Wednesday, April 16, 2025

Latest Posts

ಕಾಡಾನೆಗಳ ಹಾವಳಿ : ಅಧ್ಯಯನಕ್ಕೆ ಮುಂದಾದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ

- Advertisement -

ಹಾಸನ : ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ದಶಕಗಳಿಂದಲೂ ಜನರು ಸರ್ಕಾರವನ್ನು ಒತ್ತಾಯಿಸುತ್ತಿದೆ. ಕೊನೆಗೆ ಜನರ ಕೂಗಿಗೆ ಮಣಿದ ಸರ್ಕಾರ ಅರಣ್ಯ ಇಲಾಖೆ ಅಧಿಕಾರಿಗಳನ್ನು ಅಧ್ಯಯನಕ್ಕೆ ಕಳುಹಿಸಿದೆ. ಈಗಾಗಲೇ ಅಧ್ಯಯನ ಆರಂಭವಾಗಿದ್ದು, ನಾಳೆ ಮುಕ್ತಾಯವಾಗಲಿದೆ. ಎಂಟು ಜನರ ತಂಡ ಅಧ್ಯಯನ ನಡೆಸುತ್ತಿದ್ದಾರೆ.

ಕಳೆದ 2 ದಶಕಗಳಿಂದಲೂ ಹಾಸನ ಜಿಲ್ಲೆಯ, ಸಕಲೇಶಪುರ, ಆಲೂರು ತಾಲ್ಲೂಕಿನಲ್ಲಿ  ಕಾಡಾನೆಗಳ ದಾಳಿ ಹೆಚ್ಚಾಗಿದ್ದು, ಇದುವರೆಗೆ ಕಾಡಾನೆ ದಾಳಿಯಿಂದ 72 ಜನರು ಮೃತಪಟ್ಟಿದ್ದು, ಒಂದು ಸಾವಿರ ಕೋಟಿಗೂ ಹೆಚ್ಚು ಪ್ರಮಾಣದ ಬೆಳೆ ಹಾನಿಯಾಗಿದೆ. ಕಾಡಾನೆ ದಾಳಿಗೆ ಕಳೆದ ವಾರವಷ್ಟೇ ಮನು ಎಂಬ ವ್ಯಕ್ತಿ  ಮೃತಪಟ್ಟಿದ್ದರು. ವ್ಯಕ್ತಿಯ ಶವವನ್ನು ಇಟ್ಟು ಅಹೋರಾತ್ರಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನೆಗೆ ಮಣಿದ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳ ತಂಡ ಕಳುಹಿಸುವುದಾಗಿ ಹೇಳಿದ್ದರು. ಮುಖ್ಯಮಂತ್ರಿ ಸೂಚನೆಯಂತೆ ನಿನ್ನೆಯಿಂದ ಹಾಸನ, ಕೊಡಗು, ಭಾಗದಲ್ಲಿ ಅಧ್ಯಯನ್ಕೆ ಅರಣ್ಯ ಇಲಾಖೆ ಮುಖ್ಯಸ್ಥರಾದ ರಾಜಕೀಶೋರ್ ಸಿಂಗ್, ರಂಗರಾವ್. ಜಿ.ವಿ ಸೇರಿದಂತೆ ಎಂಟು ಜನರ ತಂಡವನ್ನು ರಚಿಸಿ ಅಧ್ಯಯನಕ್ಕೆ ಕಳುಹಿಸಲಾಗಿದೆ.

- Advertisement -

Latest Posts

Don't Miss