರ್ಪಡೆಗೆ ಅವಕಾಶ ನೀಡುವ ಮೂಲಕ ರಕ್ಷಣಾ ಇಲಾಖೆ ‘ಲಿಂಗ ಸಮಾನತೆ’ಯತ್ತ ಮೊದಲ ಹೆಜ್ಜೆ ಇಟ್ಟಿದ್ದು, ನ್ಯಾಯಸಮ್ಮತ ಮತ್ತು ವೃತ್ತಿಪರತೆಯಿಂದ ಕಲಿಕೆಯ ಮೂಲಕ ಅವರನ್ನು ಸ್ವಾಗತಿಸುತ್ತಿದ್ದೇವೆ’ ಎಂದು ಸೇನಾ ಮುಖ್ಯಸ್ಥ ಎಂ.ಎo.ನರವಣೆ ತಿಳಿಸಿದರು.

‘ಎನ್‌ಡಿಎಗೆ ಮಹಿಳಾ ಅಭ್ಯರ್ಥಿಗಳ ಪ್ರವೇಶ ಆರಂಭವಾದ ಮೇಲೆ, ಭಾರತೀಯ ಸಶಸ್ತ್ರಪಡೆಗಳು ಅವರೆಲ್ಲರನ್ನೂ ನ್ಯಾಯಸಮ್ಮತ ಮತ್ತು ವೃತ್ತಿಪರತೆಯೊಂದಿಗೆ ಸ್ವಾಗತಿಸುತ್ತೀರಿ ಎಂದು ನಿರೀಕ್ಷಿಸುತ್ತೇವೆ’ ಎಂದು ನರವಣೆ ಹೇಳಿದರು. ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ 141ನೇ ಕೋರ್ಸ್ ಪಾಸಾದ ಕೆಡೆಟ್‌ಗಳ ಪರೇಡ್ ಪರಿಶೀಲಿಸಿದ ನಂತರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರು ರಕ್ಷಣಾ ಕ್ಷೇತ್ರ ಪ್ರವೇಶಿಸುವ ಮೂಲಕ ಬಲವರ್ಧನೆಗೊಳ್ಳುತ್ತಿದ್ದಾರೆ, ಕಳೆದ ಸೆಪ್ಟೆಂಬರ್‌ನಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಹಾಗೂ ನೌಕಾ ಅಕಾಡೆಮಿ ಪ್ರವೇಶ ಪರೀಕ್ಷೆ ಬರೆಯಲು ಅವಿವಾಹಿತ ಮಹಿಳೆಯರಿಗೆ ಅನುಮತಿ ದೊರೆತಿದೆ. ನವೆಂಬರ್‌ನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದ್ದು, ಮುಂದಿನ ವರ್ಷ ಮೇ ತಿಂಗಳ ನಂತರ ಪ್ರವೇಶಾವಕಾಶ ಆರಂಭವಾಗುತ್ತದೆ.

ಹಾಗೇ ‘ವರ್ಷಗಳು ಉರುಳಿದಂತೆ ನಾವು ಬೆಳೆಯುತ್ತೇವೆ, ಪ್ರಬುದ್ಧರಾಗುತ್ತೇವೆ. ಹಾಗೆಯೇ, ಪಠ್ಯಕ್ರಮ ಬದಲಾದಂತೆ ತರಬೇತಿಯ ವಿಧಾನವೂ ಬದಲಾಗಿದೆ. ಕೋರ್ಸ್ನಲ್ಲಿನ ವಿಷಯಗಳೂ ಪರಿಷ್ಕರಣೆಯಾಗಿವೆ. ನಾವು ಹೆಚ್ಚು ಕಲಿತಿದ್ದೇವೆ, ಸುಸಜ್ಜಿತರಾಗಿದ್ದೇವೆ. ಎಂಥ ಸವಾಲುಗಳನ್ನು ಎದುರಿಸಲು ಸಿದ್ದರಾಗಿದ್ದೇವೆ’ ಎಂದು ಹೇಳಿದರು.

- Advertisement -

Latest Posts

Don't Miss