- Advertisement -
www.karnatakatv.net :ಎಐಎಂಎಎಂ ಪಕ್ಷದ ಸಂಸ್ಥಾಪಕ ಅಸಾದುದ್ದಿನ್ ಓವೈಸಿ ಯವರ ಮನೆ ಮೇಲೆ ದಾಳಿ ನಡೆಸಿದ್ದ ಆರೋಪದ ಮೇಲೆ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ನಿನ್ನೆ ಸಂಜೆ ಅಸಾದುದ್ದೀನ್ ಓವೈಸಿಯವರ ದೆಹಲಿಯ ನಿವಾಸದ ಮೇಲೆ ಹಿಂದೂ ಸಂಘಟನೆಯೊಂದರ ಸದಸ್ಯರು ದಾಳಿ ನಡೆಸಿದ್ರು. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಇನ್ನು ಹಿಂದೂಗಳ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿದ್ದ ಹಿನ್ನೆಲೆಯಲ್ಲಿ ಓವೈಸಿ ಮನೆ ಮೇಲೆ ಹಿಂದೂ ಸಂಘಟನೆಯ ಸದಸ್ಯರು ದಾಳಿ ಮಾಡಿದ್ದರು ಅಂತ ತಿಳಿದುಬಂದಿದೆ.
ಇನ್ನು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರೋ ಅಸಾದುದ್ದೀನ್ ಓವೈಸಿ, ಈ ದಾಳಿ ಹಿಂದೆ ಬಿಜೆಪಿ ಕೈವಾಡವಿದೆ. ಹೀಗೆ ಸಂಸದನ ಮನೆ ಮೇಲೆ ದಾಳಿ ನಡೆಸಿರೋ ಬಿಜೆಪಿ ದೇಶಕ್ಕೆ ಈ ಮೂಲಕ ಯಾವ ಸಂದೇಶ ನೀಡಲು ಹೊರಟಿದೆ ಅಂತ ಪ್ರಶ್ನಿಸಿದ್ದಾರೆ.
- Advertisement -