Saturday, July 27, 2024

Latest Posts

Karnataka ರಾಜ್ಯ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ನ ಪ್ರಥಮ ವರ್ಷದ ವಾರ್ಷಿಕೋತ್ಸವ..!

- Advertisement -

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddabbalapura) ನಗರದ ಶ್ರೀ ಸಾಯಿಬಾಬಾ  ದೇವಾಲಯದ (Temple of Sri Sai Baba) ಸಮೀಪ ಮಾರ್ಚ್ 1 ರಂದುಸಂಜೆ 6 ಗಂಟೆಗೆ  ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ (Dasoha Seva Trust of Karnataka State Animal Birds) ಪ್ರಥಮ ವರ್ಷದ ವಾರ್ಷಿಕೋತ್ಸವ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಮುನಿರಾಜು (M. Muniraju) ತಿಳಿಸಿದರು. ನಗರದ ಪ್ರವಾಸಿಮಂದಿರಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಾರ್ಷಿಕೋತ್ಸವ ಸಮಾರಂಭದಲ್ಲಿ ತಪಸೀಹಳ್ಳಿಯ ಶ್ರೀ ಪುಷ್ಪಾಂಡಜ ಮಹರ್ಷಿ, ಫಾದರ್ ಡಿಸೋಜ, ಮೌಲಾನ ಮುಪ್ತಿ, ಮೊಹ್ಮದ್ ಖಲೀಂವುಲ್ಲಾ, ರಶಾದಿಸಾಬ್ ಸೇರಿದಂತೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ (K. Srinivas, District Collector), ಉಪವಿಭಾಗಾಧಿಕಾರಿ ಅರುಳ್ ಕುಮಾರ್ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮೂರು ಧರ್ಮಗಳ ಗುರುಗಳನ್ನು ಈ ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಅವರ ಸಲಹೆ ಸಹಕಾರ ಪಡೆಯಲಿದ್ದೇವೆ ಎಂದು ಮಾತನಾಡಿದರು. ನಂತರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ಸಂಘದ ಪ್ರಧಾನ ಕಾರ್ಯದರ್ಶಿ ರಾಮ್ ಕುಮಾರ್ ಮಾತನಾಡಿ ಕೋವಿಡ್ (covid) ಸಂದರ್ಭದಲ್ಲಿ ಜನತೆ ಮನೆಯಿಂದ ಹೊರ‌ ಬರಲಾಗದ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳಿಗೆ ಉಂಟಾದ ಆಹಾರ ಅಭಾವವನ್ನು  ನೀಗಿಸುವ ಸಲುವಾಗಿ  ಆರಂಭಿಸಲಾದ ಈ ಕಾರ್ಯ ಟ್ರಸ್ಟ್ ಆಗಿ ಬೆಳೆದಿದ್ದು ಹೆಮ್ಮೆಯ ವಿಷಯ ಆದ್ಧರಿಂದ ಮಾರ್ಚ್ 1ರಂದು ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ. ನಗರದ ರಂಗಪ್ಪ ಸರ್ಕಲ್ ನಿಂದ ಪ್ರತಿ ನಿತ್ಯ ನಾಲ್ಕು ವಾಹನಗಳಲ್ಲಿ ತಾಲೂಕಿನ ನಾಲ್ಕು ದಿಕ್ಕುಗಳಿಗೂ ತೆರಳಿ ಪ್ರಾಣಿ, ಪಕ್ಷಿಗಳಿಗೆ ಆಹಾರ ನೀಡಲಾಗುತ್ತಿದೆ. ಈ ಮುಂಚೆ ಅಲ್ಪ ಪ್ರಮಾಣದಲ್ಲಿ ಆರಂಭವಾದ ಈ ಸೇವೆ ಇಂದು ಪ್ರತಿ ನಿತ್ಯ 5 ಸಾವಿರಕ್ಕೂ ಹೆಚ್ಚು ಕೋತಿ ಹಾಗೂ ಹಸುಗಳಿಗೆ‌ ಆಹಾರ ನೀಡಲಾಗುತ್ತಿದೆ. ಅಲ್ಲದೆ ತಾಲೂಕಿನ ವಿವಿಧೆಡೆಗಳಲ್ಲಿ 80 ಕ್ಕೂ ಹೆಚ್ಚು ನೀರಿನ ತೊಟ್ಟಿ ನಿರ್ಮಿಸಿ, ಪ್ರಾಣಿ ಪಕ್ಷಿಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ರಾಮ್ ಕುಮಾರ್ ತಿಳಿಸಿದರು.

- Advertisement -

Latest Posts

Don't Miss