Thursday, June 19, 2025

Latest Posts

Flex: ಫ್ಲೆಕ್ಸ್ ಹಾಕಿದ್ದಕ್ಕೆ ಬಿಬಿಎಂಪಿ ಗೆ ದಂಡ ಕಟ್ಟಿದ ಕೇಸ್ ಗ್ರ್ಯಾಂಡ್ ಕಂಪನಿ..!

- Advertisement -

ಬೆಂಗಳೂರು: ರಸ್ತೆ ಬದಿಯಲ್ಲಿ ಪ್ಲೆಕ್ಸ್‌ಗಳನ್ನು ಅಳವಡಿಸಿದ Casa Grand ಸಂಸ್ಥೆಗೆ 50,000 ರೂ. ದಂಡ ವಿಧಿಸಿರುವ ಬಗ್ಗೆ ಬಿಬಿಎಂಪಿ ಇಲಾಖೆ ಅನುಮತಿ ಇಲ್ಲದೆ ಬ್ಯಾನರ್ ಅಳವಡಿಸಿದರೆ ದಂಡ ವಿದಿಸುವ ಕುರಿತು ಎಚ್ಚರಿಕೆ ನೀಡಿದರು.

ಬಿಬಿಎಂಪಿ ರಾಜರಾಜೇಶ್ವರಿನಗರ ವಲಯದ ಕೆಂಗೇರಿ ವಿಭಾಗದ ವಾರ್ಡ್ ಹೆಮ್ಮಿಗೆಪುರ ವ್ಯಾಪ್ತಿಯಲ್ಲಿನ ತಲಘಟ್ಟಪುರ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ Casa Grand ವಸತಿ ಸಮುಚ್ಚಯ ನಿರ್ಮಾಣ ಮಾಡುವ ಸಂಸ್ಥೆಯು ಪ್ಲೆಕ್ಸ್‌ಗಳನ್ನು ಹಾಕಿದ್ದು, ಸದರಿ ಪ್ಲೆಕ್ಸ್‌ಗಳನ್ನು ತೆರವುಗೊಳಿಸಿ 50,000 ರೂ. ಗಳ ದಂಡವನ್ನು ವಸೂಲಿ ಮಾಡಲಾಗಿರುತ್ತದೆ.

ಸಹಾಯಕ ಕಾರ್ಯಪಾಲಕ ಅಭಿಯಂತರರು(ಘತ್ಯಾನಿ) ಪೂರ್ಣಿಮಾ, ಮೋತಿಲಾಲ್ ಚೌಹಾಣ್ ವಾರ್ಡ್ ಮಾರ್ಷಲ್ ಸೇರಿದಂತೆ ಇನ್ನಿತರರು ವಲಯದ ಅಧೀಕ್ಷಕ ಅಭಿಯಂತರರಾದ ಶ್ರೀ ನಂದೀಶ.ಜೆ.ಆರ್ ರವರ ನಿರ್ದೇಶನದಂತೆ ಕಾರ್ಯಾಚರಣೆ ನಡೆಸಿ Casa Grand ಸಂಸ್ಥೆಗೆ 50,000 ರೂ‌. ದಂಡ ವಿಧಿಸಿ ವಸೂಲಿ ಮಾಡಲಾಗಿರುತ್ತದೆ.

ರಾಜರಾಜೇಶ್ವರಿ ನಗರ ವಲಯ ಆಯುಕ್ತರಾದ ಬಿ. ರೆಡ್ಡಿಶಂಕರ ಬಾಬು ಮತ್ತು ವಲಯ ಜಂಟಿ ಆಯುಕ್ತರಾದ ಅಜಯ್.ವಿ. ರವರು ಮಾರ್ಗದರ್ಶನ ನೀಡಿ ದಂಡ ವಸೂಲಿ ಮಾಡಲು ಆದೇಶ ನೀಡಿರುತ್ತಾರೆ.

Bank Officer : ಮಂಗಳೂರು ಸ್ವಿಮ್ಮಿಂಗ್ ಪೂಲ್ ನಲ್ಲಿ ಕೇರಳ ಮೂಲದ ಬ್ಯಾಂಕ್ ಅಧಿಕಾರಿ ಶವ ಪತ್ತೆ..?!

Bhramin Protest: ಸನಾತನ ಧರ್ಮದ ಅವಹೇಳನಕಾರಿ ಹೇಳಿಕೆ ವಿರುದ್ದ ಪ್ರತಿಭಟನೆ.!

Gold chain: ಕಸ ಗುಡಿಸುವ ಮಹಿಳೆಯ ಸರ ಕದ್ದು ಪರಾರಿಯಾದ ಖದೀಮರು..!

- Advertisement -

Latest Posts

Don't Miss