Monday, November 25, 2024

Latest Posts

ಕತ್ತರಿ ಮಿಸ್ ಆಗಿದ್ದಕ್ಕೆ 36 ಫ್ಲೈಟ್ ಕ್ಯಾನ್ಸಲ್! – 201 ವಿಮಾನಯಾನ ವಿಳಂಬ

- Advertisement -

ಕೂದಲು ಅಥವಾ ಬಟ್ಟೆ ಕಟ್ ಮಾಡೋ ಕತ್ತರಿ ಕಾಣೆಯಾದರೆ ಏನಾಗುತ್ತೆ? ಸಿಂಪಲ್ ಆಗಿ ಹೇಳುವುದಾದರೆ ಹೊಸ ಕತ್ತರಿಯನ್ನ ಖರೀದಿ ಮಾಡಿ ಬಳಸಬಹುದು. ಆದರೆ ಜಪಾನ್​​​​ನಲ್ಲಿ ಕತ್ತರಿಯೊಂದು ಕಣ್ಮರೆ ಆಗಿದ್ದಕ್ಕೆ ಬರೋಬ್ಬರಿ 36 ವಿಮಾನಯಾನ ಹಾರಾಟವೇ ರದ್ದಾಗಿದೆ. 201 ವಿಮಾನ ಸಂಚಾರ ವಿಳಂಬ ಆಗಿದೆ. ಸಾವಿರಾರು ಪ್ರಯಾಣಿಕರು ಸಕಾಲಕ್ಕೆ ತೆರಳಲಾಗದೆ ಪರದಾಡಿದ್ದಾರೆ. ಈ ಕತ್ತರಿ ಮಿಸ್ ಆಗೋದಕ್ಕೂ ವಿಮಾನಯಾನ ವಿಳಂಬ ಆಗೋದಕ್ಕು ಒಂದು ಕುತೂಹಲಕಾರಿ ಅಂಶವೊಂದು ಬಹಿರಂಗವಾಗಿದೆ.

ಕಳೆದ ಶನಿವಾರ ಜಪಾನ್ ದೇಶದ ಹೊಕ್ಕಾಯಿಡೋ ಅನ್ನೋ ಪ್ರದೇಶದಲ್ಲಿರುವ ನ್ಯೂ ಚಿತೋಸೆ ಏರ್​​ಪೋರ್ಟ್​​​​​ನಲ್ಲಿ ಈ ವಿಚಿತ್ರ ಬೆಳವಣಿಗೆ ನಡೆದಿದೆ. ಏರ್​​ಪೋರ್ಟ್​ ಆವರಣದಲ್ಲೇ ಇರುವ ಅಂಗಡಿಯೊಂದರಲ್ಲಿ ಇದ್ದಕ್ಕಿದ್ದಂತೆ ಎರಡು ಕತ್ತರಿ ಕಾಣೆಯಾಗಿತ್ತು. ಈ ವಿಚಾರವನ್ನ ಅಂಗಡಿಯ ಸಿಬ್ಬಂದಿ ಏರ್​​ಪೋರ್ಟ್​​ನ ಭದ್ರತಾ ಸಿಬ್ಬಂದಿ ಗಮನಕ್ಕೆ ತಂದಿದ್ದರು. ವಿಮಾನ ನಿಲ್ದಾಣದ ಒಳಗಿನ ಅಂಗಡಿಯಲ್ಲಿನ ಕತ್ತರಿ ಕಾಣೆಯಾಗಿದೆ ಅಂದ್ರೆ ಅದು ದುಷ್ಕೃತ್ಯಕ್ಕೆ ಬಳಕೆ ಆಗುವ ಆತಂಕ ಇತ್ತು. ಪ್ರಯಾಣಿಕರು ಯಾರಾದರೂ ಆ ಕತ್ತರಿಯನ್ನ ಕದ್ದು ವಿಮಾನ ಏರಿ ಹೋಗಿದ್ದರೆ, ಅಲ್ಲಿ ಏನಾದರೂ ಯಡವಟ್ಟು ಮಾಡುವ ಸಾಧ್ಯತೆ ಇತ್ತು

ಇದನ್ನು ಅರಿತ ಏರ್​ಪೋರ್ಟ್​​ನ ಭದ್ರತಾ ಸಿಬ್ಬಂದಿ ಕಾಣೆಯಾಗಿದ್ದ ಕತ್ತರಿಗೆ ಹುಡುಕಾಟ ನಡೆಸಿದ್ದರು.. ಕತ್ತರಿಯನ್ನು ಪ್ರಯಾಣಿಕರು ವಿಮಾನದೊಳಕ್ಕೆ ಕೊಂಡೊಯ್ಯುವುದನ್ನ ತಪ್ಪಿಸಲು ಟೇಕ್ ಆಫ್ ಆಗಬೇಕಿದ್ದ ವಿಮಾನಗಳನ್ನೇ ನಿಲ್ಲಿಸಿಬಿಟ್ರು. ಬರೋಬ್ಬರಿ 36 ವಿಮಾನ ಹಾರಾಟ ನಿಲ್ಲಿಸಿ ಪ್ರತಿ ಪ್ರಯಾಣಿಕರನ್ನೂ ಸ್ಕ್ಯಾನ್ ಮಾಡಿ ತಪಾಸಣೆ ಮಾಡಿದ್ರು.. ಆದರೆ ಯಾರ ಬ್ಯಾಗ್​​ನಲ್ಲೂ ಕಾಣೆಯಾಗಿದ್ದ 2 ಕತ್ತರಿ ಸಿಗಲೇ ಇಲ್ಲ. ಈ ಹುಡುಕಾಟ ಮಾಡೋಕೆ ಬರೋಬ್ಬರಿ 2 ಗಂಟೆ ಸಮಯ ಹಿಡಿದಿತ್ತು. 36 ಫ್ಲೈಟ್ ಸಂಚಾರ ನಿಲ್ಲಿಸಿದ್ರೆ, ಒಟ್ಟು 201ಕ್ಕೂ ಹೆಚ್ಚು ವಿಮಾನಗಳು ತಡವಾಗಿ ಟೇಕಾಫ್/ಲ್ಯಾಂಡ್ ಆಗಬೇಕಾಯ್ತು..

ಅಂಗಡಿಯಲ್ಲಿ ನಾಪತ್ತೆಯಾಗಿದ್ದ ಕತ್ತರಿ ಹುಡುಕೋಕೆ ಮುಂದಾಗಿದ್ದ ಭದ್ರತಾ ಸಿಬ್ಬಂದಿಗೆ ಶನಿವಾರ ಎಷ್ಟು ಹುಡುಕಿದ್ರೂ ಅವು ಸಿಗಲೇ ಇಲ್ಲ.. ಆದರೆ ಮಾರನೇ ದಿನ ಅವೇ ಒಂದು ಜೊತೆ ಕತ್ತರಿಗಳು ಕಾಣೆಯಾಗಿದ್ದ ಅಂಗಡಿಯಲ್ಲೇ ಸಿಕ್ಕಿವೆ. ಅಂಗಡಿಯ ಟೇಬಲ್ ಅಡಿಯಲ್ಲೇ ಎಲ್ಲೋ ಕತ್ತರಿಗಳು ಬಿದ್ದಿದ್ದವು. ಅಂಗಡಿ ಸಿಬ್ಬಂದಿ ಯಡವಟ್ಟಿಗೆ ವಿಮಾನ ಹಾರಾಟ ವಿಳಂಬ ಆಗಿ ಸಾಕಷ್ಟು ನಷ್ಟ ಸಂಭವಿಸಿತ್ತು.

- Advertisement -

Latest Posts

Don't Miss