Sunday, December 22, 2024

Latest Posts

Forest :ಅರಣ್ಯ ಇಲಾಖೆ ಶೋಷಣೆ ವಿರುದ್ಧ ಹೊರಗುತ್ತಿಗೆ ನೌಕರರಿಂದ ಪ್ರತಿಭಟನೆ..!

- Advertisement -

ಹುಣಸೂರು: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ನಾಗರಹೊಳೆ ವನ್ಯಜೀವಿ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ನೌಕರರು ನಾಗರಹೊಳೆ ಉದ್ಯಾನದ ಹುಲಿ ಯೋಜನಾ ನಿರ್ಧೇಶಕರ ಕಚೇರಿ ಎದುರು ಪ್ರತಿಭಟನಾ ಧರಣಿ ಆರಂಭಿಸಿದ್ದಾರೆ.

ನಗರಸಭಾ ಮೈದಾನದಲ್ಲಿ ಸಮಾವೇಶಗೊಂಡ ದಿನಗೂಲಿ ಹಾಗೂ ಕ್ಷೇಮಾಭಿವೃದ್ದಿ ಸಂಘದ ನೌಕರರು ಕೈಯಲ್ಲಿ ಫಲಕ ಹಿಡಿದು ಅರಣ್ಯ ಇಲಾಖೆ ಹೊರಗುತ್ತಿಗೆ ಹಾಗೂ ಇತರೆ ಕ್ಷೇಮಾಭಿವೃದ್ದಿ ಸಂಘದ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಘೋಷಣೆ ಕೂಗಿದರು. ನಂತರ ಹುಣಸೂರಿನ ನಾಗರಹೊಳೆ ಉದ್ಯಾನವನದ ನಿರ್ದೇಶಕರ ಕಚೇರಿ ಬಳಿಗೆ ಮೆರವಣಿಗೆಯಲ್ಲಿ ಸಾಗಿ ಬಂದು ನಿರ್ದೇಶಕರ ಕಚೇರಿ ಎದುರು ಧರಣಿ ಆರಂಭಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ನಟೇಶ್ ಹೊರಗುತ್ತಿಗೆ ಪಡೆದಿರುವ ಏಜೆನ್ಸಿಯವರು ನೌಕರರ ಇಪಿಎಫ್ ಮತ್ತು ಇಎಸ್‌ಐ ಹಣ ನಿಯಮಿತವಾಗಿ ಪಾವತಿಯಾಗುತ್ತಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಿದ್ದು, ನೌಕರರ ಹಿತ ಕಾಯಬೇಕಾದ ಅಧಿಕಾರಿಗಳು ಸಹ ಪ್ರಶ್ನಿಸುತ್ತಿಲ್ಲ ಎಂದರು.

ಮುಂದುವರೆದು ಮಾತನಾಡಿ, ಪ್ರಾಣದ ಹಂಗು ತೊರೆದು ಅರಣ್ಯದೊಳಗೆ ಕೆಲಸ ಮಾಡುವವರ ಪಾಡು ಅರಣ್ಯ ರೋಧನವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಸರಿಯಾಗಿ ಸಂಬಳವೂ ಪಾವತಿಯಾಗುತ್ತಿಲ್ಲ. ಹೀಗಾದರೆ ನಮ್ಮ ಪಾಡಿರಲಿ ಊರೊಳಗಿರುವ ಕುಟುಂಬದವರು ಸಾಲಗಾರರಿಂದ ಬೈಸಿಕೊಳ್ಳುವಂತಾಗಿದೆ ಎಂದು ಹೇಳಿದರು.

ತಕ್ಷಣವೇ ಸಂಬಳ ಪಾವತಿಯಾಗಬೇಕು ಎಂದ ಅವರು ನಮ್ಮ ಇಎಸ್ ಐ ಮತ್ತು ಇಪಿಎಫ್ ಹಣದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು. ನಾಗರಹೊಳೆ ಉದ್ಯಾನದ 8 ವಲಯಗಳ ಸಂಘದ ಪದಾಧಿಕಾರಿಗಳು ಸೇರಿದಂತೆ ಕರ್ನಾಟಕ ಟಿವಿ ಎದುರು ಅಳಲನ್ನು ತೋಡಿಕೊಂಡರು

ವರದಿ :-ರವಿಕುಮಾರ್ ಹುಣಸೂರು

Guest Teachers: ವಿವಿಧ ಬೇಡಿಕೆಗಳ ಈಡೇರಿಕೆಗೆ ಅತಿಥಿ ಶಿಕ್ಷಕರು ಪ್ರತಿಭಟನೆಗೆ ನಿರ್ಧಾರ..!

Eye Donate: ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ದಾನ: ದುಃಖದ ನಡುವೆ ಕುಟುಂಬಸ್ಥರ ಮಾನವೀಯತೆ..!

Dr. BR Ambedkar: ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಊರಿನಲ್ಲಿ ಹಬ್ಬದ ವಾತಾವರಣ :

 

- Advertisement -

Latest Posts

Don't Miss