BREAKING NEWS: ರಾಜ್ಯ ರಾಜಕೀಯದಲ್ಲಿ ಮಹತ್ತರ ಸಂಚಲನ: ಮಾಜಿ ಸಿಎಂ ಯಡಿಯೂರಪ್ಪ ರಾಜಕೀಯ ನಿವೃತ್ತಿ ಘೋಷಣೆ

ಶಿವಮೊಗ್ಗ: ರಾಜ್ಯ ರಾಜಕೀಯದಲ್ಲಿ ಮಹತ್ತರ ಸಂಚಲನ ಮೂಡಿಸುವಂತೆ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಹತ್ವರ ಘೋಷಣೆಯನ್ನು ಮಾಡಿದ್ದಾರೆ. ಅದೇ ಇಂದು ಶಿಕಾರಿಪುರದಿಂದ ತಾನು ಸ್ಪರ್ಧಿಸೋದಿಲ್ಲ. ನನ್ನ ಪುತ್ರ ಬಿವೈ ವಿಜಯೇಂದ್ರ ಸ್ಪರ್ಧಿಸಲಿದ್ದಾರೆ. ಆತನಿಗೆ ನನಗೆ ನೀಡಿದಂತೆ ಬೆಂಬಲ ನೀಡುವಂತೆ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಇಂದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ ಮಾತನಾಡಿದಂತ ಅವರು, ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧಿಸುತ್ತಿದ್ದಾನೆ. ನಾನು ಕ್ಷೇತ್ರ ಖಾಲಿ ಮಾಡ್ತಾ ಇರುವುದರಿಂದ ವಿಜಯೇಂದ್ರ ಸ್ಪರ್ಧಿಸ್ತಾರೆ. ಶಿಕಾರಿಪುರದ ಕ್ಷೇತ್ರದಲ್ಲಿ ನನ್ನ ಪುತ್ರ ವಿಜಯೇಂದ್ರ ಸ್ಪರ್ಧಿಸುತ್ತಾನೆ. ಮೈಸೂರು ಭಾಗದಲ್ಲಿ ಪುತ್ರ ಬಿವೈ ವಿಜಯೇಂದ್ರ ಸ್ಪರ್ಧೆಗಿ ಒತ್ತಡವಿದೆ. ಆದ್ರೇ ಇಲ್ಲಿ ಸ್ಥಾನ ತೆರವಾಗುವುದರಿಂದ ವಿಜಯೇಂದ್ರ ಸ್ಪರ್ಧಿಸುತ್ತಾನೆ ಎಂದರು.

ತಾನು ಶಿಕಾರಿಪುರ ಕ್ಷೇತ್ರವನ್ನು ಖಾಲಿ ಮಾಡುತ್ತಿರುವ ಕಾರಣದಿಂದಾಗಿ ಪುತ್ರ ಸ್ಪರ್ಧಿಸಲಿದ್ದಾರೆ. ಶಿಕಾರಿಪುರ ಕ್ಷೇತ್ರದ ಜನತೆ ಬೆಂಬಲ ನೀಡಬೇಕು. ಶಿಕಾರಿಪುರ ಜನತೆ ಆತನಿಗೆ ಬೆಂಬಲಿಸಿ ಬಹಳ ದೊಡ್ಡ ಮತಗಳ ಅಂತರದಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಿಸುವಂತೆ ಜನತೆಯಲ್ಲಿ ಕೋರಿಕೊಂಡರು. ಈ ಮೂಲಕ ತಮ್ಮ ರಾಜಕೀಯ ನಿವೃತ್ತಿಯನ್ನು ಘೋಷಿಸಿದರು.

ಮತ್ತೊಂದೆಡೆ ಈ ಕುರಿತಂತೆ ಮಾತನಾಡಿದಂತ ಅವರ ಪುತ್ರ ಬಿವೈ ವಿಜಯೇಂದ್ರ, ಯಡಿಯೂರಪ್ಪ ಅವರಿಗೆ ನಿವೃತ್ತಿ ಅನ್ನೋದು ಡಿಕ್ಷನರಿಯಲ್ಲಿಯೇ ಇಲ್ಲ. ಅವರು ಸಕ್ರೀಯ ರಾಜಕಾರಣದಲ್ಲಿ ಇರಲಿದ್ದಾರೆ. ನಿವೃತ್ತಿ ಘೋಷಣೆ ಮಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

About The Author