Tuesday, December 3, 2024

Latest Posts

ಮೀನುಗಾರ ಈಗ ಕೋಟಿ ವೀರ…!

- Advertisement -

www.karnatakatv.net :ಮಹಾರಾಷ್ಟ್ರದ ಮೀನುಗಾರನೊಬ್ಬ ಕಣ್ಮುಚ್ಚಿ ಕಣ್ಣು ತೆಗೆಯೋಷ್ಟರಲ್ಲೇ ಕೋಟಿ ಒಡೆಯನಾಗಿದ್ದಾನೆ. ಸೀ ಗೋಲ್ಡ್ ಅಂತಾನೇ ಕರೆಸಿಕೊಳ್ಳೋ ವಿಶಿಷ್ಟ ತಳಿಯ ಮೀನುಗಳು ಆತ ಬಿಸಿದ್ದ ಬಲೆ ಬಿದ್ದು ಆತನ ಅದೃಷ್ಟ ಖುಲಾಯಿಸಿದೆ.

ಇಲ್ಲಿನ ಪಾಲ್ಘರ್ ಜಿಲ್ಲೆಯ ಮೀನುಗಾರ ಚಂದ್ರಕಾಂತ್ ಎಂಬುವರಿಗೆ ಘೋಲ್ ಅನ್ನೋ ವಿಶಿಷ್ಟ ತಳಿಯ ಮೀನು ದೊರೆತಿವೆ.  ಇನ್ನು ಅಪರೂಪದ ಗುಣಗಳನ್ನು ಹೊಂದಿರೋ ಈ ಮೀನುಗಳಿಂದ ನಾನಾ ರೋಗಗಳಿಗೆ ಔಷಧಿಗಳನ್ನು ತಯಾರಿಸಲಾಗುತ್ತೆ. ಇಂತಹ ಸುಮಾರು 157 ಮೀನುಗಳು ಚಂದ್ರಕಾಂತ್ ಹಾಕಿದ್ದ ಬಲೆಯಲ್ಲಿ ಸಿಲುಕಿದ್ವು. ಸಮುದ್ರದ ಚಿನ್ನ ಅಂತಲೇ ಖ್ಯಾತಿ ಗಳಿಸಿರೋ ಈ ಮೀನುಗಳನ್ನ ಇದೀಗ ಬಿಹಾರ ಮತ್ತು ಉತ್ತರ ಪ್ರದೇಶದ ವ್ಯಾಪಾರಿಗಳು ಬರೋಬ್ಬರಿ 1 ಕೋಟಿ 33 ಲಕ್ಷಕ್ಕೆ ಖರೀದಿ ಮಾಡಿದ್ದಾರೆ. ಈ ಮೀನುಗಳಿಗೆ ಮಲೇಷಿಯಾ, ಥೈಲ್ಯಾಂಡ್, ಸಿಂಗಾಪುರ, ಜಪಾನ್ ಸೇರಿದಂತೆ ಇತರೆ ದೇಶಗಳಲ್ಲಿ ಭಾರೀ ಬೇಡಿಕೆ ಇದೆ.

- Advertisement -

Latest Posts

Don't Miss