ಶಾಸಕ ಅರವಿಂದ ಬೆಲ್ಲದ ಅಭಿಮಾನಿಗಳಿಂದ ದೀಡ್ ನಮಸ್ಕಾರ

ಹುಬ್ಬಳ್ಳಿ : ಸಚಿವ ಸ್ಥಾನಕ್ಕೆ ಲಾಭಿ ಹೆಚ್ಚಾಗುತ್ತಿದೆ. ತಮ್ಮ ನಾಯಕನಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಶಾಸಕ ಅರವಿಂದ ಬೆಲ್ಲದ ಅಭಿಮಾನಿಗಳು (ದೀರ್ಘದಂಡ) ದೀಡ್ ನಮಸ್ಕಾರ ಹಾಕಿದ್ದಾರೆ.

ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ರಾಘು ಹಿರೇಗೌಡ ಎಂಬ ಅಭಿಮಾನಿಯಿಂದ ದೀಡ್ ನಮಸ್ಕಾರ ಹಾಕಿ ಸಚಿವ ಸ್ಥಾನಕ್ಕೆ ‌ಒತ್ತಾಯಿಸಿದರು. ಶಾಸಕ ಅರವಿಂದ ಬೆಲ್ಲದ ಅವರ ಜನ್ಮದಿನ‌ ಹಿನ್ನೆಲೆ ಅಭಿಮಾನಿಗಳು ಸಿದ್ಧಾರೂಢ ಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಅರವಿಂದ ಬೆಲ್ಲದ್ ಭಾವಚಿತ್ರ ಹಿಡಿದು ಸಿದ್ಧಾರೂಢರಿಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯ ಮಾಡಿ ಅರವಿಂದ್ ಬೆಲ್ಲದ ಅವರ ಪರ ಘೋಷಣೆ ಕೂಗಿದರು.

ಕರ್ನಾಟಕ ಟಿವಿ, ಹುಬ್ಬಳ್ಳಿ-ಧಾರವಾಡ

About The Author