ಹಾಸನ: ಜಿಲ್ಲೆಯ ಆಲೂರು ತಾಲ್ಲೂಕಿನ ಹಳ್ಳಿಯೂರು ಬಳ್ಳಾರ ಕೊಪ್ಪಲು ಬಳಿ ನಿಂತಿದ್ದ ಕಾಡಾನೆ ಸೆರೆ ಹಿಡಿದು ಚಿಕಿತ್ಸೆ ನೀಡಲು ಮುಂದಾಗಿದ್ದ ಅರಣ್ಯ ಇಲಾಖೆಯು ಅರವಳಿಕೆ ಮದ್ದು ನೀಡಲು ವನ್ಯ ಜೀವಿ ವೈದ್ಯ ವಸೀಂ ಜೊತೆ ತೆರಳಿದ್ದ ವೆಂಕಟೇಶ್ ಆನೆ ಹತ್ತಿರ ಹೋದ ವೇಳೆ ಏಕಾಏಕಿ ಅಟ್ಯಾಕ್ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಅರಣ್ಯ ಸಿಬ್ಬಂದಿ ವೆಂಕಟೇಶ್(66) ಎಂಬುವರು ಸಾವನಪ್ಪಿದ್ದಾರೆ.
ಈ ಹಿಂದೆ ಹತ್ತಾರು ಆನೆ ಸೆರೆ ಮಾಡುವ ವೇಳೆ ಅರವಳಿಕೆ ಮದ್ದು ನೀಡಿದ್ದ ವೆಂಕಟೇಶ್. ಇದುವರೆಗೆ ಮೇಲೂ ಅಟ್ಯಾಕ್ ಮಾಡದೆ ಸೌಮ್ಯ ಸ್ವಭಾವ ಹೊಂದಿದ್ದ ಭೀಮನ ಶೌರ್ಯ ಈಗ ಪ್ರಾಣ ತೆಗೆದುಕೊಂಡಿದೆ. ತಕ್ಷಣ ಸ್ಥಳೀಯ ತುರ್ತು ಚಿಕಿತ್ಸೆ ನೀಡಿ ನಂತರ ಹಾಸನ ನಗರದ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಗಾಯಳು ವೆಂಕಟೇಶ್ ಅವರನ್ನು ಜೀರೋ ಟ್ರಾಫಿಕ್ ಮೂಲಕ ಆಸ್ಪತ್ರೆಗೆ ತರಲಾಯಿತು. ಆದರೇ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದರು.
ಮೃತದೇಹ ನೋಡಲು ಹಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ಬಂದ ಮೃತ ವೆಂಕಟೇಶ್ ಪುತ್ರನಿಂದ ಡಿಎಫ್‌ಓ ಮೋಹನ್‌ಗೆ ತರಾಟೆಗೆ ತೆಗೆದುಕೊಂಡರು. ಇಲಾಖೆಯಲ್ಲಿ ಶಿಸ್ತು ಕ್ರಮ ಇದ್ದಿದ್ದರೆ ಹೀಗೆ ಆಗುತ್ತಿರಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಯಾವುದೇ ಕ್ರಮವಹಿಸಿಲ್ಲ. ೬೬ ವರ್ಷದ ನಮ್ಮ ತಂದೆಯನ್ನು ಕಾರ್ಯಾಚರಣೆಯಲ್ಲಿ ಬಳಸಿದ್ದೀರಿ. ನಮ್ಮ ಅಪ್ಪನನ್ನ ಬಿಟ್ಟು ಬೇರೆ ಯಾರೊಬ್ಬರಿಗೂ ಇಲ್ಲಿಯವರೆಗೆ ತರಬೇತಿ ನೀಡಿಲ್ಲ. ನಿಮ್ಮ ಇಲಾಖೆಯ ನಿರ್ಲಕ್ಷವೇ ನಮ್ಮ ತಂದೆ ಸಾವಿಗೆ ಕಾರಣ ಎಂದು ಆರೋಪಿಸಿದರು. ಇಲ್ಲಿಯವರೆಗೆ ಒಬ್ಬ ಯುವಕನಿಗೂ ಈ ಬಗ್ಗೆ ತರಬೇತಿ ಕೊಟ್ಟಿಲ್ಲ. ಇದು ನಿಮ್ಮ ಅರಣ್ಯ ಇಲಾಖೆಗೆ ನಾಚಿಕೆಗೇಡಿನ ವಿಷಯ. ಇನ್ನು ಮುಂದೆಯಾದ್ರೂ ಸರಿಯಾಗಿ ಕ್ರಮವಹಿಸಿ ಎಂದು ಆಕ್ರೋಶವ್ಯಕ್ತಪಡಿಸಿದ ಘಟನೆ ನಡೆಯಿತು.
ಡಿಎಫ್‌ಓ ಮೋಹನ್ ಮಾಧ್ಯಮದೊಂದಿಗೆ ಮಾತನಾಡಿ, ಆಲೂರು ತಾಲ್ಲೂಕಿನ ಹಳ್ಳಿಯೂರು ಬಳ್ಳಾರ ಕೊಪ್ಪಲುನಲ್ಲಿ ಗಾಯಗೊಂಡ ಕಾಡಾನೆಯೊಂದಕ್ಕೆ ಚಿಕಿತ್ಸೆ ಮಾಡಲು ಅರವಳಿಕೆ ಮದ್ದು ನೀಡಲು ಶೂಟ್ ಮಾಡುವ ಸಮಯದಲ್ಲಿ ನಮ್ಮ ಅರಣ್ಯ ಇಲಾಖೆಯಲ್ಲಿಯೇ ಹಿಂದೆ ಕೆಲಸ ಮಾಡುತ್ತಿದ್ದು, ನಿವೃತ್ತಿ ನಂತರ ಹೊರಗುತ್ತಿಗೆ ಮೇಲೆ ಆನೆ ಓಡಿಸುವ ತಂಡದಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಎನ್ನುವವರ ಮೇಲೆ ದಾಳಿ ನಡೆಸಿದೆ. ಶೂಟ್ ಮಾಡಿದ ತಕ್ಷಣ ಆನೆ ಹಿಂದೆ ತಿರುಗಿ ಅಟ್ಯಾಕ್ ಮಾಡಿ ಗಾಯಗೊಳಿಸಿತು. ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ಬರಲಾಗಿದೆ. ಆದರೇ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆ ಉಸಿರು ಎಳೆದಿದ್ದಾರೆ ಎಂದರು. ಕಾಡಾನೆಗೆ ಗಾಯವಾಗಿ ೧೫ ದಿನಗಳೆ ಕಳೆದಿತ್ತು. ಪಶು ವೈದ್ಯರ ಕರೆಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಆ ಗಾಯ ವಾಸೆ ಆಗಿರಲಿಲ್ಲ. ಮತ್ತೆ ಕೊಡಲು ಮುಂದಾಗಿದ್ದೇವು. ಮದ್ದು ಬರುವ ಶೂಟ್ ಮಾಡುವಾಗ ಈ ಅವಘಡವಾಗಿದೆ ಎಂದು ಮಾಹಿತಿ ನೀಡಿದರು.
LPG Cylinder: ಅಡುಗೆ ಅನಿಲ ದರ ಇಳಿಕೆ ಎನ್ನುವ ಕಣ್ಣೊರೆಸುವ ತಂತ್ರ: ಸಿದ್ದರಾಮಯ್ಯ
Barack obama; ಅಮೆರಿಕ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ದಂಪತಿ ಮಂಡ್ಯ ಭೇಟಿ..!