Tuesday, April 22, 2025

Latest Posts

Karnataka : ಎರಡನೇ ಬಾರಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನವು ಬಿಜೆಪಿ ಪಕ್ಷಕ್ಕೆ…!!

- Advertisement -

ಉಸ್ತುವಾರಿ ಮಂತ್ರಿ, ಚಿಕ್ಕೋಡಿ ಸಂಸದರು, ಕುಡಚಿ ಶಾಸಕರು ಕಾಂಗ್ರೆಸ್ ಪಕ್ಷದವರೇ ಇದ್ದರೂ ಮುಗಳಖೋಡ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷ ಆಯ್ಕೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ. ಮುಗಳಖೋಡ ಪುರಸಭೆ ಅಧ್ಯಕ್ಷರಾಗಿ ಶಾಂತವ್ವ ಗೋಕಾಕ, ಉಪಾಧ್ಯಕ್ಷರಾಗಿ ಗಂಗವ್ವ ಬೆಳಗಲಿ ಅವಿರೋಧವಾಗಿ ಆಯ್ಕೆ ರಾಯಬಾಗ ತಹಶೀಲ್ದಾರ್ ಸುರೇಶ ಮುಂಜೆ ತಿಳಿಸಿದರು.

ಅವರು ಮುಗಳಖೋಡ ಪುರಸಭೆಯ ಸಭಾಭವನದಲ್ಲಿ ಮಂಗಳವಾರ ದಿ. 27.8.24ರಂದು ಜರುಗಿದ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಯಲ್ಲಿ ಸಂದರ್ಭದಲ್ಲಿ ಮಾತನಾಡುತ್ತ ಪುರಸಭೆಗೆ ಅಧ್ಯಕ್ಷ ಸ್ಥಾನ ‘ಹಿಂದುಳಿದ ವರ್ಗ ಅ ಮಹಿಳೆ’ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ “ಸಾಮಾನ್ಯ ಮಹಿಳೆ” ಮೀಸಲಾತಿ ನಿಗದಿಯಾಗಿತ್ತು.

 

ಅಧ್ಯಕ್ಷ ಸ್ಥಾನಕ್ಕೆ ಶಾಂತವ್ವ ಗೋಪಾಲ ಗೋಕಾಕ ಒಬ್ಬರೇ ನಾಮಪತ್ರ ಸಲ್ಲಿಸಿದರು. ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಂಗವ್ವ ಹನುಮಂತ ಬೆಳಗಲಿ ಅವರು ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಶಾಂತವ್ವ ಗೋಕಾಕ ಅಧ್ಯಕ್ಷರಾಗಿ ಗಂಗವ್ವ ಬೆಳಗಲಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.30 ತಿಂಗಳ ಕಾಲಾವಧಿಯಲ್ಲಿ ಮುಗಳಖೋಡ ಪುರಸಭೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿ ತಾಲೂಕ ಆಡಳಿತದಿಂದ ಪಟ್ಟಣದ ಅಭಿವೃದ್ಧಿ ಕಾರ್ಯಕ್ಕೆ ಎಲ್ಲ ರೀತಿ ಸಹಕಾರ ನೀಡಲಾಗುವುದೆಂದು ತಹಶೀಲ್ದಾರ್ ಸುರೇಶ ಮುಂಜೆ ತಿಳಿಸಿದರು.

ಸಂದರ್ಭದಲ್ಲಿ ಬಿಜೆಪಿ ಕುಡಚಿ ಮಂಡಲ ಅಧ್ಯಕ್ಷ ಶ್ರೀಧರ ಮೂಡಲಗಿ, ರಮೇಶ ಖೇತಗೌಡರ, ಪಿಕೆಪಿಎಸ್ ಬ್ಯಾಂಕ್ ಅಧ್ಯಕ್ಷ ಶಿವಾನಂದ ಗೋಕಾಕ, ಕುಡಚಿ ಪುರಸಭೆ ಮಾಜಿ ಅಧ್ಯಕ್ಷ ದತ್ತಾ ಸಣ್ಣಕ್ಕಿ, ಗೌಡಪ್ಪ ಖೇತಗೌಡರ, ಮಾರುತಿ ಗೋಕಾಕ, ಸಚಿನ್ ಪ್ರಧಾನಿ, ಗುತ್ತಿಗೆದಾರ ಲಕ್ಷ್ಮಣ ಗೋಕಾಕ, ಮೋಹನ್ ಲೋಹಾರ, ಗೋಪಾಲ ಗೋಕಾಕ, ಕುಮಾರ ಹಳಕಲ್ಲ, ಮುತ್ತಪ್ಪ ಬಾಳೋಜಿ, ಶಿವಬಸವ ಕಾಪಶಿ, ಗೋಪಾಲ ಯಡವಣ್ಣವರ, ಭೀಮಶಿ ಬನಶಂಕರಿ, ಕೃಷ್ಣರಾವ್ ನಾಯಿಕ, ಮಹಾದೇವ ತೇರದಾಳ, ಹಣಮಂತ ಕುಲಿಗೋಡ, ಕೇಶವ್ ವಾಡೆನ್ನವರ, ಶಿವಾನಂದ ಮೇಕ್ಕಳಕಿ, ಅಗ್ರಾಣಿ ಶೇಗುಣಶಿ, ಬಸವರಾಜ ಹೊಸಪೇಟಿ, ರಾಯಗೌಡ ಖೇತಾಗೌಡರ, ನಾಗಪ್ಪ ಹುಕ್ಕೇರಿ, ಪ್ರಕಾಶ ಪಾಟೀಲ ಇದ್ದರು

- Advertisement -

Latest Posts

Don't Miss