ರಾಯಚೂರು : ಸಚಿವ ಸ್ಥಾನಕ್ಕೆ ರಾಯಚೂರು ಜಿಲ್ಲೆಯಲ್ಲಿ ಕೂಗು ಹೆಚ್ಚಾಗಿದೆ. ಜಿಲ್ಲೆಯ ಇಬ್ಬರು ಶಾಸಕರ ಪರವಾಗಿ ಪ್ರತ್ಯೇಕ ಬೇಡಿಕೆಯನ್ನ ಆಯಾ ಶಾಸಕರ ಬೆಂಬಲಿಗ ಮುಖಂಡರು ಮಂಡಿಸಿದ್ದಾರೆ. ಇನ್ನು ಪ್ರತ್ಯೇಕ ಬೇಡಿಕೆಯಿಂದ ಜಿಲ್ಲೆಯ ನಾಯಕರಲ್ಲಿನ ಬಿರುಕು ಬಟಾ ಬಯಲಾಗಿದೆ.
ದೇವದುರ್ಗ ಶಾಸಕ ಶಿವನಗೌಡ ನಾಯಕರಿಗೆ ಸಚಿವ ಸ್ಥಾನಕ್ಕಾಗಿ ಮೂವರು ಮಾಜಿ ಶಾಸಕರು ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರಿಂದ ಒತ್ತಾಯ ಮಾಡಲಾಗಿದೆ. ಮಾನ್ವಿಯ ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಗಂಗಾಧರ ನಾಯಕ ಹಾಗೂ ಮಾಜಿ ಶಾಸಕ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಅದ್ಯಕ್ಷ ತಿಪ್ಪರಾಜು ಹವಾಲ್ದಾರ ಇಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಅದೇ ರೀತಿ ರಾಯಚೂರು ನಗರದ ಮತ್ತೋರ್ವ ಶಾಸಕ ಡಾ. ಶಿವರಾಜ್ ಪಾಟೀಲರ ಪರವಾಗಿ ಇಂದು ಸಾವಿರಾರು ಜನರಿಂದ ಶಕ್ತಿ ಪ್ರದರ್ಶನ ನಡೆಯಿತು. ಡಾ. ಶಿವರಾಜ ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಜಿಲ್ಲೆಯ ಮುಖಂಡರು ಹಾಗೂ ಕಾರ್ಯಕರ್ತರಿಂದ ಒತ್ತಾಯದ ಕೂಗು ಜೋರಾಗಿತ್ತು.. ಡಾ. ಶಿವರಾಜ್ ಪಾಟೀಲರ ನೂರಾರು ಬೆಂಬಲಿಗರು ಬೈಕ್ ರ್ಯಾಲಿ, ಪಾದಯಾತ್ರೆ ನಡೆಸುವುದರ ಮೂಲಕ ಒತ್ತಾಯಿಸಿದ್ದಾರೆ..
ಅನಿಲ್ ಕುಮಾರ್, ಕರ್ನಾಟಕ ಟಿವಿ, ರಾಯಚೂರು