ಗಂಡಸ್ತನ ಪದ ಬಳಕೆ ಬಗ್ಗೆ ವಿಷಾದ ವ್ಯಕ್ತ ಪಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ

ಬೆಂಗಳೂರು: ಮಾತನಾಡುವ ಬರದಲ್ಲಿ ಗಂಡಸ್ತನ ಪದ ಬಳಕೆ ಮಾಡಿದ್ದೇನೆ. ಇದು ಮಾತನಾಡುವ ಆವೇಶದಲ್ಲಿ ಬಂದ ಪದವಾಗಿದೆ. ಇದರಿಂದ ಬೇಸರವಾಗಿದ್ದರೇ ವಿಷಾದ ವ್ಯಕ್ತ ಪಡಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಇಂದು ಮಾತನಾಡಿದಂತ ಅವರು, ಹಿಂದೂ ಸಂಘಟನೆಗಳಿಗೆ ಶಾಂತಿ ಬೇಕಿಲ್ಲ ಎಂಬುದಾಗಿ ಕಿಡಿಕಾರಿದ ಅವರು, ಈ ವಿವಾದ ಹುಟ್ಟು ಹಾಕುತ್ತಿರೋ ಒಬ್ಬರ ಮೇಲಾದ್ರೂ ಕ್ರಮ ಕೈಗೊಂಡಿದ್ದೀರಾ ಎಂಬುದಾಗಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಾನು ಗಂಡಸ್ತನ ಹೇಳಿಕೆಯನ್ನು ಮಾತಿನ ಬರದಲ್ಲಿ ಹೇಳಿದ್ದೇನೆ. ಆವೇಶದಲ್ಲಿ ಆಡಿದಂತ ಮಾತು ಅದಾಗಿದೆ. ಅದರಿಂದ ಯಾರಿಗಾದ್ರೂ ನೋವಾಗಿದ್ದರೇ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ.

About The Author