Wednesday, May 7, 2025

Latest Posts

ಮುತ್ತಪ್ಪ ರೈ ಪುತ್ರನ ಮೇಲೆ ಫೈರಿಂಗ್‌ : ಮಾಜಿ ಡಾನ್‌ ಮಗನ ಕೊಲೆ ಸಂಚಿಗೆ ಇದೆ ಕಾರಣ..?

- Advertisement -

ಬೆಂಗಳೂರು : ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ತಡರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದ್ದು, ಬೆಂಗಳೂರು ಬೆಚ್ಚಿ ಬಿದ್ದಿದೆ. ಇನ್ನೂ ರಾಮನಗರ ಬಿಡದಿಯಲ್ಲಿರುವ ಅವರ ನಿವಾಸದ ಎದುರು ರಿಕ್ಕಿ ರೈ ಮೇಲೆ ಅಟ್ಯಾಕ್‌ ಮಾಡಲಾಗಿದ್ದು, ಗಂಭೀರ ಗಾಯಗೊಂಡಿರುವ ಮಾಜಿ ಡಾನ್‌ ಪುತ್ರನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೂ ರಾತ್ರಿ 11.30ರ ಸುಮಾರಿಗೆ ಮನೆಯಿಂದ ಬೆಂಗಳೂರಿನತ್ತ ಹೊರಡುತ್ತಿದ್ದ ರಿಕ್ಕಿ ಕಾರಿನಲ್ಲಿ ರಿಕ್ಕಿ ರೈ ಇದ್ದರು. ಅಲ್ಲದೆ ಕಾರು ಇನ್ನೇನು ಕಂಪೌಂಡ್‌ ದಾಟಿತು ಅನ್ನೋವಷ್ಟರಲ್ಲಿಯೇ ಎದುರುಗಿನ ಕಂಪೌಂಡ್‌ನಲ್ಲಿ ಅಡಗಿಕೊಂಡಿದ್ದ ದುಷ್ಕರ್ಮಿಗಳು ನೇರವಾಗಿ ರಿಕ್ಕಿ ರೈ ಅವರನ್ನು ಟಾರ್ಗೆಟ್‌ ಮಾಡಿ ಗುಂಡು ಹಾರಿಸಿದ್ದಾರೆ. ಆದರೆ ಪ್ರತಿ ಸಲ ಕಾರು ಚಲಾಯಿಸುತ್ತಿದ್ದ ರೈ ಆಗ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡಿದ್ದರು. ಗುಂಡು ಕಾರು ಬಾಗಿಲನ್ನು ಸೀಳಿ ನೇರವಾಗಿ ಚಾಲಕನ ಬೆನ್ನ ಹಿಂದೆ ಹಾಯ್ದು ಡ್ರೈವರ್‌ ಸೀಟ್‌ನಲ್ಲಿ ಹೊಕ್ಕಿದೆ. ಈ ವೇಳೆ ಚಾಲಕನ ಬೆನ್ನಿಗೆ ಹಾಗೂ ರಿಕ್ಕಿ ರೈ ಮುಖಕ್ಕೆ, ಮೂಗಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಿಡದಿ ಠಾಣೆಯಲ್ಲಿ ರಿಕ್ಕಿ ರೈ ಕಾರು ಚಾಲಕ ಬಸವರಾಜ್ ಅವರು ಮೂವರ ವಿರುದ್ಧ ದೂರು ನೀಡಿದ್ದಾರೆ. ರಿಕ್ಕಿ ರೈ ಮೊದಲ ಪತ್ನಿ ಅನ್ನಪೂರ್ಣ, ರಾಕೇಶ್ ಮಲ್ಲಿ ಹಾಗೂ ನಿತೇಶ್ ಎಸ್ಟೇಟ್ ಕಂಪನಿ ವಿರುದ್ಧ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇನ್ನೂ ಇದೇ ವಿಚಾರಕ್ಕೆ ಮಾಹಿತಿ ನೀಡಿರುವ ರಾಮನಗರ ಎಸ್‌ಪಿ ಶ್ರೀನಿವಾಸ ಗೌಡ, ತಡಾರಾತ್ರಿ ರಿಕ್ಕಿ ರೈ ಅವರು ಮನೆಯಿಂದ ಹೊರಡುವ ವೇಳೆ ಈ ಘಟನೆ ನಡೆದಿದೆ. ಇದರಲ್ಲಿ ನಾವು ಮೇಲ್ನೋಟಕ್ಕೆ ಗಮನಿಸಿದಾಗ ಒಂದು ಸುತ್ತಿನ ಫೈರಿಂಗ್‌ ನಡೆದಿರುವ ಶಂಕೆಯಿದೆ. ಇನ್ನೂ ಈ ಘಟನೆಯಲ್ಲಿ ರಿಕ್ಕಿ ರೈ ಅವರಿಗೆ ತೀವ್ರ ಗಾಯವಾಗಿದ್ದು, ಹಾಗೂ ಅವರ ಜೊತೆಗಿದ್ದ ಒಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಕುರಿತು ಎಫ್‌ಎಸ್‌ಎಲ್‌ ಮಾಹಿತಿಯ ವರದಿ ಮತ್ತಷ್ಟು ಮಾಹಿತಿ ಗೊತ್ತಾಗಲಿದೆ. ಸದ್ಯ ಆರೋಪಿಗಳಿಗಾಗಿ ತನಿಖೆ ಚುರುಕುಗೊಳಿಸಲಾಗಿದೆ. ರಾಮನಗರ ಜಿಲ್ಲಾ ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲು ತೀವ್ರ ಕಾರ್ಯಾಚರಣೆ ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ

ಆರೋಪಿಗಳ ಬಲೆಗೆ ಎಸ್‌ಪಿ ನೇತೃತ್ವದ ನೇತೃತ್ವದ ತಂಡ..

ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ನೇತೃತ್ವದಲ್ಲಿ ರಿಕ್ಕಿ ರೈ ಮೇಲಿನ ಫೈರಿಂಗ್ ಪ್ರಕರಣದ ಆರೋಪಿಗಳ ಪತ್ತೆಗಾಗಿ ಐದು ತಂಡಗಳನ್ನು ರಚಿಸಲಾಗಿದೆ. ತಡರಾತ್ರಿ 1 ಗಂಟೆ ಸುಮಾರಿಗೆ ಬಿಡದಿಯ ಫಾಮ್‌ಹೌಸ್‌ನಿಂದ ಪಬ್‌ಗೆ ತೆರಳಲು ಹೊರಬಂದ ರಿಕ್ಕಿ ರೈ, ಅವರ ಗನ್‌ಮ್ಯಾನ್ ಮತ್ತು ಡ್ರೈವರ್ ಮೇಲೆ ಶಾರ್ಪ್ ಶೂಟರ್‌ಗಳು ಗುಂಡಿನ ದಾಳಿ ನಡೆಸಿದ್ದಾರೆ. ಪೊಲೀಸರು ಡ್ರೈವರ್ ಮತ್ತು ಗನ್‌ಮ್ಯಾನ್ ಬಳಿ ಹೇಳಿಕೆ ದಾಖಲಿಸಿ, ದಾಳಿಯ ಸಂಖ್ಯೆ, ಆಗಮನದ ವಿಧಾನ ಸೇರಿದಂತೆ ಮಾಹಿತಿ ಕಲೆಹಾಕಿದ್ದಾರೆ. ತಂಡ 1 ಶೂಟರ್‌ಗಳು ಬಂದ ರಸ್ತೆಯ ಸಿಸಿಟಿವಿ ಪರಿಶೀಲಿಸುತ್ತಿದ್ದರೆ, ತಂಡ 2 ಫಾಮ್‌ಹೌಸ್ ಬಳಿಯ ಸಿಡಿಆರ್ ಸಂಗ್ರಹಿಸುತ್ತಿದೆ. ತಂಡ 3 ರಿಕ್ಕಿ ರೈ ಮೇಲೆ ಹಳೇ ದ್ವೇಷ ಹೊಂದಿರುವವರನ್ನು ಪತ್ತೆ ಮಾಡುತ್ತಿದ್ದು, ತಂಡ 4 ಕುಟುಂಬಸ್ಥರ ಬಳಿ ಮಾಹಿತಿ ಕಲೆಹಾಕುತ್ತಿದೆ. ತಂಡ 5 ಸ್ಥಳದಲ್ಲಿ ಬೀಡುಬಿಟ್ಟು ಮಾನಿಟರಿಂಗ್ ನಡೆಸುತ್ತಿದೆ

ಮಾಜಿ ಡಾನ್‌ ಸಹಚರರ ಮೇಲೆ ಅನುಮಾನ..?

ಇನ್ನೂ ರಿಕ್ಕಿ ರೈ ಮೇಲಿನ ಫೈರಿಂಗ್‌ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ದಾಳಿಯ ಹಿಂದೆ ಶಾರ್ಪ್ ಶೂಟರ್‌ಗಳನ್ನು ಬಳಸಿಕೊಂಡು ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಘಟನೆಯಲ್ಲಿ ಈ ಹಿಂದೆ ಮುತ್ತಪ್ಪ ರೈ ಅವರ ಆಪ್ತ ಬಳಗದಲ್ಲಿದ್ದ ಮಂಗಳೂರು ಮೂಲದ ಮಿಥುನ್ ರೈ ಅವರ ಪಾತ್ರದ ಬಗ್ಗೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಮುತ್ತಪ್ಪ ರೈ ಅವರ ರೈಟ್ ಹ್ಯಾಂಡ್ ಆಗಿ ಅನೇಕ ವರ್ಷಗಳ ಕಾಲ ಕೆಲಸ ಮಾಡಿದ್ದ ಮಿಥುನ್ ರೈ, ಆಸ್ತಿ ವಿಚಾರದಲ್ಲಿ ಉಂಟಾದ ಗಲಾಟೆಯಿಂದಾಗಿ ಅವರಿಂದ ದೂರವಾಗಿದ್ದರು. ಹೀಗಾಗಿ ಮಿಥುನ್ ರೈ ಮೇಲೂ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದು, ಈ ದಾಳಿಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ.

ಅಲ್ಲದೆ ರಿಕ್ಕಿ ರೈ ಮೇಲೆ ನಡೆದಿರೋದು ಮಿಸ್ ಪೈರಿಂಗಾ? ರಿಕ್ಕಿ ರೈ ತೋಟದ ಮನೆ ಸೆಕ್ಯೂರಿಟಿ ಗಳು ಶಾಟ್ ಗನ್ ಬಳಸುತ್ತಾರಂತೆ. ರಿಕ್ಕಿ ರೈ, ಸೆಕ್ಯೂರಿಟಿ ಅಥವಾ ಅಂಗ ರಕ್ಷಕರಿಂದಲೇ ಮಿಸ್ ಫೈರ್ ಶಂಕೆ ವ್ಯಕ್ತವಾಗಿದೆ. ಪ್ರೊಫೆಷನಲ್ ಶೂಟರ್ ಹತ್ಯೆಗೆ ಸ್ಟನ್ ಗನ್ ಅಥವಾ ರಿವಾಲ್ಚಾರ್ ಬಳಸೋದೆ ಹೆಚ್ಚು. ಆದ್ರೆ ಶಾಟ್ ಗನ್ ನಲ್ಲಿ ರಿಕ್ಕಿ ರೈ ಫೈರಿಂಗ್ ನಡೆದಿದೆ. ಇದೇ ಪೊಲೀಸ್ರಿಗೆ ಸಾಕಷ್ಟು ಅನುಮಾನ ಹುಟ್ಟಿಸಿದೆ. ಶಾಟ್ ಗನ್ ನಲ್ಲಿ ಸೆಪ್ಟಿ ಕಡಿಮೆ ಇರುತ್ತೆ. ಶಾಟ್ ಗನ್ ನಲ್ಲಿ ಪೈರಿಂಗ್ ರೇಂಜ್ ಕೂಡ ತುಂಬಾ ಕಡಿಮೆ ಇರುತ್ತೆ. ಶಾಟ್ ಗನ್ ಬುಲೆಟ್ ನಲ್ಲಿ ಸಣ್ಣ ಸಣ್ಣ ಬಾಲ್ಸ್ ಬಳಕೆ ಮಾಡಲಾಗುತ್ತೆ. ಇದ್ರಿಂದ ದೂರ ಗುಂಡು ಹೋದಂತೆ ಸಣ್ಣ ಸಣ್ಣ ಗುಂಡುಗಳ ಚದರುತ್ತೆ. ಇದ್ರಿಂದ ಪ್ರಾಣಕ್ಕೆ ಹಾನಿಯಾಗೋ ಸಾಧ್ಯತೆ ತೀರಾ ಕಡಿಮೆ. ಇದೇ ಕಾರಣಕ್ಕೆ ರಿಕ್ಕಿ ರೈ ಬುಜ ಹಾಗು ಮೂಗಿಗೆ ಗಾಯವಾಗಿರೋದು. ಇದೇ ಪೊಲೀಸ್ರ ಅನುಮಾನಕ್ಕೆ ಕಾರಣಚಾಗಿರೋದು. ಇದು ಪ್ರೊಫೆಷನಲ್ ಶೂಟರ್ ಮಾಡಿರಿವ ಬದಲು ಸೆಕ್ಯುರಿಟಿ ಮಿಸ್ ಫೈರ್ ಆಗಿರೋ ಶಂಕೆ ವ್ಯಕ್ತವಾಗಿದೆ. ಸದ್ಯ ಈ ಆಯಾಮದಲ್ಲೂ ಬಿಡದಿ ಪೊಲೀಸರು, ತನಿಖೆ ಮುಂದುವರಿಸಿದ್ದಾರೆ.

ರಿಯಲ್‌ ಎಸ್ಟೇಟ್‌ ಮಾಫಿಯಾ ನಂಟಿನ ವಾಸನೆ..?

ಮಾಜಿ ಡಾನ್ ಮುತ್ತಪ್ಪ ರೈ ಪುತ್ರನ ಮೇಲೆ ಫೈರಿಂಗ್ ಮಾಡಿದ್ದು ಯಾರು, ಯಾಕೆ ಎನ್ನುವ ಪ್ರಶ್ನೆ ಮೂಡಿದೆ. ರಿಕ್ಕಿ ರೈ ಸಾಕಷ್ಟು ರಿಯಲ್ ಎಸ್ಟೇಟ್ ಡೀಲಿಂಗ್‌ ನಡೆಸುತ್ತಿದ್ದು, ಸಂಚಿನ ಹಿಂದೆ ರಿಯಲ್‌ ಎಸ್ಟೇಟ್‌ ಮಾಫಿಯಾ ಇರುವ ಶಂಕೆ ಮೂಡಿದೆ. ಜಮೀನು ವಿಚಾರಕ್ಕೆ ಈ ಹಿಂದೆ ಕೆಲವು ವಿವಾದಗಳಾಗಿದ್ದವು. ಪ್ರತಿಸ್ಪರ್ಧಿಗಳ ಮೇಲೂ ಶಂಕೆ ಇದೆ. ಶೂಟಿಂಗ್ ಆರೋಪಿ ಪತ್ತೆಗೆ ಸ್ಪೆಷಲ್ ಟೀಂ ರಚನೆಯಾಗಿದ್ದು, ನಾಲ್ಕು ವಿಶೇಷ ತಂಡಗಳಿಂದ ಕಾರ್ಯಾಚರಣೆ ನಡೆಯುತ್ತಿದೆ. ರಿಯಲ್ ಎಸ್ಟೇಟ್ ವ್ಯವಹಾರ, ಹಳೇ ದ್ವೇಷ, ತಂದೆ ಮೇಲಿನ ವೈಷಮ್ಯ, ಹಣಕಾಸು ವಿಚಾರಗಳು ಸೇರಿ ಹಲವು ಆಯಾಮಗಳಲ್ಲಿ ತನಿಖೆ ನಡೆಯಲಿದೆ. ಆರೋಪಿಗಳು ಸಾಕಷ್ಟು ಪ್ಲಾನ್ ಮಾಡಿ ಹೊಂಚು ಹಾಕಿ ಕಾದು ಕುಳಿತಿದ್ದರು. ಸ್ಥಳದಲ್ಲೇ ಬೇಸಿಕ್ ಮೊಬೈಲ್ ಫೋನ್ ಸಿಕ್ಕಿದೆ. ಅದರ ಟೆಕ್ನಿಕಲ್ ಅನಾಲಿಸಿಸ್ ನಡೆಸಲಾಗುತ್ತಿದೆ. ಅಲ್ಲದೆ ಇದೊಂದು ಹೈ ಪ್ರೊಫೈಲ್‌ ಕೇಸ್‌ ಆಗಿದ್ದು, ಪೊಲೀಸರು ಎಳೆಎಳೆಯಾಗಿ ಇದರ ಕುರಿತು ತನಿಖೆಗಿಳಿದು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಬಂಧಿಸುವ ವಿಶ್ವಾಸದಲ್ಲಿ ಖಾಕಿ ಪಡೆ ಇದೆ.

- Advertisement -

Latest Posts

Don't Miss