Monday, December 23, 2024

Latest Posts

Forest-ಅಕ್ರಮ ರೆಸಾರ್ಟ್ ಗಳ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು

- Advertisement -

ಹಾಸನ : ರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮನೆ ಹಾಗೂ ರೆಸಾರ್ಟ್ ನಿರ್ಮಾಣ ಆರೋಪದಡಿ  ದಿಡೀರ್ ದಾಳಿ ನಡೆಸಿದಂತ ಅರಣ್ಯ ಇಲಾಖೆಯ ತಂಡ ರೆಸಾರ್ಟ್ ಹಾಗೂ ಮಾಲೀಕರ ವಾಸದ ಮನೆ ಮೇಲೆ  ದಾಳಿ ನಡೆಸಿ ಬೀಗ ಜಡಿದರು.

ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ, ಅಚ್ಚನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು ಬೆಂಗಳೂರಿನಿಂದ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಹಾಗೂ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದಾರೆ. 30 ಕ್ಕೂ ಹೆಚ್ಚು ಮಂದಿ ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳ ತಂಡದೊಂದಿಗೆ ದಾಳಿ ನಡೆಸಿ ಸ್ಟೋನ್ ವ್ಯಾಲಿ ರೆಸಾರ್ಟ್ ಹಾಗೂ ಮಾಲೀಕರ ವಾಸದ ಮನೆಗೆ ಬೀಗ ಹಾಕಿದರು. ಕಳೆದ ಕೆಲವು ದಿನಗಳ ಹಿಂದಷ್ಟೆ ವನಗೂರು ಸಮೀಪದ ರೆಸಾರ್ಟ್‌ಗೆ ಅರಣ್ಯ ಇಲಾಖೆ ಬೀಗ ಜಡಿದಿದ್ದರು.

ಇದೀಗ ಮತ್ತೆ ದಿಢೀರ್ ಕಾರ್ಯಾಚರಣೆ ‌ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಸಿಸಿ ಟಿವಿ ಸಂಪರ್ಕ ಕಡಿತಗೊಳಿಸಿ ಸಂಪೂರ್ಣವಾಗಿ ರೆಸಾರ್ಟ್ ಪರಿಶೀಲನೆ ನಡೆಸಿ ಬೀಗ ಹಾಕಿದರು. ಅರಣ್ಯ ಇಲಾಖೆ ಅಧಿಕಾರಿಗಳ ದಾಳಿಯಿಂದ ತಮ್ಮ ಕುಟುಂಬ ಹಾಗೂ ಸಿಬ್ಬಂದಿಗಳನ್ನು ರೆಸಾರ್ಟ್ ಮಾಲೀಕರು ಬೇರೆಡೆಗೆ ಸ್ಥಳಾಂತರ ಮಾಡಿದರು. ರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಸುಮಾರು 20 ಕ್ಕೂ ಹೆಚ್ಚು ರೆಸಾರ್ಟ್ ಹಾಗೂ ಹೋಂ ಸ್ಟೇಗಳ.ವಿರುದ್ಧ ಕಾರ್ಯಾಚರಣೆ ನಡೆಸಿ ಬೀಗ ಜಡೆದಿದ್ದಾರೆ.

Siddaramaiah : ದಲಿತರ ಹಿತ ಕಾಪಾಡುವಲ್ಲಿ ರಾಜಿ ಇಲ್ಲ: ಸಿಎಂ ಸಿದ್ದರಾಮಯ್ಯ

HD Kumaraswamy : ಕಾಂಗ್ರೆಸ್ ನಿಂದ ಐಎಎಸ್ ಅಧಿಕಾರಿಗಳ ದುರ್ಬಳಕೆ – ಕುಮಾರಸ್ವಾಮಿ ಗಂಭೀರ ಆರೋಪ

Hairs-ಕೆಲಸ ಮಾಡಲು ಬೇಕಿರುವುದು ಕೂದಲಲ್ಲ ಆಲೋಚನೆಗಳು

- Advertisement -

Latest Posts

Don't Miss