Saturday, December 21, 2024

Latest Posts

“ಬನಾರಸ್” ನಲ್ಲಿ ಜಾನಪದ ಹಾಡು..!

- Advertisement -

ಶಾಸಕ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ನಾಯಕನಾಗಿ ಹಾಗೂ ಸೊನಾಲ್ ಮೊಂತೆರೊ ನಾಯಕಿಯಾಗಿ ನಟಿಸಿರುವ, ಜಯತೀರ್ಥ ನಿರ್ದೇಶಿಸಿರುವ “ಬನಾರಸ್” ಚಿತ್ರ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಹಾಡುಗಳು ಸಂಗೀತ ರಸಿಕರ ಮನ ಗೆದ್ದಿದೆ.

“ಬನಾರಸ್” ಹಾಡುಗಳಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿರುವ ಸಮಯದಲ್ಲಿ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ‌.

“ಹೆಣ್ಣು ಹಡೆಯಲು ಬ್ಯಾಡಾ” ಎಂಬ ಪ್ರಸಿದ್ದ ಜಾನಪದ ಗೀತೆಯನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ‌.‌ ಅಜನೀಶ್ ಲೋಕನಾಥ್ ಅವರ ಸಮಧುರ ಸಂಗೀತದಲ್ಲಿ ಮೂಡಿಬಂದಿರುವ ಈ ಹಾಡನ್ನು ಹರ್ಷಿಕಾ ದೇವನಾಥ್ ಸುಶ್ರಾವ್ಯವಾಗಿ ಹಾಡಿದ್ದಾರೆ.

ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಪ್ಯಾನ್ ಇಂಡಿಯಾ ಸಿನಿಮಾವನ್ನು ತಿಲಕ್ ರಾಜ್ ಬಲ್ಲಾಳ್ ನಿರ್ಮಿಸಿದ್ದಾರೆ.

- Advertisement -

Latest Posts

Don't Miss