ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಆರಂಭವಾದ ಅನುದಾನ ಸಿಗದೇ ಅಭಿವೃದ್ಧಿ ಕೆಲಸಗಳೇ ಆಗ್ತಿಲ್ಲ ಅನ್ನೋ ಆರೋಪಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ರಾಜ್ಯಾದ್ಯಂತ ಮೂರು ತಿಂಗಳಿನಿಂದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿರಿಗೆ ವೇತನ ಪಾವತಿಯಾಗಿಲ್ಲ. ಕೊಡುವ ಅಲ್ಪ ವೇತನವೂ ಪಾವತಿಯಾಗದೇ ಹಿನ್ನಲೆ ಕಾರ್ಯಕರ್ತೆಯರು ಹಾಗೂ ಸಹಾಯಕಿರು ಹೈರಾಣಾಗಿದ್ದಾರೆ. ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ, ವೃದ್ಧರ ಆರೈಕೆ ಸೇರಿದಂತೆ ಮನೆ ನಿರ್ವಹಣೆಗೆ ವೇತನ ನಂಬಿಕೆಕೊಂಡಿರುವ ಅಂಗನವಾಡಿ ಕಾರ್ಯಕರ್ತೆಯರು ವೇತನ ವಿಳಂಬದಿಂದಾಗಿ ಸರ್ಕಾರಕ್ಕ ಹಿಡಿಶಾಪ ಹಾಕ್ತಿದ್ದಾರೆ.
ವೀಕ್ಷಕರೇ ರಾಜ್ಯ ಸರ್ಕಾರದ ಸ್ಥಿತಿ ಯಾವ ಹಂತಕ್ಕೆ ತಲುಪಿದೆ ಅಂದ್ರೆ, ಕಳೆದ ಮೂರು ತಿಂಗಳಿನಿಂದ ಗರ್ಭಿಣಿಯರು, ಬಾಣಂತಿ ಹಾಗೂ ಮಕ್ಕಳಿಗೆ ವಿರತರಿಸುವ ಮೊಟ್ಟೆ ಖರೀದಿಗೂ ಹಣ ನೀಡಿಲ್ಲ. ಅಂಗನವಾಡಿ ಕಾರ್ಯಕರ್ತೆಯರೇ ತಮ್ಮ ಕೈಯಿಂದ ಹಣ ಹಾಕಿ ಮೊಟ್ಟೆ ಖರೀದಿಸಿ ಮಕ್ಕಳಿಗೆ, ಗರ್ಭಿಣಿಯರಿಗೆ ನೀಡ್ತಿದ್ದಾರೆ. ಇನ್ನೂ ಕುತೂಹಲ ಅಂದ್ರೆ, ಈ ಕುರಿತು ಸರ್ಕಾರದ ಗಮನಕ್ಕೆ ತರಬೇಕಾದ ಅಧಿಕಾರಿಗಳೇ, ತಮ್ಮ ಕೈಯಿಂದ ಹಣ ಹಾಕಿ ಮೊಟ್ಟೆ ನೀಡಿ ಎಂದು ಕಾರ್ಯಕರ್ತೆಯರಿಗೆ ಸೂಚಿಸಿದ್ದಾರಂತೆ.. ಒಂದು ಮೊಟ್ಟೆಗೆ ಸರ್ಕಾರ 6 ರೂಪಾಯಿ ಕೊಡುತ್ತೆ. ಆದ್ರೆ, ಮಾರುಕಟ್ಟೆಯ ಬೆಲೆ 6 ರೂಪಾಯಿ 20 ಪೈಸೆ ಇದೆ. ಹೆಚ್ಚಿನ ಹಣವನ್ನು ಕಾರ್ಯಕರ್ತೆಯರೇ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಅಂಗನವಾಡಿ ಕೇಂದ್ರಗಳನ್ನು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ನಿರ್ವಹಣೆ ಮಾಡಬೇಕಾಗುತ್ತದೆ. ಈ ಅವಧಿಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ಎಂದು ನಿತ್ಯ ಉಪ್ಪಿಟ್ಟು ತಯಾರಿಸಿಕೊಡಲಾಗುತ್ತಿದೆ. ಅದಕ್ಕೆ ಬೇಕಾದ ತರಕಾರಿ, ಎಣ್ಣೆ, ಒಗ್ಗರಣೆ ಸಾಮಾನುಗಳನ್ನು ಸರ್ಕಾರ ಕೊಡಬೇಕು. ಆದ್ರೆ, ಕೇವಲ ರವೆ ಮತ್ತು ಒಂದು ಮಸಾಲೆ ಪ್ಯಾಕೇಟ್ ಮಾತ್ರ ವಿತರಣೆ ಮಾಡಲಾಗುತ್ತಿದೆ. ಸರ್ಕಾರ ಕೊಟ್ಟ ಪದಾರ್ಥಗಳನ್ನು ಬಳಸಿ ಮಕ್ಕಳಿಗೆ ಉಪ್ಪಿಟ್ಟು ನೀಡಿದ್ರೆ, ಮಕ್ಕಳು ತಿನ್ನುತ್ತಿಲ್ಲ. ಈ ಕುರಿತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಉಪಯೋಗವಿಲ್ಲ ಎಂದು ಕಾರ್ಯಕರ್ತೆಯರು ಅಳಲು ತೋಡಿಕೊಂಡಿದ್ದಾರೆ.
ಅಂಗನವಾಡಿಯಲ್ಲಿ ನಡೆಯುವ ನಿತ್ಯದ ಚಟುವಟಿಕೆಳಗನ್ನು ಮೊಬೈಲ್ನಲ್ಲಿ ದಾಖಲಿಸಿ ಇಲಾಖೆಗೆ ವರದಿ ಕಳುಹಿಸಬೇಕು. ಹೀಗಾಗಿ ಕಾರ್ಯಕರ್ತೆಯರಿಗೆ ಸರ್ಕಾರದ ವತಿಯಿಂದ ಬಿಎಸ್ಎನ್ಎಲ್ ಸಿಮ್ ಕೊಡಲಾಗಿದೆ. ಆದ್ರೆ, ಆ ಸಿಮ್ಗಳಿಗೆ ಕರೆನ್ಸಿಯನ್ನು ಹಾಕಿಲ್ಲ. ಅನಿವಾರ್ಯ ಕಾರ್ಯಕರ್ತೆಯರೇ ಸಿಮ್ಗೆ ಕರೆನ್ಸಿ ಹಾಕಿಸಬೇಕಾಗಿದೆ. ಇನ್ನೂ ಸರ್ಕಾರ ಕೊಡುತ್ತಿರೋ ಎರಡು ಸೀರೆಗಳು ಕಳಪೆ ಗುಣಮಟ್ಟದಿಂದ ಕೂಡಿರುತ್ತವೆ. ಕೇಂದ್ರಗಳಿಗೆ ಒಂದು ಆರೋಗ್ಯ ಕಿಟ್ ಕೂಡ ಕೊಡಲಾಗಿಲ್ಲ. ಈ ಹಿಂದೆ ಕೊಡಲಾಗುತ್ತಿದ್ದ ಕಾಳು, ಅನ್ನ ಸಾಂಬಾರ್, ಚಿಕ್ಕಿ ಎಲ್ಲವೂ ಬಂದ್ ಆಗಿದೆ. ಒಟ್ನಲ್ಲಿ ಕಾರ್ಯಕರ್ತೆ ಸರಿಯಾದ ಸಮಯಕ್ಕೆ ವೇತನ ನೀಡಬೇಕಾದ ಸರ್ಕಾರವೇ, ಅವರ ಹಣಕ್ಕೆ ಖನ್ನಾ ಹಾಕ್ತಿರೋದು ನಿಜಕ್ಕೂ ದುರ್ದೈವ..